vijayapur

ಪರಿಷ್ಕೃತ ದರಗಳ ಕರಡು ಯಾದಿ ಪ್ರಕಟ : ಆಕ್ಷೇಪಣೆಗಳಿಗೆ ಅವಕಾಶ


ವಿಜಯಪುರ : ನ.೧೬ (ಕ.ವಾ) : ಕರ್ನಾಟಕ ಮುದ್ರಾಂಕ ಕಾಯ್ದೆಯ ಮಾರುಕಟ್ಟೆ ದರಗಳನ್ನು ಅಂದಾಜು ಮಾಡುವ, ಪ್ರಕಟಿಸುವ ಮತ್ತು ಪರಿಷ್ಕರಿಸುವ ನಿಯಮಗಳು ೨೦೦೩ ರ ನಿಯಮ ೪ (೧) ರ ಪ್ರಕಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ೨೦೨೧-೨೨ ನೇ ಸಾಲಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಶೇಕಡಾ ೧೦ ರಿಂದ ೧೨ ರ ವರೆಗೆ ಹೆಚ್ಚಿಸಿ, ಪರಿಷ್ಕರಿಸಲಾಗಿದ್ದು, ಈ ಪರಿಷ್ಕೃತ ದರಗಳ ಕರಡು ಯಾದಿಯನ್ನು ದಿನಾಂಕ:೧೫-೧೧-೨೦೨೧ ರಂದು ಪ್ರಕಟಿಸಲಾಗಿದೆ ಎಂದು ಮುದ್ದೇಬಿಹಾಳ ಮೌಲ್ಯಮಾಪನ ಉಪಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಉಪನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಅದರಂತೆ ಈ ಕರಡು ಯಾದಿ ಮುದ್ದೇಬಿಹಾಳ ತಾಲೂಕಿನ ಕೆಲವು ಪ್ರಮುಖ ಸರಕಾರಿ ಕಛೇರಿಗಳಲ್ಲಿ ಮಾಹಿತಿಗಾಗಿ ಲಭ್ಯವಿದೆ. ಸಾರ್ವಜನಿಕರು ಈ ವಿಷಯಕ್ಕೆ ತಮ್ಮ ಸಲಹೆ ಸೂಚನೆ ಮತ್ತು ಆಕ್ಷೇಪಣೆಗಳೇನಾದರು ಇದ್ದಲ್ಲಿ ಲಿಖಿತ ರೂಪದಲ್ಲಿ ಈ ಅಧಿಸೂಚನೆ ಹೊರಡಿಸಿದ ೧೫ ದಿನಗಳೊಳಗಾಗಿ ಉಪನೋಂದಣಾಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪ ಸಮಿತಿ, ಮುದ್ದೇಬಿಹಾಳ ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply