vijayapur

ಉಚಿತ ಸಮುದಾಯ ಲಸಿಕೆ ಅಭಿಯಾನ


ವಿಜಯಪುರ : ನ.೧೯ : ಜಿಲ್ಲೆಯಲ್ಲಿ ದಿನಾಂಕ : ೧೫/೧೧/೨೦೨೧ ರಿಂದ ೨೦/೧೧/೨೦೨೧ ರ ವರೆಗೆ ವಿಜಯಪುರ ತಾಲೂಕಾ ವ್ಯಾಪ್ತಿಯಲ್ಲಿ ಕಡಿಮೆ ಸಾಧನೆ ಮಾಡಿರುವ ಲಸಿಕಾ ಸ್ಥಳಗಳಲ್ಲಿ ಸಂಚಾರಿ ಲಸಿಕಾ ಕೇಂದ್ರ, ವೋಲ್ವೋ ಗ್ರುಪ್ಸ್ ನಾರಾಯಣ ಹೆಲ್ತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಉಚಿತ ಸಮುದಾಯ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.ಅದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನ್ನೂರ, ನಾಗಠಾಣ, ತಿಕೋಟಾ, ಜಲನಗರ, ನೌಬಾಗ, ಕನ್ನೂರ ಜಾಲಗೇರಿ, ಸರ್ಕಾರಿ ಪದವಿ ಮಹಾವಿದ್ಯಾಲಯ ಈ ಸ್ಥಳಗಳಲ್ಲಿ ಉಚಿತ ಸಮುದಾಯ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ಈಗಾಗಲೇ ೧ನೇ ಡೋಸ್ ೧೦೧ ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದೆ. ೨ನೇ ಡೋಸ್ ೫೮೪ ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದೆ. ದಿನಾಂಕ : ೨೦/೧೧/೨೦೨೧ ರಂದು ನಗರದ ನೌಬಾಗ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಉಚಿತ ಸಮುದಾಯ ಲಸಿಕೆ ಅಭಿಯಾನ ನಡೆಯಲಿದ್ದು, ಕಾರಣ ಸಾರ್ವಜನಿಕರು ಕೋವಿಡ್-೧೯ ರ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಾದ ಸುನೀಲಕುಮಾರ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.ಅದರಂತೆ ಜನರು ಕೋವಿಡ್-೧೯ ರೋಗದಿಂದ ದೂರವಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply