Belagavi

ಬೆಳಗಾವಿಯಲ್ಲಿ ಅಂದಾಜುಮಟ್ಟ ಮೀರಿ ಮಳೆಯಾಗಿದೆ: ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದ್ದಾರೆ


ಬೆಳಗಾವಿ: ಕಳೆದು ಒಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅಂದಾಜು ಮಟ್ಟಕ್ಕಿಂತ 230 ಶೇ. ಹೆಚ್ಚು ಮಳೆ ಬಿದ್ದಿದ್ದು ಬೆಳಗಾವಿ ಹಾಗೂ ಖಾನಾಪುರ ತಾಲೂಕಿನಲ್ಲಿ 5,567 ಹೆಕ್ಟರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿರುವುದು ಪ್ರಾಥಮಿಕ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರದ ಮುಹೆಚ್ಚಿನ ತನಿಖೆ ನಡೆಸಲು ಜಂಟಿಯಾಗಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಜಂಟಿ ಸರ್ವೇ ನಡೆಸಿದ್ದಾರೆ. ಮೂರು ದಿನದಲ್ಲಿ ಈ ಸರ್ವೇ ಕಾರ್ಯ ಮುಗಿದು ಮಾಹಿತಿ ಕೊಡಬೇಕೆಂದು ಹೇಳಿದ್ದೇವೆ ಎಂದರು. ಮನೆ ಹಾನಿಯ ಬಗ್ಗೆ ಮಾತನಾಡಿ 32 ಮನೆಗಳ ಹಾನಿಯಾಗಿವೆ ಎಂದರು.


Leave a Reply