Belagavi

ನಾನು ಬಂಡಾಯ ಅಭ್ಯರ್ಥಿಯಲ್ಲ….: ಲಖನ್ ಜಾರಕಿಹೊಳಿ


ಬೆಳಗಾವಿ: ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ ಹೊರತು ಯಾರ ವಿರುದ್ಧದ ಬಂಡಾಯ ಅಭ್ಯರ್ಥಿಯೂ ಅಲ್ಲ, ನನ್ನಿಂದ ಬಿಜೆಪಿಗೆ ಲಾಬವಾಗಲಿದೆ ನಷ್ಟವಂತು ಖಂಡಿತವಾಗಿ ಆಗಲಾರದು ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ

ಎಂ.ಎಲ್.ಸಿ ಚುನಾವಣೆಗೆ ಬಿಜೆಪಿ ಆಕಾಂಕ್ಷಿಯಾಗಿ ಟಿಕೆಟ್ ಸಿಗದಿದ್ದ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದರ ಮೂಲಕ ಇಂದು ನಾಮಪತ್ರ ಸಲ್ಲಿಸಿ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದರು.
ನಾನು ಯಾವತ್ತು ಬಿಜೆಪಿ ಪಕ್ಷದಿಂದ ಟಿಕೆಟ್ ಕೇಳಿಲ್ಲಾ, ಗೊಂದಲ ನಿರ್ಮಾಣವಾಗಿದೆಯಷ್ಟೆ. ಮೊದಲಿಂದಲೂ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೆ. ನಮಗೆ ಮತ ಹಾಕಿ ಗೆಲ್ಲಿಸಿದ್ರೆ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದೇವೆ. ಕಾರ್ಯಕರ್ತರ ಹಾಗೂ ಮತದಾರರ ಬೆಂಬಲ ನಮಗಿದೆ. ಈ ಭರವಸೆ ಮೇಲೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Leave a Reply