Belagavi

ಹಾಸಿಗೆ ಇಲ್ಲದೆ ಚಳಿಯಲ್ಲಿ ಮಲಗಿರುವ ವ್ಯಕ್ತಿಗಳಿಗೆ ಹಾಸಿಗೆ ವಿತರಿಸಿದ : ಮಂಜುನಾಥ ಕಾಂಬಳೆ


ಬೆಳಗಾವಿ: ರಾತ್ರಿ ಸಮಯದಲ್ಲಿ ಪುಟ್ಟಪಾತ್ ದಲ್ಲಿ ಎಷ್ಟೋ ಜನರನ್ನ ಮಗಗಿರೊದನ್ನ ಕಂಡು ಕೆಪಿಸಿಸಿ ಕಾರ್ಮಿಕ ಘಟಕದ ಬೆಳಗಾವಿ ಅಧ್ಯಕ್ಷ ಮಂಜುನಾಥ ಕಾಂಬಳೆ ಅವರು ತಾವೇ ಸ್ವಂತ ಹಣದಲ್ಲಿ ಬೆಡ್ಬ ಸಿಟಗಳನ್ನ ಖರೀದಿ ಮಾಡಿ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಬೆಳಗಾವಿಯಲ್ಲಿ ಅದೆಷ್ಟೋ ಜನರು ಬೀದಿ ಬೀದಿಗಳಲ್ಲಿ ಮಲಗಿಕೊಂಡು ವಾಸಿಸುತ್ತಿದ್ದಾರೆ. ಆದರೆ ಎಷ್ಟೋ ಜನರು ನೋಡಿದರು ನೋಡಲಾರದ ಹಾಗೇ ಹೋಗುತ್ತಿದ್ದಾರೆ. ಇದನ್ನೆಲ್ಲಾ ಮನಗಂಡು ಬೆಳಗಾವಿ ಕೆಪಿಸಿಸಿ ಕಾರ್ಮಿಕ ಘಟಕದ ಬೆಳಗಾವಿ ಜಿಲ್ಲಾಧ್ಯಕ್ಷ ಮಂಜುನಾಥ ಕಾಂಬಳೆ ಸಹಾಯ ಹಸ್ತ ಚಾಚಿದ್ದಾರೆ.

ಚಳಿ,ಮಳೆ ಎನ್ನದೇ ಮಲಗಿರೊದನ್ನು ಕಂಡು ಇವರು ತಮ್ಮ ಕಡೆಯಿಂದ ಅವರಿಗೆ ಏನಾದರೂ ಸಹಾಯ ಮಾಡಲೇಬೇಕು ಎಂದಾಗ ಯೋಚನೆಗೆ ಬಂದಿದ್ದು ಅವರಿಗೆ ಹೊದಿಕೆ ನೀಡಬೇಕು ಎಂದು ಅದಕ್ಕೆ ಇವತ್ತು ಸುಮಾರು 30 ಜನರಿಗೆ ಹೊದಿಕೆ ನೀಡಿದ್ದಾರೆ. ಇನ್ನು ಹಲವಾರು ಜನರು ಬೀದಿ ಬದಿಯಲ್ಲಿ ವಾಸಿಸುತ್ತಿದ್ದಾರೆ. ಇದರಿಂದ ದಾನಿಗಳು ನೀವು ಸಹ ನಿಮ್ಮ ಕಣ್ಣಿಗೆ ಕಂಡು ಬಂದರೆ ಸಹಾಯ ಮಾಡಿ ಎಂದು ವಿನಂತಿಸಿಕೊಂಡರು.


Leave a Reply