Belagavi

ಕೃಷಿ ಮಸೂದೆ ಹಿಂಪಡೆದಿರುವುದು ರೈತರ ಗೆಲುವು – ಚನ್ನರಾಜ ಹಟ್ಟಿಹೊಳಿ


ಬೆಳಗಾವಿ – ಕೇಂದ್ರ ಸರಕಾರ ಕೃಷಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆೆದಿರುವುದು ಈ ನಾಡಿನ ರೈತರ ಗೆಲುವಾಗಿದೆ ಎಂದು ಹರ್ಷ ಶುಗರ್ಸ್ ಚರಮನ್, ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ಮೊದಲ‌ ದಿನದಿಂದಲೂ ಕರಾಳ‌ ಕೃಷಿ ಕಾಯ್ದೆಯನ್ನು ಕಾಂಗ್ರೆಸ್ ವಿರೋಧಿಸುತ್ತ ಬಂದಿದೆ. ರೈತಪರ ಕಾಳಜಿ ಹೊಂದಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನದಂದೇ ಕರಾಳ ಕೃಷಿ ಕಾಯಿದೆ ಹಿಂದಕ್ಕೆ ಪಡೆದಿರುವುದು ರೈತ ಪರ ಹೋರಾಟಕ್ಕೆ ಸಂದ ಜಯವಾಗಿದೆ. ಇದು ರೈತರ ಗೆಲುವು, ದೇಶದ ಎಲ್ಲ ನಾಗರಿಕರ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು ಎಂದು ಚನ್ನರಾಜ ಹಟ್ಟಿಹೊಳಿ ಟ್ವೀಟ್ ಮಾಡಿದ್ದಾರೆ.


Leave a Reply