Belagavi

ಕನಕದಾಸ ಜಯಂತಿ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ


ಬೆಳಗಾವಿ: ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿ ಶ್ರೀನಗರ ದಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು ಹಾಗೂ ಸ್ವಚ್ಛತಾ ಅಭಿಯಾನದ ಅಂಗವಾಗಿ ವಾರ್ಡ್ ನಂ 35 ರ ಕಾರ್ಪೋರೇಟರ್ ಲಕ್ಷ್ಮೀ ಮಹಾದೇವ ರಾಠೋಡ ಅವರ ನೇತೃತ್ವದಲ್ಲಿ ಶಿವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಶಿವಾಂಜನೇಯ ಸೇವಾ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಮಹಾದೇವ ಕೆ. ರಾಠೋಡ, ಕಾರ್ಯದರ್ಶಿಗಳಾದ ಅರುಣ ಮರಾಠೆ, ಖಜಾಂಚಿ ಮಹಾಂತೇಶ ಮೂಲಿಮನಿ, ಪದಾಧಿಕಾರಿಗಳಾದ  ಸುಭಾಸ ಮರಾಠೆ, ವಿನಾಯಕ ದೇಶನೂರ, ವಿನಾಯಕ ಪತ್ತಾರ, ಡಾ. ಅನಿಲ ಕಳ್ಳಿಗುದ್ದಿ, ಎಸ್ ಬಿ. ಕವಳೀಕಟ್ಟಿ, ಸಾಹಿತಿಗಳಾದ ಬಸವರಾಜ ಗಾರ್ಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳು, ಹಾಗೂ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಉಪಸ್ಥಿತರಿದ್ದು ಶ್ರಮದಾನ ಮಾಡಿದರು.


Leave a Reply