Belagavi

ಸತತ ಮಳೆಯಿಂದ ಗೋವಿನಜೋಳ ಬೆಳೆಗಾರರಲ್ಲಿ ಕಣ್ಣೀರು: ಮೊಳಕೆಯೊಡೆದು ಕೊಳೆಯುತ್ತಿರುವ ಗೋವಿನಜೋಳ


ಬೆಳಗಾವಿ : ಬೆಳಗಾವಿ ಜಿಲ್ಲಾಧ್ಯದಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೋವಿನಜೋಳ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಸತತ ಮಳೆ ಸುರಿದ ಪರಿಣಾಮ ಗೋವಿನಜೋಳ ಬೆಳೆದ ರೈತರು ಕಣ್ಣೀರು ಸುರಿಸುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ.

ಹಿಂದಿನ ವರ್ಷ ಕೊರೊನಾದಿಂದ ಆರ್ಥಿಕ ತೊಂದರೆ ಅನುಭವಿಸಿದ ರೈತರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹಿಂದಿನಿ ವರ್ಷದಲ್ಲಿ ಸಾಲ ಸೂಲ ಮಾಡಿ ಬೆಳೆದ ಬೆಳೆ ಸರಿಯಾಗಿ ಬೆಲೆ ಸಿಗದೆ. ಸಾಲ ಹಾಗೆ ಉಳಿದು ರೈತರನ್ನು ಆರ್ಥಿಕ ತೊಂದರೆಗೆ ನೂಕಿತ್ತು. ಈ ವರ್ಷ ಉತ್ತಮ ಬೆಳೆ ಬೆಳೆದು ಸಾಲದಿಂದ ಮುಕ್ತಿ ಹೊಂದಬೇಕು ಎಂದುಕೊಂಡಿದ್ದ ರೈತನ ಬದುಕು ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗೋವಿನಜೋಳ ಬೆಳೆ ಹೊಲದಲ್ಲಿಯೆ ಕೊಳೆಯುತ್ತಿದ್ದು, ಗಾಯದ ಮೇಲೆ ಬರೆ ಎಳೆದ ಸ್ಥಿತಿ ಗೋವಿನಜೋಳ ಬೆಳೆದ ರೈತನಿಗಾಗಿದೆ.

ಹಂಚಿನಾಳ ಗ್ರಾಮದಲ್ಲಿ ರೈತರು ಗೋವಿನಜೋಳ ಬಿತ್ತನೆ ಮಾಡಿದ್ದು. ಬಿತ್ತನೆಯಿಂದ ಹಿಡಿದು ಎಣ್ಣೆ ಸಿಂಪಡಣೆ. ಗೊಬ್ಬರ ಮತ್ತು ಕಳೆ ತಗೆಯುವುದು ಇನ್ನಿತರ ಕೆಲಸಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾಲ ಸೂಲ ಮಾಡಿ ಖರ್ಚು ಮಾಡಿ ಬೆಳೆ ಬೆಳದಿದ್ದರು. ಅಲ್ಲದೆ ಈ ಭಾರಿ ಗೋವಿನಜೋಳಕ್ಕೆ ಒಳ್ಳೆಯ ಬೆಲೆ ಬಂದಿದ್ದು ಉತ್ತಮವಾದ ದರದಲ್ಲಿ ಮಾರಟಮಾಡಿ ಸಾಲದಿಂದ ಮುಕ್ತಿ ಹೊಂದಬೇಕು ಎಂದುಕೊಂಡಿದ್ದ ರೈತರ ನಿರೀಕ್ಷೆ ಇದೀಗ ಹುಸಿಯಾಗಿದೆ.

ಗ್ರಾಮದಲ್ಲಿ ಬೆಳೆಯಲಾದ ಗೋವಿನಜೋಳ ಸಂಪೂರ್ಣವಾಗಿ ಮೊಳಕೆ ಒಡೆದಿದ್ದು ಕೊಳೆತು ನಾರುತ್ತಿವೆ. ಸತತವಾಗಿ ನಷ್ಟ ಅನುಭವಿಸುತ್ತಿರುವ ರೈತರ ಬದುಕು ಚಿಂತಾಜನಕವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಗೋವಿನಜೋಳ ಬೆಳೆದ ರೈತರ ಸ್ಥತಿ ಚಿಂತಾಜನಕವಾಗಿದ್ದು ಹೊಟ್ಟೆಗೆ ಮಣ್ಣು ತಿನ್ನುವಂತಾಗಿದೆ.

ತಾಲೂಕಿನಾದ್ಯಂತ ಗೋವಿನಜೋಳ ಬೆಳೆದು ನಷ್ಟ ಅನುಭವಿಸಿದ ರೈತರಲ್ಲಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ದಾವಾಸಿ ಅವರಿಗೆ ಪರಿಹಾರ ನೀಡಿ ಧೈರ್ಯ ಹೇಳಿ ಗೋವಿನಜೋಳ ಬೆಳೆಗಾರರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.


Leave a Reply