Belagavi

ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲು ಸ್ಥಳ ಪರಿಶೀಲನೆ ನಡೆಸಿದ ಶಾಸಕ ಅನಿಲ ಬೆನಕೆ


ಬೆಳಗಾವಿ: ದಿ ೧೯ ರಂದು ಬೆಳಗಾವಿಯ ರಾಮತೀರ್ಥ ನಗರ, ಸಾಗರ ಕಾಲೋನಿ, ಸಮರ್ಥ ನಗರ ಹಾಗೂ ಕಣಬರ್ಗಿಯ ವಿವಿಧಡೆ ಶಾಸಕ ಅನಿಲ ಬೆನಕೆ ರಹವಾಸಿಗಳು ಹಾಗೂ ನಗರಸೇವಕರೊಂದಿಗೆ ಭೇಟಿ ನೀಡಿ ರಸ್ತೆ, ಗಟಾರು, ಬೀದಿದೀಪ, ಒಳಚರಂಡಿ ಹಾಗೂ ಇನ್ನಿತರ ಸಮಸ್ಯೆಗಳಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ಜನರ ಬೇಡಿಕೆಗಳ ಪ್ರಕಾರ ಶೀಘ್ರದಲ್ಲೆ ಎಲ್ಲಾ ಕಾಮಗಾರಿಗಳನ್ನು ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ, ಬುಡಾ, ಪಿ.ಡಬ್ಲೂö್ಯ.ಡಿ. ಹಾಗೂ ಮಹಾನಗರಪಾಲಿಕೆಯ ಅನುದಾನದಡಿ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸೇವಕರಾದ ಹನುಮಂತ ಕೊಂಗಾಲಿ, ಮುರಗೇಂದ್ರಗೌಡಾ ಪಾಟೀಲ, ಭೈರಗೌಡಾ ಪಾಟೀಲ ಹಾಗೂ ರಾಹುಲ ಮುಚಂಡಿ, ಇಂದ್ರಜೀತ ಪಾಟೀಲ, ನಾರಾಯನ ಸಾವಂತ, ವಿಲಾಸ ಕೆರುರ, ನವೀನ ಹಿರೇಮಠ, ಮೃತ್ಯುಂಜಯ, ಕೌಜಲಗಿ, ಕುರಬೆಟ, ಕೆದಾರ ಜೋರಾಪೂರ, ಶಶಿ ಬಾರಕರ, ಸಂತೋಷ ಜುಮನಾಳ, ಸಂತೋಷ ದೇಸಾಯಿ ಹಾಗೂ ರಹಿವಾಸಿಗಳು ಉಪಸ್ಥಿತರಿದ್ದರು.


Leave a Reply