Belagavi

ಜಿಲ್ಲೆಯ ವಿವಿದೆಡೆ ಎಸಿಬಿ ದಾಳಿ: ಬೇನಾಮಿ ದಾಖಲೆ ವಶಪಡಿಸಿಕೊಂಡ ಅಧಿಕಾರಿಗಳು


ಬೆಳಗಾವಿ: ಜಿಲ್ಲೆಯ ಮೂರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಬೆಳ್ಳಂ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿ ವೇಳ ಅಧಿಕಾರಿಗಳ ಬಳಿ ಕೆಲವು ಬೇನಾಮಿ ದಾಖಲೆಗಳು ದೊರೆತಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯ ಮೂರು ಕಡೆ ದಾಳಿ ನಡೆದಿದ್ದು. ಬೆಳಗಾವಿ ಹೆಸ್ಕಾಂ ತಾಂತ್ರಿಕ ಸಹಾಯಕ ಅಧಿಕಾರಿ ನೇತಾಜಿ ಪಾಟೀಲ್. ಬೈಲಹೊಂಗಲದಲ್ಲಿ ಸಹಾಯಕ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿ ಹಾಗೂ ಬೆಳಗಾವಿ ಸಾರಿಗೆ ಇಲಾಖೆಯ  ವೆಹಿಕಲ್ ಇನ್ಸ್ ಪೆಕ್ಟರ್  ಸದಾಶಿವ ಮರಿಲಿಂಗಣ್ಣವರ್ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಗೋಕಾಕಿನ ಹಿರಿಯ ಮೋಟರ ವಾಹನ ನೀರೀಕ್ಷಕರ ಮನೆ ಮೇಲೆ ಎಸಿಬಿಯವರು ಬೆಳಂ ಬೆಳಗ್ಗೆ  ದಾಳಿ ಮಾಡಿದ್ದಾರೆ ಆರ್ ಟಿ ಓ ಆದಿಕಾರಿ ಸದಾಶಿವ ಮರಲಿಂಗನ್ನವರ ಇವರ  ಗೋಕಾಕದ ವಿವೇಕಾನಂದ ನಗರದಲ್ಲಿರುವ 7ಕ್ರಾಸಿನಲ್ಲಿರುವ ಮನೆಯ ಮೇಲೆ  ಎಸಿಬಿ ಯ ಡಿ,ಎಸ್,ಪಿ, ಕರುನಾಕರ ಅವರು ತಮ್ಮ ಸಿಬ್ಬಂದಿಗಳೊಡನೆ ದಾಳಿ ಮಾಡಿ ಅವರ ಆಸ್ತಿ ಮತ್ತು ಆದಾಯದ ಜೊತೆ ಇತರೆ ದಾಖಲಾತಿಗಳನ್ನು ಪರಿಶಿಲಿಸುತಿದ್ದಾರೆ.

ಅದೇ ರೀತಿಯಾಗಿ ಬೈಲಹೊಂಗಲದ ಸರ್ಕಾರ ಅವರ ಅಧಿಕಾರ ಮತ್ತಿ ಹಾಗೂ ರಾತನ ಸಾರಿಗೆ ಇಲಾಖೆ ಅಧಿಕಾರಿ ಮರಿಲಿಂರ್ಗವ ಅವರ ಮನನ ದರ 1 ಮಾರುವ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮುಂದುವರೆಸಿದ್ದಾರೆ.

ಬೆಳಗಾವಿ ಉತ್ತರ ವಲಯ ಎಸಿಬಿ ಎಸ್ಪಿ ನಾಮಗೌಡ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. – ಈ ದಾಳಿಯಲ್ಲಿ 4 ಡಿವೈಎಸ್ಪಿ 15 ಇನಸ್ಪೆಕ್ಟರ್  60 ಸಿಬ್ಬಂದಿಯೊಂದಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 


Leave a Reply