Belagavi

ದೇವಲ ಮಹರ್ಷಿ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರದಾನ


ಬೆಳಗಾವಿ : ನೇಕಾರ ಪರ ಹೋರಾಟಗಾರ ಬೆಳಗಾವಿಯ ವಡಗಾವಿಯ ಭಾರತ ನಗರ ನಿವಾಸಿ ಪರುಶುರಾಮ ವಾಸುದೇವ ಢಗೆ ಅವರಿಗೆ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲ್ಲೂಕಿನ ದೋಟಿಹಾಳ ಗ್ರಾಮದ ಶ್ರೀ ದಯಾನಂದ ಪುರಿ ಕಲಾ, ಕ್ರೀಡಾ ಹಾಗೂ ಸಾಂಸ್ಕöÈತಿಕ ಸಂಘ (ರಿ) ಮತ್ತು ದೇವಾಂಗ ಸಮಾಜ ದೋಟಿಹಾಳ ವತಿಯಿಂದ ದೇವಲ ಮಹರ್ಷಿ ಜಯಂತಿ ಪ್ರಯುಕ್ತ ಶ್ರೀ ದೇವಲ ಮಹರ್ಷಿ ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು ಸಂಘಟಕರು ಇಂದು ಅವರ ನಿವಾಸಕ್ಕೆ ತೆರಳಿ ವಿತರಿಸಿದರು. ನೇಕಾರಿಕೆ ವಲಯದ ಬೇಕುಬೇಡಿಕೆಗಳನ್ನು ಸಮಾಜಕ್ಕೆ ಒದಗಿಸುವಲ್ಲಿ ೨೫ ವರುಷಕ್ಕೂ ಅಧಿಕ ಕಾಲ ಹೋರಾಟ ಮಾಡುತ್ತಲೇ ಬಂದಿರುವ ಪರುಶುರಾಮ ಢಗೆ ಮಾದರಿ ಹೋರಾಟದ ಬದುಕು ಇಂದಿನ ಸಮಾಜಕ್ಕೆ ಅನಿವಾರ್ಯವಾಗಿದೆ ಎಂದು ಪ್ರಶಸ್ತಿ ವಿತರಿಸಿದ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕಂಟ್ಲಿ ತಿಳಿಸಿದ್ದಾರೆ.
ದೇವರು ಮಹರ್ಷಿ ಸದ್ಭಾವನಾ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಪರಶುರಾಮ ಢಗೆಅವರು ಮಾತನಾಡಿ ಇಪ್ಪತ್ತೆöÊದು ವರ್ಷಗಳಲ್ಲಿ ಮಾಡಿದ ಹೋರಾಟದಲ್ಲಿ ಸಮಾಜದ ಹಿರಿಯರಾದ ,ಗೌರವಾನ್ವಿತರಾದ. ಶ್ರೀ ವಸಂತರಾವ ಮೋರಕರ, ಈರಣ್ಣ ಮೆಗೋಟಿ, ಶಂಕರ್ ಬುಚಡಿ, ಗರಡಿಮನೆ ಮುಟ್ಟಂಗಿ, ಮಾಜಿ ಶಾಸಕರಾದ ಮನೊಹರ ಕಡೋಲಕರ ಬಾಗಲ್ಕೋಟ್, ಗುಳೇದಗುಡ್ಡ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹೀರಿಯರ ಮಾರ್ಗದರ್ಶನ ಸಹಾಯ ಸಹಕಾರವನ್ನು ನೆನೆದುಕೊಂಡರೂ. ಎಕ್ಸಸೈಜ್ ರದ್ಧತಿ ಸಲುವಾಗಿ ಮಾಡಿದ ಹೋರಾಟ, ರಿಯಾಯಿತಿ ದರದಲ್ಲಿ ವಿದ್ಯುತ್ ಪಡೇಯುವ ಹೊರಟ, ಸಹಕಾರಿ ಸಂಘ ಬ್ಯಾಂಕುಗಳಿAದ ಕಡಿಮೆ ಬಡ್ಡಿ ದರದಲ್ಲಿ ಸಿಗುವಂತೆ ಮಾಡಿದ ಹೋರಾಟ, ಸಾಲಮನ್ನಾ ಬಡ್ಡಿ ಮನ್ನಾ ಮಾಡಲು ಮಾಡಿದ ಹೋರಾಟ, ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣ ಆಗದಂತೆ ಮಾಡಿದ ಹೋರಾಟ ಇನ್ನೂ ಅನೇಕ ಹೋರಾಟಗಳ ಬಗ್ಗೆ ಮೆಲಗು ಹಾಕಿದರು. ನಮಗೆ ಈ ಪ್ರಶಸ್ತಿ ಬಂದಿರುವುದು ಪ್ರಶಸ್ತಿ ಗೌರವ ಹೆಚ್ಚಿದೆ.ಇನ್ನೂ ಹೆಚ್ಚಿನ ಕೆಲಸ ಮಾಡುತ್ತೇವೇ, ನಮ್ಮ ನೇಕಾರ ಪರ ಕಾರ್ಯಗಳ ಹೋರಾಟಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನೇಕಾರ ವಾಣಿ ಪತ್ರಿಕೆಯ ಸಂಪಾದಕರಾದ ಲಿಂಗರಾಜ ನೊಣವಿನಕೆರೆಯವರು ನೇಕಾರ ರತ್ನಪ್ರಶಸ್ತಿಯನ್ನು ನಿಡಿ ಗೌರವಿಸಿದ್ದಾರೆ. ಅದೇ ರೀತಿಯಾಗಿ ಈಗ ಶ್ರೀನಿವಾಸ ಕಂಟ್ಲೀ ಅವರು ದೇವಲ ಮಹರ್ಷಿ ಸದ್ಬಾವನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೇಕಾರ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಪಾಂಡುರAಗ ದೋತ್ರೇಯವರು, ಢಗೆ ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ ಶ್ರೀ ಪರಶುರಾಮ ಢಗೆ ಅವರ ಹೋರಾಟಗಳ ಬಗ್ಗೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಆದರೂ ಕೂಡ ಅವರು ಚಾಣಾಕ್ಷತನ ರೀತಿಯಲ್ಲಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು .ಪ್ರಶಸ್ತಿ ಬಂದದ್ದಕ್ಕೆ ಶುಭ ಕೋರಿದರು.
ಭೋಜಪ್ಪ ಹಜೇರಿ, ಬೆಳಗಾವಿ ತಾಳೂಕರ ಚಿತ್ರಕಲಾ ಮತ್ತು ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಕೃಷ್ಣರಾಜೇಂದ್ರ ತಾಳೂಕರ ರವರು ಶ್ರೀ ಢಗೆಯವರಿಗೆ ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ದೇವಾಂಗ ಸಮಾಜದ ಹಿರಿಯರಾದ ವಾಸುದೇವ ಕಾನಡೆ, ನೇಕಾರ್ ವೇದಿಕೆ ಅಧ್ಯಕ್ಷರು ಶ್ರೀ ಪಾಂಡುರAಗ ಧೋತ್ರೆ, ಹಿರಿಯರಾದ ಹನುಮಂತ ಗರಡಿಮನಿ, ಶಂಕರ ಢವಳಿ, ಆನಂದ ಲೋಕರಿ ರಾಘವೇಂದ್ರ ಬೋವಿ, ಸಂಜು ಹಿಟ್ನಾಳ, ಶಂಕರ ಭರಮೈನವರ, ಬೋಜಪ್ಪ ಹಜಾರೆ, ಕೃಷ್ಣ ರಾಜೇಂದ್ರ ತಾಳೂಕರ್, ಅರ್ಜುನ ಸಂಗಮನವರ, ಮಹೇಶ್ ಕಾಳಗಿ ಉಪಸ್ಥಿತರಿದ್ದರು, ನೇಕಾರ ಸಂಪದ ಪತ್ರಿಕೆಯ ಸಂಪಾದಕರಾದ ಶ್ರೀ ವಿಜಯಕುಮಾರ್ ಭಾಪ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Leave a Reply