Belagavi

ಗುಲಗೋಂಜಿಕೊಪ್ಪ ಯುವಕ ಕಾಣೆ


ಬೆಳಗಾವಿ: ಗುಲಗೋಂಜಿಕೊಪ್ಪ ನಿವಾಸಿ ದಾನೇಶ ಯಲ್ಲಪ್ಪ ಹಾವನ್ನವರ(21) ಎಂಬ ಯುವಕ ಇದೇ ನವೆಂಬರ್ 18 ರಂದು ಗೌಂಡಿ ಕೆಲಸಕ್ಕೆ ಯಾದವಾಡಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದವನು ಮರಳಿ ಬಾರದೆ ಕಾಣೆಯಾಗಿದ್ದಾನೆ.

ಈತನು 21 ವಯಸ್ಸನಾಗಿದ್ದು, 5 ಪುಟ್ 8 ಇಂಚ್ ಸದೃಢ ಮೈಕಟ್ಟು ಹೊಂದಿರುತ್ತಾನೆ. ಹಳದಿ ಕಲರ್ ಟಿಶೇರ್ಟ್ ಹಾಗೂ ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸುರುತ್ತಾನೆ. ಈ ಕುರಿತು ತಾಯಿ ಉದ್ದವ್ವಾ ಯಲ್ಲಪ್ಪ ಹಾವನ್ನವರ ಇವರು ನವೆಂಬರ್ 24 ರಂದು ಬೆಳಗಾವಿಯ ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರ ನೀಡಿರುತ್ತಾರೆ. ಕಾಣೆಯಾದ ಯುವಕ ಮಾಹಿತಿ ಸಿಕ್ಕಲ್ಲಿ 08334. 222233 ದೂರವಾಣಿಗೆ ತಿಳಿಯಲು ಕುಲಗೋಡ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply