Belagavi

ಕಾಡಂಚಿನ ಆದಿವಾಸಿಗಳಿಗೆ ಕಿರಾಣಿ ಕಿಟ್ ವಿತರಣೆ


ಬೆಳಗಾವಿ : ಖಾನಾಪುರ ತಾಲೂಕಿನ ಹರಶಿನವಾಡಾ ಗ್ರಾಮದ ಆದಿವಾಸಿಗಳಿಗೆ
ಗುರುವಾರ ಕಿರಾಣಿ ಸಾಮಗ್ರಿಗಳ ಕಿಟ್ ಒದಗಿಸಿಕೊಡುವ ಮೂಲಕ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಹೊಸ ಇತಿಹಾಸ ದಾಖಲಿಸಿದೆ.

ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್‌ನ ಮುಖ್ಯಸ್ಥ ಸಂತೋಷ ಧರೇಕರ ನೇತೃತ್ವದಲ್ಲಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಾವತಿ ಸುನ್ನೊಳ್ಳಿ, ಕೋಶಾಧಿಕಾರಿ ಇಂದಿರಾ ಮೋಟೆಬೆನ್ನೂರು ಹಾಗೂ ಸದಸ್ಯರಾದ ನಿರ್ಮಲಾ ಬಟ್ಟಲ್ ಅವರು ಈ
ಸಂದರ್ಭದಲ್ಲಿದ್ದರು.

ಖಾನಾಪುರಪಟ್ಟಣದಿಂದಸುಮಾರು12 ಕಿ.ಮೀದೂರದ ಅರಣ್ಯ ಪ್ರದೇಶದಲ್ಲಿರುವ ಹರಶಿನವಾಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿ ಸುಮಾರು 200 ಮಂದಿ ಆದಿವಾಸಿಗಳು ಜೀವನ ಸಾಗಿಸುತ್ತಿದ್ದು ಮತದಾನ ಹಕ್ಕು ಹೊಂದಿದ್ದರೂ ಇಲ್ಲಿ ಈ
ತನಕ ಯಾವುದೇ ಮೂಲಭೂತ ಸೌಲಭ್ಯವೂ ಸಿಕ್ಕಿಲ್ಲ. ಅಕ್ಕಪಕ್ಕದ ಗ್ರಾಮದಲ್ಲಿ ಕಬ್ಬು ನೀಲಗಿರಿ ಕಡಿಯುವ ಕೂಲಿ ಕೆಲಸಕ್ಕೆ ತೆರಳಿ ಬದುಕು ಸಾಗಿಸುವ ಈ ಅರಣ್ಯವಾಸಿಗಳಿಗೆ ಫೇಸ್‌ಬುಕ್ ಫ್ರೆಂಡ್ ಸರ್ಕಲ್‌ ವತಿಯಿಂದ ದಾನಿಗಳ ನೆರವಿನಿಂದ ಪ್ರತೀ ಮೂರು ತಿಂಗಳಿಗೊಮ್ಮೆ ದಿನಸಿ ಸಾಮಗ್ರಿ ಒದಗಿಸಲಾಗುತ್ತಿದೆ. ಈ ಬಾರಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿಂದ ಸುಮಾರು 16,500 ರೂ. ಮೌಲ್ಯದ ಕಿರಾಣಿ, ತರಕಾರಿ ಸೇರಿದಂತೆ ಆಹಾರ ಪದಾರ್ಥ ಒದಗಿಸಲಾಯಿತು.

ಪತ್ರಕರ್ತೆ ಕೀರ್ತಿಶೇಖರ್, ಸಮಾಜ ಸೇವಕರಾದ ಗಣೇಶ ರೋಕಡೆ, ಗಣೇಶ
ವೆಮೋಲ್ಕರ್, ವಿಶಾಲ ಪಾಟೀಲ, ರಾಹುಲ ಪಾಟೀಲ, ನಕುಲ ತುಮರಿ, ರಾಜು ಕಾಕತಿ
ಮತ್ತಿತರರು ಇದ್ದರು.


Leave a Reply