Belagavi

ಬಿಜೆಪಿಗೆ ಸೇರುತ್ತೇನೆ ಎನ್ನುತ್ತಲೇ ಲಖನ್ ಜಾರಕಿಹೊಳಿಪರ ವಿವೇಕರಾವ್ ಪಾಟೀಲ್ ಬ್ಯಾಟಿಂಗ್


ವಿಧಾನಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ಬಿಜೆಪಿ ಅಭ್ಯರ್ಥಿಗೆಯಾದರೆ ಎರಡನೇ ಪ್ರಾಶಸ್ತ್ಯವನ್ನು ಲಖನ್ ಜಾರಕಿಹೊಳಿ ಅವರಿಗೆ ನೀಡಬೇಕು ಎಂದು  ವಿವೇಕರಾವ್ ಪಾಟೀಲ್ ಅವರು ಹೇಳುವುದರ ಮೂಲಕ ಲಖನ್ ಜಾರಕಿಹೊಳಿ ಅವರು ಬಿಜೆಪಿಯ ಎರಡನೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುಳಿವುಕೊಟ್ಟಿದ್ದಾರೆ.

ಮಂಗಳವಾರ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು  ನಾನು ಲಖನ್ ಜಾರಕಿಹೊಳಿಯವರ ನಾಮಪತ್ರ ಸಲ್ಲಿಕೆಗೆ ಬಂದಿದ್ದು ಇನ್ನು ಎರಡು ಮೂರು ದಿನಗಳಲ್ಲಿ ನಾನು ಬಿಜೆಪಿಗೆ ಸೇರುತ್ತೇನೆ. ಮೊದಲ ಪ್ರಾಶಸ್ಥ್ಯದ ಮತವನ್ನು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠರಿಗೆ ಹಾಕಿ ನಂತರ ಎರಡನೇ ಪ್ರಾಶಸ್ಥ್ಯದ ಮತವನ್ನು ಲಖನ್ ಜಾರಕಿಹೊಳಿಯವರಿಗೆ ಹಾಕಬೇಕೆಂದು ಹೇಳಿದರು.

ಇನ್ನು ಈಗಾಗಲೇ ರಮೇಶ ಜಾರಕಿಹೊಳಿ ತಮ್ಮನ್ನು ಭೇಟಿ ಮಾಡಿ ಬಿಜೆಪಿ ಸೇರುವಂತೆ ಮಾತುಕತೆ ನಡೆಸಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇನ್ನು ಎರಡು ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದಿದ್ದಾರೆ.


Leave a Reply