Uncategorized

ಕನಕದಾಸರ ಜಯಂತಿಯಂದು ಕನಕದಾಸರ ಫೋಟೋಗೆ ಹಳೆಯ ಪ್ಲಾಸ್ಟಿಕ್ ಹೂವಿನ ಹಾರ ಹಾಕಿ ಅಪಮಾನ ಮಾಡಿದ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಅಧ್ಯಕ್ಷ


ಲಿಂಗಸಗೂರು: ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ (ಪಿಡಿಒ) ಅಧ್ಯಕ್ಷ ಗುರುಸಿದ್ದಪ್ಪನವರು ಇಂದು ಶರಣರ ಕನಕದಾಸರ ಜಯಂತಿಯಂದು ಕನಕದಾಸರ ಫೋಟೋಕೆ ಹಳೆಯ ಪ್ಲಾಸ್ಟಿಕ್ ಹೂವಿನ ಹಾರಹಾಕಿ ಅಪಮಾನ ಮಾಡಿದ ಘಟನೆ ನಡೆದಿದೆ. ಕನಕದಾಸರು ಕನ್ನಡದ ನೆಲದಲ್ಲಿ ಅನೇಕ ಲೀಲೆಗಳು ಮಹಿಮೆಗಳು ಜನರಿಗೆ ಪ್ರೇರಣೆಯಾಗಿದ್ದು ಈ ಮಹಾನ್ ಶರಣರಿಗೆ ಇಂದು ಒಬ್ಬ ಅಧಿಕಾರಿ ಅಪಮಾನ ಮಾಡಿದ್ದಾರೆ. ಹೊನ್ನಳ್ಳಿ ಗ್ರಾಮದ ಜನರು ಯುವಕರು ಇದನ್ನೆಲ್ಲ ಗಮನಿಸಿ ಗುರುಸಿದ್ದಪ್ಪ ಎಂಬ ಪಿಡಿಒ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಅಧಿಕಾರದ ಮದವೇರಿದ ಅಧಿಕಾರಿಗಳನ್ನು ಕೂಡಲೇ ಅಧಿಕಾರದಿಂದ ಅಮಾನತ್ತು ಮಾಡಬೇಕು ಎಂದು ಗ್ರಾಮಸ್ಥರು ಮತ್ತು ಯುವಕರು ಈ ತರ ನಿರ್ಲಕ್ಷ್ಯದಿಂದ ಮಾಡಿದ ಜಯಂತಿನ್ನು ಯಾಕೆ ಮಾಡಬೇಕಿತ್ತು ನಿಮ್ಮಿಂದ ಹಣವಿಲ್ಲದಿದ್ದರೆ ನಾವು ತಂದು ಕೊಡುತ್ತಿದ್ದೇವಲ್ಲ ಒಂದು ಹೂವಿನ ಹಾರ ತರಲು ಯೋಗ್ಯತೆ ಇಲ್ಲದಿದ್ದರೆ ಯಾಕೆ ಅಧಿಕಾರ ಮಾಡಬೇಕು ಅಧಿಕಾರಕ್ಕೆ ರಾಜಿನಾಮೆ ಕೊಟ್ಟು ಮನೇಲಿ ಮಲ್ಕೊಳ್ಳಿ ಎಂದು ಅಧಿಕಾರಿ ವಿರುದ್ಧ ವಾಗ್ದಾಳಿ ಮಾಡಿದರು. ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಲು ಮಾನ್ಯ ತಾಲೂಕ ಆಡಳಿತ ಮೇಲಧಿಕಾರಿಗಳಿಗೆ ಗ್ರಾಮಸ್ಥರು ಪಿಡಿಒ ಮೇಲೆ ಮತ್ತು ಅಧ್ಯಕ್ಷರ ಮೇಲೆ ನೋಟಿಸ್ ಜಾರಿ ಮಾಡಬೇಕು ಇಂತಹ ಅಹಿತಕರ ಘಟನೆಗಳು ಸಾಕಷ್ಟು ಬಾರಿ ನಡೆದಿದೆ, ಎಷ್ಟು ಸಾರಿ ಸಾರ್ವಜನಿಕರು ತಿಳಿಸಿ ಹೇಳಿದರೂ ಪ್ರಯೋಜನ ಆಗಿಲ್ಲಾ, ಹಾಗಾಗಿ ಸಂಬಂದಿಸಿದ ತಾಲೂಕ ಆಡಳಿತ ಕೂಡಲೇ ಗುರುಸಿದ್ದಪ್ಪ ಪಿಡಿಒ ಅವರನ್ನು ಅಮಾನತ್ತು ಮಾಡಬೇಕು.ಮತ್ತು ಅಧ್ಯಕ್ಷರ ಮೇಲೆ ನೋಟಿಸ್ ಜಾರಿ ಮಾಡಬೇಕು ಎಂದು ಗ್ರಾಮಸ್ಥರು ಮತ್ತು ಯುವಕರು ಮನವಿ ಸಲ್ಲಿಸಿದ್ದಾರೆ.

ವರದಿಗಾರರು :ವೀರಭದ್ರಯ್ಯ. ಬಿ.ಹಿರೇಮಠ.
9980469197-9110863610


Leave a Reply