Koppal

ಶೂನ್ಯ ದಿಂದ ಜನಮಾನಸದಡೆಗೆ ಕೊಟ್ಟೂರುಸ್ವಾಮಿಜೀ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಮಠದಲ್ಲಿ ನಿರವ ಮೌನ!


ವಿಜಯನಗರ(ಹೊಸಪೇಟೆ) ನ೨೨: ಜಗದ್ಗುರು ಕೊಟ್ಟೂರುಸ್ವಾಮಿ ಮಠವನ್ನು ಶೂನ್ಯದಿಂದ ಅನಂತ ದಡಿಗೆ ಕೊಂಡೈದು ಈ ಬಾಗದ ನಡೆದಾಡುವ ದೇವರು, ತ್ರಿಕಾಲ ಲಿಂಗಪೂಜಾ ದುರಂಧರ, ಧನಿವರಿಯದ ದಾಸೋಹಿ ಎಂಬೆಲ್ಲಾ ಖ್ಯಾತಿಹೊಂದಿದ್ದ ಕೊಟ್ಟೂರುಸ್ವಾಮಿ ಮಠ ಹೊಸಪೇಟೆ, ಹಂಪಿ, ಬಳ್ಳಾರಿ, ಹಾಲಕೇರಿಮಠಾಧೀಶ್ವರ ಡಾ.ಸಂಗನಬಸವ ಮಹಾಸ್ವಾಮಿಗಳು
ಶಿವೈಕ್ಯೆರಾದರು.
೧೯೩೮ರಲ್ಲಿ ಭೂಮಿಗೆ ಬಂದಶ್ರೀಗಳು ಧಾರ್ಮಿಕ ಪರಂಪರೆಯನ್ನು ಮುಂದುವರೆಸಲು ನಾವು ಮಠಕ್ಕೆ ಬಿಡಬೇಕು ಎಂಬ ಸಂಕಲ್ಪವನ್ನು ತಂದೆತಾಯಿರಲ್ಲಿ ಬರುವಂತೆ ಮಾಡಿ ಬಾಲ್ಯದಿಂದಲೇ ಮಠ, ಮಾನ್ಯಗಳು, ಧಾರ್ಮಿಕ ಪರಂಪರೆಯ ಸಹವಾಸದಲ್ಲಿಯೇ ಬೆಳಸುವ ಮೂಲಕ ಲೌಖಿಕ ಬುದುಕಿನಿಂದ ದೂರಉಳಿದು ಮೂಲತಃ ಹಾನಗಲ್ಲ ಕುಮಾರಸ್ವಾಮಿಗಳ ಗುರುಗಳಾದ ಬಿದರಿ ಕುಮಾರಸ್ವಾಮಿಗಳ ವಂಶಸ್ಥರಾಗಿದ್ದ ಇವರು ಧಾರ್ಮಿಕ ಪರಂಪರೆಯಿAದ ಹೊರಬರಲೇ ಇಲ್ಲಾ, ಹುಕ್ಕೇರಿ ಶಿವಬಸವ ಮಹಾಸ್ವಾಮಿಗಳ ಪ್ರೇರಣೆಯಂತೆ, ೧೯/೨೦ನೇ ಶತಮಾನದಲ್ಲಿ ಯುಗಪುರುಷ ಎಂದೇ ಖ್ಯಾತವಾಗಿದ್ದ ಹಾನಗಲ್ಲ ಕುಮಾರಮಹಾಸ್ವಾಮಿಗಳ ಪ್ರಭಾವಕ್ಕೆ ಒಳಗಾಗಿ ಇಂದು ರಾಜ್ಯದಲ್ಲಿ ಶಿಕ್ಷಣ, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ವೀರಶೈವ ಪರಂಪರೆಗೆ ಒಂದು ಹೊಸ ಆಯಾಮವನ್ನು ನೀಡಿದ ಕುಮಾರಮಹಾಸ್ವಾಮಿಗಳಂತೆ ಆಗಬೇಕು ಪರಂಪರೆಯ ವಾರ್ಸುದಾರನಾಗಬೇಕು ಎಂಬ ಅಭಿಲಾಷೆಯಿಂದ ಪ್ರಾಥಮಿಕ ಶಿಕ್ಷಣದ ನಂತರ ಕಾಶಿಯಲ್ಲಿ ಉನ್ನತ ಪದವಿಯನ್ನು ಪಡೆದು ಹುಬ್ಬಳಿಯ ಮೂರುಸ್ವಾವಿರ ಮಠದಲ್ಲಿ ಮುಂದಿನ ಅಭ್ಯಾಸವನ್ನು ಮಾಡುತ್ತಿರುವಾಗ ಕಳೆದ ಮೂರುವರ್ಷಗಳಿಂದ ಅವಸಾನದ ಅಂಚಿಗೆ ಬಂದಿದ್ದ ಕೊಟ್ಟೂರುಸ್ವಾಮಿ ಮಠಕ್ಕೆ ನಮ್ಮ ಪರಂಪರೆಯನ್ನು ಮುಂದುವರೆಸುವ ಮಠಾಧಿಪತಿಯನ್ನು ನೀಡುವಂತೆ ಕೇಳಲಾಗಿ ಜಗದ್ಗುರು ಗಂಗಾಧರ ಮಹಾಸ್ವಾಮಿಗಳಿಂದ ಶ್ರೀಸಂಗನಬಸವ ದೇವರೆ ಸೂಕ್ತ ಎಂಬ ಶ್ರೀಗಳು ೨೫ ರಿಂದ ೨೬ ಶಾಖಾ ಮ ಠಗಳನ್ನು ಹೊಂದಿರುವ ಕೊಟ್ಟೂರುಸ್ವಾಮಿ ಮಠಕ್ಕೆ ಇವರೆ ಸೂಕ್ತ ಎಂದು ನೇಮಕಗೊಂಡವರು ಶ್ರೀ ಸಂಗನಬಸವ ಮಹಾಸ್ವಾಮಿಗಳು.
ಆರ್ಥಿಕ ಪರಿಸ್ಥಿತಿ ಗಂಭೀರತೆಯನ್ನು ಗಮನಿಸಿಯೂ ಆಸ್ತಿ ಇದ್ದರೂ ಇಲ್ಲದಿರುವ ಸ್ಥಿತಿಗೆ ಬಂದಿದ್ದ ಮಠವನ್ನು ೧೯೭೨ರಲ್ಲಿ ಮಠಾಧಿಪತಿಯಾಗುತ್ತಿದ್ದಂತೆಯೇ ಮೊದಲು ಮಾಡಿದ ಹಾಗೂ ಅವಿಸ್ಮರಣಿಯ ಕ್ಷಣ ಎಂದರೆ ಪ್ರತಿ ಮನೆ ಮನೆಗೂ ತೆರಳಿ, ಪ್ರತಿ ಸಮಾಜದವರನ್ನು ಭೇಟಿಯಾಗಿ ಧಾರ್ಮಿಕ ಪರಂಪರೆ ಮುಂದುವರೆಸಲು ಕೋರಿದ ಸಹಕಾರ ಶ್ರೀಮಠದ ಘನತೆ ಹೆಚ್ಚಿಸುವಲ್ಲಿ ದಿಟ್ಟಹೆಚ್ಚೆಯಾಗಿ ಪರಿಣಮಿಸಿತು. ಮಠದಜೀಣ್ಣೋದ್ದಾರ, ಬರಗಾಲ ಸಮಯದಲ್ಲಿ ಗಂಜೀ ಕೇಂದ್ರಗಳ ಆರಂಭ, ಬಸವ ಪುರಾಣ, ಪುರಾಣ ಪ್ರವಚನ ನಡೆಸುವ ಮೂಲಕ ಧಾರ್ಮಿಕ ಪರಂಪರೆಯ ಪ್ರಜ್ಞೆಯನ್ನು ಜಾಗೃತವಾಗಿಸುವ ಕಾರ್ಯ ಶ್ರೀಮಠವನ್ನು ಸಮಾಜಮುಖಿಯಾಗಿ ಶೂನ್ಯದಿಂದ ಅನಂತದಡಿಗೆ ಕೊಂಡೈಯುವಲ್ಲಿ ಸಹಕಾರಿಯಾಯಿತು.
ಮಾರ್ಗದರ್ಶಕರಾಗಿದ್ದು ಹಾನಗಲ್ಲ ಸದಾಶಿವ ಮಹಾಸ್ವಾಮಿಗಳು, ಹುಕ್ಕೇರಿಯ ಶಿವಬಸವ ಮಹಾಸ್ವಾಮಿಗಳು, ಶಿವಲಿಂಗೇಶ್ವರ ಮಹಾಸ್ವಾಮಿಗಳು ಬೆಳಗಾವಿಯ ನಾಗನೂರು ಶಿವಬಸವ ಮಹಾಸ್ವಾಮಿಗಳು ನೀಲಲೋಚನ ಮಹಾಸ್ವಾಮಿಗಳು, ಒಳಬಳ್ಳಾರಿಯ ಚನ್ನಬಸವಮಹಾಸ್ವಾಮಿಗಳುನ್ನು ಶ್ರೀಮಠಕ್ಕೆ ಕರೆದು ಗೌರವಿಸುವ ಮೂಲಕ ಮಠದ ಅಭಿವೃದ್ಧಿಯನ್ನು ತೊರಿಸಿ ಸಂತಸಪಟ್ಟಿದ್ದು.
ಈ ಕಾರ್ಯವೈಖರಿಯೇ ಕಂಡು ಹಾಲಕೇರಿ ಅನ್ನದಾನೇಶ್ವರ ಮಠ೧೯೮೩ರಲ್ಲಿ ಅಭಿನವ ಅನ್ನದಾನೇಶ್ವರನಾಗಿ ಅಧಿಕಾರವಹಿಸಿಕೊಂಡವರು, ಶಿವಯೋಗಮಂದಿರದ ಅಧ್ಯಕ್ಷರಾಗಿ ಏಕಕಾಲದಲ್ಲಿ ದೊಡ್ಡ ಮೂರುಸಂಸ್ಥೆಗಳನ್ನು ಸಮರ್ಥವಾಗಿ ನಡೆಸುಮಹತ್ವದ ಕಾರ್ಯಮಾಡಿದ ಮಹಾನ್ ಸಾಧಕರಾಗಿದ್ದವರು ಶ್ರೀ ಡಾ.ಸಂಗನಬಸವ ಮಹಾಸ್ವಾಮಿಜೀ.
ರೈತರು, ಕೃಷಿ ಮತ್ತು ಕೃಷಿ ಕಾರ್ಮಿಕರು, ಸ್ವದೇಶ ಹಿನ್ನೆಲೆಯಲ್ಲಿ ಸ್ವಾವಲಂಭನೆಯ ಕಾಳಜಿ ಹೊಂದಿದವರು. ಕೊನೆಯ ಕ್ಷಣದವರೆಗೂ ಸಮಾಜಮುಖಿಯಾಗಿದ್ದವರು.
ಸರ್ವಧಮ ಸಮನ್ವಯತೆಯೇ ಮೂಲ ಮಂತ್ರವಾಗಿ ಬೆಳದು ಬೆಳಸಿದ ಕೀರ್ತಿ ಡಾ.ಸಂಗನಬಸವ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಕೊಟ್ಟೂರಸ್ವಾಮಿ ಮಠ ಎಂದರೆ ಸರ್ವಧರ್ಮದ ಮಠ ಎಂಬAತೆ ಬೆಳಸಿ ಶಿವಾನುಭವ ಸಂಪದ, ಬಸವಜಯಂತಿಯAದು ಸಾಮೂಹಿಕ ವಿವಾಹ ಶ್ರೀಮಠದ ದೈನಂದಿನ ಕೈಂಕರ್ಯ ಎಂಬ ತಾತ್ಪರ್ಯ ಬರುವಂತಾಗಿದೆ.
ಕಳೆದ ೧೨ ದಿನಗಳ ಹಿಂದೆಯಷ್ಟೇ ಹಾನಗಲ್ಲ ಮಠಕ್ಕೆ ಉತ್ತರಾಧಿಕಾರಿಯ ನೇಮವಾಗಿದ್ದು ಸ್ವಲ್ಪ ಆರೋಗ್ಯದ ತೊಂದರೆಯಿAದ ಚಿಕಿತ್ಸೆಗೆಂದು ತೆರಳಿದ್ದ ಶ್ರೀಗಳು ದೇಹ ಲೋಕವನ್ನು ತೇಜಿಸರಬಹುದು ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ.
ಹೊಸಪೇಟೆಯಲ್ಲಿ ದುಖಃದ ಛಾಯೆ
ಶ್ರೀಗಳ ವಿಧವಶ ಸುದ್ದಿ ತಿಳಿಯುತ್ತದ್ದಂತೆಯೇ ಹೊಸಪೇಟೆಯಲ್ಲಿ ಶೋಕ ಕವಿದಿದೆ. ಅನೇಕ ಸಮಾಜದವರು, ಮುಖಂಡರು ಗ್ರಾಮಾಂತರ ಪ್ರದೇಶದಿಂದ ಅನೇಕು ಬರಲಾರಂಭಿಸಿದ್ದು ಗುರುಗಳ ಪಾರ್ಥಿವ ಶರೀರ ಮಧ್ಯಾಹ್ನ ಹೊಸಪೇಟೆಗೆ ಬಂದು ಸಾರ್ವಜನಿಕರು ಅಂತಿಮ ದರ್ಶನಕ್ಕೆ ಲಭ್ಯವಾಗಿತು. ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ನಗರ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ನಂತರ ಶ್ರೀ ಮಠದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಿ ನಂತರ ಹಾಲಕೇರಿಯಲ್ಲಿ ಶಿವಾಧಿನ ಕಾರ್ಯಗಳು ಮಂಗಳವಾರ ಜರುಗಲಿವೆ ಎಂದು ತಿಳಿಸಿದ್ದಾರೆ.
ಸಚಿವ ಆನಂದಸಿAಗ್ ಸೇರಿದಂತೆ ವೀರಶೈವ ಸಮಾಜದ ಮುಖಂಡರು, ಗಣ್ಯರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಸೇರಿದಂತೆ ಗಣ್ಯರು ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು. ನಗರದಾದ್ಯಂತ ಶೋಕ ಛಾಯೆ ಆವರಿಸಿತು.


Leave a Reply