Belagavi

ಮನೆ ಪರಿಹಾರ ನೀಡಬೇಕಾದವರ ಸಮೀಕ್ಷಾ ಪಟ್ಟಿ ಸಿದ್ದಪಡಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಭೀಮಪ್ಪ ಗಡಾದ ಒತ್ತಾಯ


ಬೆಳಗಾವಿ : ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಮನೆ ಪರಿಹಾರ ನೀಡಬೇಕಾದವರ ಸಮೀಕ್ಷಾ ಪಟ್ಟಿ ಸಿದ್ದಪಡಿಸಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಹಾಗೂ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನೆರೆ ಸಂತ್ರಸ್ತ ಕುಟುಂಬಗಳ ಸಮೀಕ್ಷಾ ಕಾರ್ಯವನ್ನು ತಡೆಹಿಡಿಯಲು ನಿರ್ದೇಶನ ನೀಡುವಂತೆ ಮೂಡಲಗಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿರುವ ಭೀಮಪ್ಪ ಗಡಾದ ಅವರು, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ದಿ. 10ರಂದು ಚುನಾವಣೆಯ ದಿನಾಂಕ ನಿಗಧಿಯಾಗಿದ್ದು, ಈಗಾಗಲೇ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ. ಜಿಲ್ಲೆಯಲ್ಲಿ ಘಟಪ್ರಭಾ, ಮಲ್ಲಪ್ರಭಾ, ದೂದಗಂಗಾ ಮತ್ತು ಹಿರಣ್ಯಕೇಶಿ ಮುಂತಾದ ನದಿಗಳಿಂದ ಉಂಟಾಗಿದ್ದ ಪ್ರವಾಹದಲ್ಲಿ ಜಿಲ್ಲೆಯ ಬಹುತೇಕ ತಲೂಕುಗಳಲ್ಲಿ ನದಿ ತೀರದಲ್ಲಿರುವ ಸಾಕಷ್ಟು ಗ್ರಾಮದ ಜನರು ನದಿಯ ಪ್ರವಾಹದಲ್ಲಿ ಮನೆಯಗಳನ್ನು ಕಳೆದುಕೊಂಡಿದ್ದರು. ಪ್ರವಾಹದಲ್ಲಿ ಸಂಪೂರ್ಣ ಮನೆ ಹಾನಿಗೊಳಗಾದ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂಗಳನ್ನು ಮತ್ತು ಹಾನಿಗೊಳಗಾದ ಮನೆಗೆ ತಲಾ 1 ಲಕ್ಷಗಳ ರೂ. ಮನೆ ಪರಿಹಾರವನ್ನು ನೀಡಲಾಗುತ್ತಿದೆ. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರು ಸಹ ಅಧಿಕಾರಿಗಳು ಸಂತ್ರಸ್ಥರ ಪಟ್ಟಿಯನ್ನು ಸಿದ್ದ ಪಡಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿರುವ ಹಾಲಿ ವಿಧಾನ ಪರಿಷತ್ ಸದಸ್ಯರುಗಳು ಮತ್ತು ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಮತ್ತು ಶಾಸಕರುಗಳು ಅಲ್ಲದೇ ಲೋಕಸಭಾ ಸದಸ್ಯರುಗಳು ಸ್ಥಳೀಯ ಸಂಸ್ಥೆಗಳ ಸದಸ್ಯರುಗಳ ಮತಗಳನ್ನು ಪಡೆದುಕೊಳ್ಳುವ ಸಲುವಾಗಿ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದರು ಸಹ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪ್ರತಿ ತಾಲೂಕುಗಳಲ್ಲಿ ಮನೆ ಪರಿಹಾರ ನೀಡಬೇಕಾದ ಕುಟುಂಬಗಳ ಸಮೀಕ್ಷೆ ನಡೆಸಿ ತಂತ್ರಾಂಶದಲ್ಲಿ ಹೆಸರುಗಳನ್ನು ಅಳವಡಿಸುತ್ತಲಿದ್ದಾರೆ. ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಅಧಿಸೂಚನೆ ಪ್ರಕಟಿಸಿದ ನಂತರ ಖೂೀಡ ಸಮೀಕ್ಷೆ ನಡೆಸಿ ಮನೆ ಪರಿಹಾರ ನೀಡಬೇಕಾದ ಕುಟುಂಬಗಳ ಹೆಸರುಗಳನ್ನು ತಂತ್ರಾಂಶದಲ್ಲಿ ಅಳವಡಿಸುವುದರ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡುವದರ ಮೂಲಕ ಕರ್ತವ್ಯ ಚ್ಯುತಿ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಂತ್ರಸ್ತರ ಕುಟುಂಬಗಳ ಸಮೀಕ್ಷೆ ನಡೆಸಿ ತಂತ್ರಾಂಶಗಳಲ್ಲಿ ಅಳವಡಿಸುವ ಕಾರ್ಯವನ್ನು ತಡೆ ಹಿಡಿಯುಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಒತ್ತಾಯಿಸಿದ್ದಾರೆ.


Leave a Reply