Uncategorized

ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಶಾಸಕ ಡಿ.ಎಸ್.ಹೂಲಗೇರಿ ಭೇಟಿ


ಲಿಂಗಸಗೂರು : ತಾಲೂಕಿನ ತುರಡಗಿ ಗ್ರಾಮದಲ್ಲಿ ಸಾಲದ ಬಾದೆ ತಾಳಲಾರದೆ ಓರ್ವ ರೈತ ಸಿದ್ದಪ್ಪ ಮಾದರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ವ್ಯವಸಾಯ ಮಾಡಲು ಅಲ್ಲಿ ಇಲ್ಲಿ ಸಾಲ ಶೂಲ ಮಾಡಿ ಬೀಜ ಗೊಬ್ಬರವನ್ನು ತಂದು ಬಿತ್ತನೆ ಮಾಡಿದ್ದ ಸತತ ಸುರಿದ ಮಳೆಗೆ ಅಪಾರ ಬೇಳೆ ನಾಶವಾಗಿ ಮಾಡಿದ ಸಾಲಕ್ಕೆ ಹೇದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮತ್ತೊಂದು ಭೋಗಾಪುರ ಎಂಬ ಗ್ರಾಮದಲ್ಲಿ ಕೂಡ ರೈತನೊಬ್ಬ ಸಾಲದ ಹೊರೆಯ ಭಾರ ತಾಳಲಾರದೆ ರೈತರಾದ ವೀರನಗೌಡ ಮಾಲಿಪಾಟೀಲ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಶಾಸಕರಾದ ಡಿ ಎಸ್ ಹೂಲಗೇರಿಯವರು ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರ ಮನೆಗೆ ತೆರಳಿ ಕುಟುಂಬಸ್ಥರಿಗೆ ದೈರ್ಯತುಂಬಿ ಸಾಂತ್ವನ ಹೇಳಿದರು. ಹಾಗೂ ವೈಯಕ್ತಿಕ ಧನ ಸಹಾಯಮಾಡಿದರು,ಮತ್ತು ಮಳೆಯಿಂದ ನಾಶವಾಗಿರುವ ಬೆಳೆಗೆ ಪರಿಹಾರ ಕೊಡಿಸುತ್ತೇನೆಂದು ಭರವಸೆ ಕೊಟ್ಟರು.ತುರಡಗಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುಖಂಡರು ಗ್ರಾಮದವರು.ಶಾಸಕರ ಜೊತೆಗೂಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಮತ್ತೆ ಭೋಗಾಪುರ ಗ್ರಾಮದಲ್ಲಿಯು ಕೂಡ ಅನೇಕ ಪಕ್ಷದ ನಾಯಕರು. ಕಾರ್ಯಕರ್ತರು ಸಾಂತ್ವನ ಹೇಳಿದರು.

ವರದಿಗಾರರು :ವೀರಭದ್ರಯ್ಯ.ಬಿ.ಹಿರೇಮಠ.
ಲಿಂಗಸಗೂರು

9980469197-9110863610.


Leave a Reply