Belagavi

ಶ್ರೀ ಕ್ಷೇತ್ರ ಗುರ್ಲಹೊಸೊರಿನ ನಲ್ಲಿ ಚಿದಂಬರ ಮಹಾಸ್ವಾಮಿಯಗಳ ಶೈವಾಗಮೋಕ್ತ ರಥೋತ್ಸವ ಮತ್ತು ಜನ್ಮೋತ್ಸವ ಆಚರಣೆ


ಸವದತ್ತಿ: ೧೭ ಶ್ರೀ ಕ್ಷೇತ್ರ ಗುರ್ಲಹೊಸುರಿನ ಚಿದಂಬರೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಚೀದಂಬರೇಶ್ವರರ ಶೈವಾಗ ಮೋಕ್ತ ರಥೋತ್ಸವದ ಕಾರ್ಯಕ್ರಮಗಳು ದಿನಾಂಕ ೨೦/೧೧/೨೦೨೧ ರಿಂದ ೨೭/೧೧/೨೦೨೧ ರವರೆಗೆ ನಡೆಯಲಿದೆ
ಈ ವರ್ಷ ನಡೆಯುವ ೨೦೨ನೇ ಶೈವಾಗಮೋಕ್ತ ಉತ್ಸವವು ಶ್ರೀ ಮನೃಪ ಶಾಲಿವಾಹನ ಶಕೆ ೧೯೪೩ ಶ್ರೀ ಪ್ಲವನಾಮ ಸಂತ್ಸರ ಕಾರ್ತಿಕ ಬಹುಳ ಪ್ರತಿಪದ ಶನಿವಾರ ೨೦/೧೧/೨೦೨೧ ರಿಂದ ವಿಧಾನೊಕ್ತವಾಗಿ ಪ್ರಾರಂಭವಾಗಿ ಕಾರ್ತಿಕ ಬಹುಳ ಅಷ್ಟಮಿ ಶನಿವಾರ ೨೭/೧೧/೨೦೨೧ ರವರೆಗೆ ಜರಗುತ್ತದೆ. ಕಾರ್ತಿಕವದ್ಯ ಷಷ್ಟಿ ಗುರುವಾರ ದಿನಾಂಕ ೨೫/೧೧/೨೦೨೧ ರಂದು ಚೀದಂಬರೇಶ್ವರ ೨೬೩ ಜಯಂತಿ ಕಲ್ಯಾಣೋತ್ಸವ ಹಾಗೂ ಮಹಾರಥೋತ್ಸವವು ಜರಗುತ್ತದೆ
ದೇವಸ್ಥಾನದಲ್ಲಿ ಕಾರ್ಯಕ್ರಮಗಳ ಜೊತೆಗೆ ಉತ್ಸವದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪ್ರತಿದಿನ ಬೆಳೆಗ್ಗೆ ೫-೩೦ ರಿಂದ ಕಾಕಡಾರತಿ ಪಂಚಾಮೃತ ರುದ್ರಾಭಿಷೇಕ ನೈವೆದ್ಯ ಮಹಾಮಂಗಳಾರತಿ. ಚಿದಂ¨ರ ಚಿರಿತ್ರೆ ಪಾರಾಯಣ. ಸಾಯಂಕಾಲ ಧೂಪಾರತಿ . ಪೂಜೆ ವಾಹನೊತ್ಸವ ಅಷ್ಠಾವಧಾನ ಸೇವೆ. ಮಹಾಮಂಗಳಾರತಿ. ಅನ್ನಸಂತರ್ಪಣೆ.ಜರಗುವುದು
ಶ್ರೀ ಮಾರ್ತಾಂಡ ಸೂಮಯಾಜಿ ಯಜ್ಞಮಂಟಪದಲ್ಲಿ ೭ ದಿನಗಳ ಪರ್ಯಂತ ಪ್ರತಿನಿತ್ಯ ಬೆಳಿಗ್ಗೆ ೬ ರಿಂದ ಮಹಾಪೂಜೆ . ಮೂಲಮಂತ್ರ ಜಪ. ನಿತ್ಯಹೊಮ. ಪಂಚಪಕ್ವಾನ್ನ ನೈವೆದ್ಯ ಆರತಿ. ಶೈವಾಗಮೋಕ್ತ ಹೊಮ ಹವನ ಚತುರ್ವೇದ ಪಾರಾಯಣ. ೨ವೇಳೆ ಬಲಿಹರಣ . ಪಾಲಕಿ ಸೇವೆ.ವಾಹನೋತ್ಸವ. ಮಂಗಳಾರತಿ ಜರಗುವುದು ಎಂದು ದೇವಸ್ಥಾನದ ಧರ್ಮಾಧಿಕಾರಿಗಳಾದ ದಂಡಪಾಣಿ ದಿಕ್ಷಿತರು ತಿಳಿಸಿದ್ದಾರೆ.


Leave a Reply