vijayapur

ಪ್ರಸಕ್ತ ಮಳೆಯ ವಾತಾವರಣದಲ್ಲಿ ದ್ರಾಕ್ಷಿ ತೋಟಗಳ ನಿರ್ವಹಣೆ: ರೈತರ ಗಮನಕ್ಕೆ


ವಿಜಯಪುರ: ನ.೨೧ : ಜಿಲ್ಲೆಯಲ್ಲಿ ಪ್ರಸ್ತುತ ನಿರಂತರ ಮಳೆ ಹಾಗೂ ಮೋಡ ಕವಿದ ವಾತಾವರಣದ ಜೊತೆಗೆ ಬೆಳಗಿನ ಜಾವದ ನೀರು ಮಂಜು ಸುರಿಯುವುದು ಕಂಡುಬAದಿದೆ. ಈ ತರಹದ ವಾತಾವರಣವು ಮುಂದಿನ ಕೆಲ ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ದ್ರಾಕ್ಷಿ ತೋಟಗಾರಿಕೆಗೆ ಬೆಳವಣಿಗೆ ಹಂತದ ಆಧಾರದ ಮೇಲೆ ಈ ಕೆಳಗಿನ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ದ್ರಾಕ್ಷಿ ಹೂ ಅರಳುವ ಪೂರ್ವದ ಹಂತ (ಚಾಟನಿ ನಂತರ ೩೦ ರಿಂದ ೩೫ ದಿನಗಳವರೆಗೆ)ಈ ಹಂತದ ತೋಟಗಳ ಗೊಂಚಲಿನಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಡೌನಿ ಮಿಲ್ಡವ್ ರೋಗ ಹಾಗೂ ಗೊಂಚಲು ಕೊಳೆ ರೋಗ ಬರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.
ಇದರ ನಿರ್ವಹಣೆಗಾಗಿ ಶಿಲೀಂದ್ರನಾಶಕಗಳಾದ ಕ್ಯಾ ಕ್ಯಾಪ್ಟನ್ (೨ ಗ್ರಾಂ/ಲಿ) ಅಥವಾ ಜೈರಾಮ್ (೨ ಮಿ.ಲೀ/ಲಿ) ಅಥವಾ ಕ್ಲೋರೋಥಲೋನಿಲ್ (೨ ಗ್ರಾಂ/ಲಿ) ಅಥವಾ ಥಯೋಪೋನೇಟ್ ಮೀಥೈಲ್ (೧ ಗ್ರಾಂ/ಲಿ) ಪ್ರಮಾಣದಲ್ಲಿ ಸಿಂಪರಣೆಯನ್ನು ಪುನರಾವರ್ತಿಸದೇ ೨ ರಿಂದ ೩ ದಿನಗಳ ಅಂತರದಲ್ಲಿ ಕೈಗೊಳ್ಳಬೇಕು. ಮಳೆಯ ತೀವ್ರತೆಗೆ ಅನುಗುಣವಾಗಿ ತೋಟದಲ್ಲಿ ಬ್ಲೋವರನಿಂದ ಗಾಳಿಯನ್ನು ಕೊಡುವ ಮೂಲಕ ಎಲೆ ಮತ್ತು ಗೊಂಚಲಿನಲ್ಲಿರುವ ನೀರು ಮತ್ತು ತೇವಾಂಶ ಬೇಗ ಒಣಗುವಂತೆ ಕ್ರಮ ಕೈಗೊಳ್ಳಬೇಕು.
ಹೂವು ಅರಳುವ ಹಂತದಿAದ ಕಾಳು ಕಟ್ಟು ಹಂತ- ಕ್ಯಾಪ್ ಫಾಲ್ (ಚಾಟನಿಯ ನಂತರ ೩೦-೩೫ ದಿನಗಳಿಂದ ೪೫ ದಿನಗಳವರೆಗೆ) ಈ ಹಂತದಲ್ಲಿ, ಡ್ರಿಪ್ ಬಾಧೆ ಕಾಯಿಕೊಳೆ ರೋಗ ಬಾಧಿಸುವ ಸಾಧ್ಯತೆ ಹೆಚ್ಚು. ಕಾಯಿಗಳು ೩ ರಿಂದ ೪ ಮಿ.ಮೀ, ಗಾತ್ರವಾಗುವರೆಗೆ ಕಾಯಿ/ಗೊಂಚಲು ಕೊಳೆರೋಗದ ನಿರ್ವಹಣೆ ಮಹತ್ವದಾಗಿದೆ.
ಗೊಂಚಲಿನಲ್ಲಿ ನಿಂತಿರುವ ನೀರು ಅಥವಾ ತೇವಾಂಶ ಬೇಗ ಒಣಗಲು ಅನುಕೂಲವಾಗುವಂತೆ ಕಡ್ಡಿಗಳನ್ನು ಕಟ್ಟಬೇಕು. ಮಳೆ ಬಿಡುವಿನ ಸಮಯದಲ್ಲಿ ಬ್ಲೋವರನಿಂದ ಗಾಳಿಯನ್ನು ಕೊಡುವುದರಿಂದ ಎಲೆಗಳ ಹಾಗೂ ಗೊಂಚಲಿನಲಿ ಇರುಬಹುದಾದ ನೀರು ಹಾಗೂ ತೇವಾಂಶವನ್ನು ಒಣಗಿಸಬೇಕು.
ಅದರಂತೆ ಕೆಳಗಿನ ಶಿಲೀಂದ್ರ ನಾಶಕಗಳನ್ನು ಪುನರಾವರ್ತಿಸದೇ ೧ ರಿಂದ ೨ ದಿನದ ಅಂತರದಲ್ಲಿ ಸಿಂಪರಣೆ ಮಾಡಬೇಕು. ಆಝಾಕ್ಸಿ ಸ್ಟ್ರೋಬಿನ್+ಟೆಬುಕೊನಜೋಲ್ ೧ ಮಿ.ಲೀ/ಲೀ, ಆಝಾಕ್ಸಿ ಸ್ಟ್ರೋಬಿನ್+ ಡೈಪೆನೋಕಜೋಲ್ ೧ ಮಿ.ಲೀ/ಲೀ, ಫ್ಲಯೋಪೆರಾವನ್+ಟೆಬುಕೊನಜೋಲ್ ೦.೫೦ ಮಿ.ಲೀ/ಲೀ, ಟ್ರೈಫ್ಲಕ್ಲಿಸ್ಟ್ರೋಬಿನ+ಟೆಬುಕೊನಜೋಲ್ ೦.೫೦ ಗ್ರಾ/ಲೀ ಸಿಂಪರಣೆ ಮಾಡಬೇಕು. ಯಾವುದಾದರೂ ಒಂದು ಶಿಲೀಂದ್ರನಾಶಕವನ್ನು ಸಿಂಪರಣೆ ಕೈಗೊಳ್ಳಬೇಕು. ನಂತರದಲ್ಲಿ ಕೆಳಗಿನ ಶಿಲೀಂದ್ರನಾಶಕಗಳ ಒಂದು ಶಿಲೀಂದ್ರನಾಶಕವನ್ನು ಒಂದು ಬಾರಿಗೆ ಪ್ರತ್ಯೇಕವಾಗಿ ಪುನರಾವರ್ತಿಸದೇ ೧ ರಿಂದ ೨ ದಿನದ ಅಂತರದಲ್ಲಿ ಸಿಂಪರಣೆ ಮಾಡಬೇಕು.
ಮೆಟಿರಾಮ್ ೨.೫ ಗ್ರಾಂ/ಲೀ, ಪ್ರೊಪಿನೆಬ್ ೨.೫ ಗ್ರಾಂ/ಲೀ, ಥಯೋಪೊನೋಬ್ ಮೀಥೈಲ್ ೧ ಗ್ರಾಂ/ ಲೀ, ಕ್ಯಾಪ್ಟನ್ ೨ ಗ್ರಾಂ/ ಲೀ, ಜೈರಾಮ್ ೨ ಮಿ.ಲೀ/ ಲಿ. ಸಿಂಪರಣೆ ಮಾಡಬೇಕು. ಇನ್ನು ಸಾಮಾನ್ಯ ನಿರ್ವಹಣಾ ಕ್ರಮಗಳು ಈ ಕೆಳಗಿನಂತಿವೆ. ಎಲೆ ಮತ್ತು ಗೊಂಚಲಿನಲ್ಲಿ ನೀರು/ ತೇವಾಂಶ ವಿದ್ದಲ್ಲಿ ಸಿಂಪರಣೆಗಿAತ ೧ ಗಂಟೆ ಮುಂಚಿತವಾಗಿ ಬ್ಲೋವರ್ ನಿಂದ ಗಾಳಿಯನ್ನು ಕೊಡಬೇಕು.
ಸಿಂಪರಣೆಯ ನಂತರ ೪ ರಿಂದ ೬ ಗಂಟೆಗಳ ಒಳಗಾಗಿ ಗಿಡದ ಮೇಲಿನ ನೀರು ಕೆಳಗೆ ಬೀಳುವಂತೆ ಮಳೆ ಬಂದರೆ, ಮಳೆ ನಿಂತ ಮೇಲೆ ಮೇಲಿನ ಕ್ರಮವನ್ನು ಅನುಸರಿಸುತ್ತಾ ಮೊದಲಿನ ಶಿಲೀಂದ್ರನಾಶಕವನ್ನೇ ಪುನರ್ ಸಿಂಪರಣೆ ಮಾಡಬೇಕು.
ನಿರಂತರವಾಗಿ ಮಳೆಯಿದ್ದು ಸಿಂಪರಣೆಗೆ ಸೂಕ್ತ ವಾತಾವರಣವಿಲ್ಲದೇ ಇದ್ದಾಗ ಮ್ಯಾಂಕೋಜೆಬ್ ೨ ರಿಂದ ೨.೫ ಕೆ.ಜಿ ಹಾಗೂ ಸಮ ಪ್ರಮಾಣದಲ್ಲಿ ಟಾಕ್ ಪೌಡರ್ (Pಊ-೭.೦೦) ನ್ನು ಬೆರಸಿ ಪ್ರತಿ ಎಕರೆಗೆ ಗಿಡದ ಮೇಲೆ ಸತತವಾಗಿ ನೀರು ಇರುವಾಗ ಮಾತ್ರ ದೂಳೀಕರಿಸಬೇಕು.
ಗಿಡದ ಕಾಂಡ ಹಾಗೂ ಟೊಂಗೆಗಳ ಮೇಲೆ ಗಾಳಿ ಬೇರುಗಳು ಕಂಡುಬAದಲ್ಲಿ ನೀರು ಬಸಿದು ಹೋಗುವಂತೆ ಬಸಿ ಕಾಲುವೆಗಳನ್ನು ಮಾಡಬೇಕು. ಕಾಳುಗಳು ಉದುರವುದು (ಶೇ ೧೦ ರಿಂದ ೨೦ ಕ್ಕಿಂತ ಹೆಚ್ಚಾಗಿ) ಕಂಡು ಬಂದಲ್ಲಿ ೬ಃ ಯನ್ನು ೧೦ ಪಿಪಿಎಂ (೧ಗ್ರಾಂ ಪ್ರತಿ ೧೦೦ ಲೀಟರ್ ನೀರಿಗೆ) ಪ್ರಮಾಣದಲ್ಲಿ ನಾಜಲ್ ಸಿಂಪರಣೆ ವೇಗವನ್ನು ಕಡಿಮೆ ಇರುವಂತೆ ಸಿಂಪರಣೆ ಮಾಡಬೇಕು.
ಮಳೆ ನಿಂತ ನಂತರ ಟ್ರೈಕೋಡರ್ಮಾವನ್ನು ೫ ಗ್ರಾಂ ಅಥವಾ ೫ ಮಿ.ಲೀ/ಲೀ ಪ್ರಮಾಣದಲ್ಲಿ ಸಿಂಪರಣೆ ಕೈಗೊಳ್ಳಬೇಕು. ವಾತಾವರಣ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ಲಘು ಪೋಷಕಾಂಶಗಳನ್ನು (ಅಚಿ, ಒg, ಒಟಿ, ಈe, ಃ ಚಿಟಿಜ Zಟಿ)ನ್ನು ಸಿಂಪರಣೆ ಮೂಲಕ ಒದಗಿಸಬೇಕು.
ಗೋನಿ ಕೆಳಗೆ ೧ ಎಲೆ ಬಿಟ್ಟು ಉಳಿದ ಎಲ್ಲಾ ಎಲೆಗಳನ್ನು (ಕಡ್ಡಿ, ಶೆಂಡಾ ದಟ್ಟವಾಗಿಡದಲಿ ಮತ್ತು ಶೇಂಡಾಗಳು ಜೋರಾಗಿ ಓಡುತ್ತಿದ್ದರೆ) ತೆಗೆದುಹಾಕಬೇಕು. ಅಮೋನಿಯಂ ಮೊಲಿಬೈಟ್ ೧೫ ಗ್ರಾಂ, ಪ್ರತಿ ಎಕರೆಗೆ ಸಿಂಪಡಿಸಬೇಕು.
ತ್ರಿಪ್ಸ್ ನುಶಿಯ ಹಾಗೂ ಹಿಟ್ಟು ತಿಗಣೆಯ ಬಾಧೆ ಕಂಡು ಬಂದಲ್ಲಿ ೦.೩ ಮಿ.ಲೀ ಇಮಿಡಾಕೊಪ್ರಿಡ್ ೧೭.೮ ಎಸ್.ಎಲ್ ಅಥವಾ ೦.೩ ಗ್ರಾಂ ಅಸಿಟಾಮಿಪ್ರಿಡ್ ೨೦ ಎಸ್ಪಿ ಅಥವಾ ೦.೩ ಗ್ರಾಂ ಥೈಯಾಮಿಥೋಕ್ಸಾಮ್ ೨೫ ಡಬ್ಲ್ಯೂಜಿ ಪ್ರತಿ ಅಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
ಪ್ರಸಕ್ತ ವಾತಾವರಣದಲ್ಲಿ ದ್ರಾಕ್ಷಿ ತೋಟಗಳ ನಿರ್ವಹಣೆ ಬಗ್ಗೆ ವಿಜ್ಞಾನಿಗಳಾದ ಡಾ|| ರಮೇಶ, ಡಾ|| ಸತ್ಯನಾರಾಯಣ ಸಿ. ಮತ್ತು ಡಾ|| ಎಸ್.ಜಿ.ಗೊಳ್ಳಗಿ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬಾಗಲಕೋಟ ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ. ಎಚ್.ಎಸ್.ಪಾಟೀಲ ಮತ್ತು ಹೋಬಳಿ ಅಧಿಕಾರಿಗಳಾದ ಶ್ರೀ. ರಾಕೇಶ ರಾಠೋಡ, ಶ್ರೀ. ಭಲರಾಮ ರಾಠೋಡ ಮತ್ತು ಶ್ರೀ. ಗುರುನಾಥ ಬುದ್ನಿ ಅಧಿಕಾರಿಗಳನ್ನೊಳಗೊಂಡ ತಂಡದೊAದಿಗೆ ದಿ: ೧೯.೧೧.೨೦೨೧ ರಂದು ತಿಕೋಟಾ ಮತ್ತು ಸಿದ್ದಾಪೂರ ಗ್ರಾಮದ ರೈತರ ತಾಲೂಕು ಗಳಿಗೆ ಭೇಟಿ ನೀಡಿ ತಮ್ಮ ಬೆಳೆಯನ್ನು ಪ್ರಸಕ್ತ ವಾತಾವರಣದಲ್ಲಿ ನಿರ್ವಹಣೆಗೋಸ್ಕರ ಮತ್ತು ದ್ರಾಕ್ಷಿ ಬೆಳೆದ ರೈತರ ಅನುಕೂಲಕ್ಕಾಗಿ ಹತೋಟಿ ಕ್ರಮಗಳ ಬಗ್ಗೆ ಈ ಮೇಲಿನಂತೆ ಮಾಹಿತಿ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply