Belagavi

ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಗೊಂದಲ ನಿವಾರಿಸುವಂತೆ ಶಿಕ್ಷಕರ ಸಂಘ ಆಗ್ರಹ


ಬೆಳಗಾವಿ: ನವೆಂಬರ್ 24 ರಿಂದ ನಡೆಯಲಿರುವ ಪ್ರಾಥಮಿಕ ಶಲಾ ಶಿಕ್ಷಕರ ವರ್ಗಾವಣೆಯಲ್ಲಿ ಉಂಟಾಗಿರುವ ಅನಾನುಕೂಲತೆಗಳನ್ನು ಸರಿಪಡಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ಬೆಳಗಾವಿ ಜಿಲ್ಲಾ ಘಟಕದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ನವೆಂಬರ್ 24 ರಿಂದ ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲಗಳುಂಟಾಗಿದ್ದು, ಅವುಗಳನ್ನು ನಿವಾರಿಸಿಕೊಡಬೇಕೆಂದು ಬೆಳಗಾವಿ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಮಾಡಲಾಯಿತು. ಶೇ25 ಖಾಲಿ ಹುದ್ದೆಗಳನ್ನು ಪರಿಗಣಿಸುವಾಗಮಂಜೂರಾದ ಹುದ್ದೆಗಳ ಬದಲಾಗಿ, ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳನ್ನು ಪರಿಗಣಿಸಲಾಗಿದೆ.

ಇನ್ನು ಒಲಯದ ಹೊರಗಡೆ ಶಿಕ್ಷಕರ ವರ್ಗಾವಣೆಗೆ ಅವಕಾಶವಿಲ್ಲ,ಹಿಂದಿ ಹಾಗೂ ಇತರೆ ಶಿಕ್ಷಕರಿಗೆ ಸಾಮಾನ್ಯ ಹುದ್ದೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಜಿಲ್ಲೆಯ ಒಟ್ಟು ಹುದ್ದೆಗಳ ಆಧಾರದ ಮೇಲೆ ವರ್ಗಾವಣೆಗೆ ಪ್ರತಿಶತದಲ್ಲಿ ಖಾಯಿಲೆಗೊಳಗಾದ ಶೇ25 ರಷ್ಟು ಶಿಕ್ಷರಿಗೆ ಬೇರೆ ವಲಯಕ್ಕೆ ವರ್ಗಾವಣೆಯಾಗಲು ಅವಕಾಶ ನೀಡಬೇಕು. ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರಮೇಶ ಗೋಣಿ, ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಹೆಬಳಿ ಮೊದಲಾದವರು ಉಪಸ್ಥಿತರಿದ್ದರು.


Leave a Reply