Belagavi

ವಿಧ್ಯಾರ್ಥಿಗಳ ಗಮನಕ್ಕೆ: ಬ್ಯಾಂಕ ಖಾತೆಗೆ ಆಧಾರ ಜೋಡನೆ


ಬೆಳಗಾವಿ : 2020-21 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಯ ವಿದ್ಯಾರ್ಥಿ ವೇತನ/ಶುಲ್ಕ ವಿನಾಯತಿ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ತಮ್ಮ ಬ್ಯಾಂಕ ಖಾತೆಗೆ ಆಧಾರ ಜೋಡನೆ (ಎನ್.ಪಿ.ಸಿ.ಐ ಮ್ಯಾಪಿಂಗ್) ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಿಳಿಸಿದೆ.

2020-21 ನೇ ಸಾಲಿನಲ್ಲಿ ಬೆಳಗಾವಿ ತಾಲೂಕಿನಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ/ಶುಲ್ಕ ವಿನಾಯತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳ ಬ್ಯಾಂಕ ಖಾತೆಗೆ ನೇರವಾಗಿ ಶುಲ್ಕ ವಿನಾಯತಿ ಹಣ ಸಂದಾಯವಾಗಿರುತ್ತದೆ. ಇನ್ನೂ ಕೆಲವು ವಿದ್ಯಾರ್ಥಿಗಳ ಖಾತೆಗೆ ಆಧಾರ ಆಧಾರ ಜೋಡನೆ ಯಾಗದಿರುವ ಕಾರಣ ಹಣ ಸಂದಾಯ ಸಾಧ್ಯವಾಗಿರುವದಿಲ್ಲ. ಆದ್ದರಿಂದ ಈ ಬಗ್ಗೆ ಸಂಬಂದಪಟ್ಟ ವಿದ್ಯಾರ್ಥಿಗಳು ತುರ್ತಾಗಿ ತಮ್ಮ ತಮ್ಮ ಬ್ಯಾಂಕುಗಳನ್ನು ಸಂಪರ್ಕಿಸಿ 30/11/2021 ರೊಳಗಾಗಿ ಆಧಾರ ಸಿಡ್ (ಎನ್.ಪಿ.ಸಿ.ಐ ಮ್ಯಾಪಿಂಗ್) ಮಾಡಿಸಿಕೊಳ್ಳಲು ತಿಳಿಸಲಾಗಿದೆ ( ಆಧಾರ ಜೋಡನೆಯಾಗದಿರುವ ವಿದ್ಯಾರ್ಥಿಗಳ ಪಟ್ಟಿ ಈ ಕಾರ್ಯಾಲಯ ಹಾಗೂ ತಮ್ಮ ಕಾಲೇಜಿನಲ್ಲಿ ಲಭ್ಯವಿರುತ್ತದೆ.) ತಪ್ಪದಲ್ಲಿ ತಮ್ಮನ್ನು ಶುಲ್ಕವಿನಾಯತಿ ಮಂಜೂರಾತಿ ಕಾರ್ಯಕ್ರಮದಿಂದ ಕೈ ಬಿಡಲಾಗುವುದು. ಇದು ಅಂತಿಮ ತಿಳುವಳಿಕೆಯಾಗಿರುತ್ತದೆ. ಸಂಬಂದಪಟ್ಟ ಕಾಲೇಜು ಪ್ರಾಚಾರ್ಯರು ವಿದ್ಯಾರ್ಥಿಗಳಿಂದ ಆಧಾರ ಕಾರ್ಡಪ್ರತಿ ಬ್ಯಾಂಕ ಪಾಸ ಬುಕ್ ಪ್ರತಿ ಮತ್ತು (ಎನ್.ಪಿ.ಸಿ.ಐ ಮ್ಯಾಪಿಂಗ್) ವಿನಂತಿ ಪತ್ರದ ಪ್ರತಿಯನ್ನು ಸಂಗ್ರಹಿಸಿ ನೀಡಿದಲ್ಲಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದಲು ಸಹ ಬ್ಯಾಂಕ ಖಾತೆಗೆ ಆಧಾರ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸಲು ಪ್ರಯತ್ನಿಸಲಾಗುವುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯ ದೂರವಾಣಿ ಸಂಖ್ಯೆ 0831-2405692 (9449682543 ತಾಲ್ಲೂಕು ಕಲ್ಯಾಣಾಧಿಕಾರಿಗಳು) ಈ ದೂರವಾಣಿ ಸಂಖ್ಯೆಯನ್ನು ಕಚೇರಿಯ ಅವಧಿಯಲ್ಲಿ ಸಂಪರ್ಕಿಸಲು ತಿಳಿಸಿದೆ.


Leave a Reply