Koppal

ಶಿವ ಸ್ಕೂಲ್ ಆಫ್ ಡ್ಯಾನ್ಸ್ ಸ್ಟುಡಿಯೋ ವತಿಯಿಂದ ಲಕ್ಷ್ಮಿ  ಮೂವಿ ಕವರ್ ಸಾಂಗ್ ಬಿಡುಗಡೆ


ಗಂಗಾವತಿ:ಶಿವ ಸ್ಕೂಲ್ ಆಫ್ ಡ್ಯಾನ್ಸ್ ಸ್ಟುಡಿಯೋ ದಲ್ಲಿ  ಭಾನುವಾರದಂದು ನಮ್ಮನ್ನು ಅಗಲಿರುವ ಕರ್ನಾಟಕ ರತ್ನ  ಪುನೀತ್ ರಾಜ್ ಕುಮಾರ್  ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ನಂತರ  ಲಕ್ಷ್ಮೀ ಮೂವಿಯ ಕವರ್ ಸಾಂಗ್ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ತುಂಬಾ ಅದ್ಭುತವಾಗಿ ಈ ಸಾಂಗ್ ಚಿತ್ರೀಕರಣಗೊಂಡಿದೆ.ಗಂಗಾವತಿ ಕೊಪ್ಪಳ ಹಾಗೂ ಆನೆಗುಂದಿ ತುಂಗಭದ್ರಾ ಸುತ್ತಮುತ್ತಲು ಇರುವ ಪ್ರಕೃತಿಯ ಚಿತ್ರೀಕರಣ ಅದ್ಬುತವಾಗಿ ಚಿತ್ರೀಕರಿಸಿದ್ದಾರೆ. ಈ ಸಾಂಗ್ ಹೀರೋಯಿನ್ ಯಶೋದಾ ಅದ್ಭುತವಾಗಿ ನೃತ್ಯ ಮಾಡಿದ್ದಾರೆ ಇದೇ ರೀತಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕು.ಗಂಗಾವತಿ ಕೇವಲ ಭತ್ತದ ಕಣಜ ವಲ್ಲ ಸಾಂಸ್ಕೃತಿಕ ಕಣಜವೂ ಹೌದು. ವಿದ್ಯಾರ್ಥಿಗಳನ್ನು ಕೇವಲ ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತ ಮಾಡಬೇಡಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡಿ ಎಂದರು .ಈ ಸಂದರ್ಭದಲ್ಲಿ ಜಗನ್ನಾಥ ಆಲಂಪಲ್ಲಿ ,ಸರ್ವೇಶ ವಸ್ತ್ರದ ,ಅನ್ನಪೂರ್ಣಸಿಂಗ್, ನಗರಸಭೆ ಸದಸ್ಯರಾದ ಎಫ್ ರಾಘವೇಂದ್ರ , ವಾಸು ನವಲಿ , ನವೀನ್ ಮಾಲಿಪಾಟೀಲ್ , ರಂಗಭೂಮಿ ಕಲಾವಿದರು ಇಂಗಳಗಿ ನಾಗರಾಜ್ , ಕೃಷ್ಣಪ್ಪನಾಯಕ , ನಿರ್ಮಾಪಕರು ನಾಗರಾಜ್ ಭೋವಿ , ಶ್ರೀಮತಿ ಲಲಿತಾ ನಾಗರಾಜ್ , ದೀಪಾ ದರೋಜಿ , ಗೌಸ್ ಮ್ಯಾಕ್ಸ್ , ನೃತ್ಯ ನಿರ್ದೇಶಕರುಗಳಾದ ಸಂತೋಷ್ , ಸುಂದರ್ , ದೇವರಾಜ್ , ಮೋಜಸ್ ಪಾಲ್ ಕ್ಯಾಮರಾ, ಮ್ಯಾನ್ ಮೊಹಮ್ಮದ್ ಅಲಿ ,ಎಡಿಟರ್ ಕಿರಣ್ ಪಾಟೀಲ್ ಸಿಂಧನೂರು,ಚೇತು ಡಿಸೈನಾ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲಕರು ಪಾಲ್ಗೊಂಡಿದ್ದರು.

(ವರದಿ ಹನುಮೇಶ ಬಟಾರಿ)


Leave a Reply