Belagavi

ದ್ವೈವಾರ್ಷಿಕ ಚುನಾವಣೆ-2021 ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಒಪ್ಪಿಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಸೂಚನೆ


ಬೆಳಗಾವಿ: ವಿಧಾನಪರಿಷತ್ ಚುನಾವಣೆ ಡಿಸೆಂಬರ್ 10 ರಂದು ಘೋಷಣೆಯಾಗಿದ್ದು, ಡಿಸೆಂಬರ್ 16 ರವರೆಗೆ ಸದಾಚಾರ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಜಮಾ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಆರ್. ವೆಂಕಟೇಶ ಕುಮಾರ ಅವರು ಸೂಚನೆ ನೀಡಿದ್ದಾರೆ.

ಚುನಾವಣೆಯ ಸಮಯದಲ್ಲಿ ಆಯುಧ ಲೈಸೆನ್ಸುದಾರರು ಆಯುಧಗಳೊಂದಿಗೆ ಓಡಾಡುವುದರಿಂದ ಶಾಂತಿಭಂಗ ಆಗಬಹುದು ಅಥವಾ ಲೈಸೆನ್ಸುದಾರರು ಆಯುಧಗಳು ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ. ಚುನಾವಣೆಯ ಸಮಯದಲ್ಲಿ ಶಾಂತಿ ಭಂಗವಾಗದಂತೆ ನೋಡಿಕೊಳ್ಳುವುದು ಅವಶ್ಯ ವಿರುವುದರಿಂದ ಆದೇಶವನ್ನು ಹೊರಡಿಸಲಾಗಿದೆ.

ರಾಷ್ಟ್ರೀಕೃತ ಅಥವಾ ಸಂಸ್ಥೆಯ ಬ್ಯಾಂಕಗಳಿಗೆ, ಸೆಕ್ಯುರಿಟಿ ಏಜೆನ್ಸಿಗಳು, ಯಾವುದೇ ಸಂಸ್ಥೆಗಳಿಗೆ ಸೆಕ್ಯೂರಿಟಿ ಸೇವೆಗಳನ್ನು ನೀಡುವ ಗಾರ್ಡ್ ಗಳು, ಖಾಸಗಿ ಗನ್ ಮ್ಯಾನ್ ಗಳು, ಶಸ್ತ್ರಾಸ್ತ್ರ ಜಮಾ ಮಾಡುವುದರಿಂದ ವಿನಾಯಿತಿಯನ್ನು ಪಡೆದುಕೊಳ್ಳಬಹುದು.

ಸದರಿ ಆದೇಶ ಉಲ್ಲಂಘಿಸಿದವರನ್ನು ಭಾರತೀಯ ಶಸ್ತ್ರಾಸ್ತ್ರಗಳ ಕಾಯ್ದೆ 1959ರಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳಾದ ಆರ್. ವೆಂಕಟೇಶ ಕುಮಾರ ಆದೇಶದಲ್ಲಿ ತಿಳಿಸಿದ್ದಾರೆ.


Leave a Reply