Belagavi

ವಿಧಾನಪರಿಷತ ಚುನಾವಣೆಯಲ್ಲಿ ಕಾಂಗ್ರೇಸ್‌ಗೆ ಜಯ : ಸತೀಶ ಜಾರಕಿಹೊಳಿ


ಸವದತ್ತಿ: ೧೯ ನಡೆದಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಕಾಂಗ್ರೇಸ ಪಕ್ಷದ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಯವರ ಆಯ್ಕೆ ನಿಸ್ಚಿತ ಎಕೆಂದರೆ ಕಳೇದ ಲೋಕಸಭಾ ಚುನಾವಣೆಯಲ್ಲಿ ಸವದತ್ತಿ ತಾಲೂಕಿನ ಜನರು ನನಗೆ ಮತನಿಡಿ ಆಶಿರ್ವದಿಸಿ ಕಾಂಗ್ರೇಸ ಪಕ್ಷಕ್ಕೆ ಬೆಂಬಲ ನಿಡಿದ್ದಾರೆ. ಆದ್ದರಿಂದ ಸವದತ್ತಿ ತಾಲೂಕಿನಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆ ಹಿಡಿದು ಮುಂಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೇಸ ಪಕ್ಷ ಜಯಸಾಧಿಸಲಿದೆ ಎಂದು ಸತೀಶ ಜಾರಕೀಹೊಳಿ ಹೇಳಿದರು
ಅವರು ಸವದತ್ತಿ ಪಟ್ಟಣದ ಹತ್ತಿರದ ನೀಕ್ಕಮ್ ಮಂಗಲಕಾರ್ಯಾಲಯದಲ್ಲಿ ಕಾಂಗ್ರೇಸ ಪಕ್ಷದ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು
ಇದಕ್ಕೂ ಪೂರ್ವದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಲಕ್ಷಿö್ಮÃ ಹೇಬ್ಬಾಳಕರ ಸತೀಶ ಜಾರಕೀಹೊಳಿ ಅಣ್ಣನವರು ಆಶಿರ್ವಾದಿಸಿ ನನ್ನ ತಮ್ಮ ಚನ್ನರಾಜ ಹಟ್ಟಿಹೊಳಿ ಯವರನ್ನ ಗೇಲ್ಲಿಸಲು ಜಿಲ್ಲೆಯಲ್ಲಿ ಮತ್ತೆ ಕಾಂಗ್ರೇಸ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮಪಟ್ಟು ಕೇಲಸ ಮಾಡುತ್ತಿದ್ದಾರೆ. ಅದರಂತೆ ನಾನೂ ಕೊಡಾ ತಾಯಿ ರೇಣುಕಾ ಮಾತೆಯ ಆಶಿರ್ವಾದ ಪಡೆದುಕೊಂಡು ಪ್ರಚಾರ ಸಭೆಗಳನ್ನು ಮಾಡಿ ಕಾರ್ಯಕರ್ತರ ಸಭೆ ಮಾಡಿ ಮತಯಾಚನೆ ಮಡುತ್ತಿದ್ದೆನೆ ಎಂದರು
ನAತರ ಕಾಂಗ್ರೇಸ ಪಕ್ಷದ ಮುಖಂಡ ವಿಶ್ವಾಸ ವೈದ್ಯ ಮಾತನಾಡಿ ಇದೇ ತಿಂಗಳು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಕಾಂಗ್ರೇಸ ಪಕ್ಷ ಜಯಸಾಧಿಸಲಿದೆ. ಸವದತ್ತಿ ತಾಲೂಕಿನಲ್ಲಿಯೂ ಸಹ ಈ ಬಾರಿ ಕಾಂಗ್ರೆಸ ಪಕ್ಷ ಜಯಸಾಧಿಸಲಿದೆ ಎಂದು ಮಾತನಾಡಿದರು
ಈ ಸಂಧರ್ಬದಲ್ಲಿ ಕಾಂಗ್ರೇಸ ಪಕ್ಷದ ಮುಖಂಡರಾದ ರಾಹೂಲ ಜಾರಕೀಹೊಳಿ ರವೀಂದ್ರ ಯಲಿಗಾರ. ವಿನಯ ನಾವಲಗಟ್ಟಿ. ಸೌರಭ ಚೋಪ್ರಾ. ಎಮ್ ಬಿ ಸವದತ್ತಿ ಮಾಜಿ ಶಾಸಕರಾದ ಆರ್ ವಿ ಪಾಟೀಲ. ಬಸವರಾಜ ಗುರಣ್ಣವರ.ಮಹಾರಾಜಗೌಡಾ ಪಾಟೀಲ. ಪಂಚನಗೌಡಾ ದ್ಯಾಮನಗೌಡರ. ಮಲ್ಲು ಜಕಾತಿ ಡಿ ಡಿ ಟೊಪೊಜಿ. ಕೆ ಕೆ ಪುಣೇದ. ಜಿ ಪಂ ಸದಸ್ಯರಾದ ಎಮ್ ಎಸ್ ಹಿರೇಕುಂಬಿ.ಮತ್ತು ಎಪ್ ಡಿ ಹದ್ದಣ್ಣವರ. ಸೇರಿದಂತೆ ಇನ್ನೂ ಅನೇಕ ಪಕ್ಷದ ಮುಖಂಡರು ವೇದಿಕೆಮೇಲೆ ಉಪಸ್ಥಿತರಿದ್ದರು


Leave a Reply