Belagavi

ನ.28ಕ್ಕೆ ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ವೀಲ್ ಚೇರ ಕ್ರಿಕೆಟ್ ತ್ರಿಕೋನ ಸರಣಿ


ಬೆಳಗಾವಿ: ವಿಶ್ವಾಸ ಫೌಂಡೇಶನ, ಜೆ.ಬಿ.ಸ್ಪೋರ್ಟ್ಸ್ ಫೌಂಡೇಶನ ಮತ್ತುದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕೆಡಮಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಾಸ ಫೌಂಡೇಶನ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ವಿಶ್ವಾಸ ಕಪ್ 2021ರ ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ವೀಲ್ ಚೇರ ಕ್ರಿಕೆಟ್ ತ್ರಿಕೋನ ಸರಣಿ ಪಂದ್ಯಾವಳಿಯನ್ನು ನವೆಂಬರ್ 28 ರಂದು ಬೆಳಗಾವಿಯ ಎಸ್.ಪಿ. ಮೈದಾನದಲ್ಲಿ ಮುಂಜಾನೆ 9 ಗಂಟೆಯಿಂದ ನಡೆಯಲಿದೆ.

ಬೆಂಗಳೂರು, ತುಮಕೂರು, ಬೆಳಗಾವಿ ತಂಡಗಳು ಭಾಗವಹಿಸಲಿವೆ. ಮುಖ್ಯ ಅತಿಥಿಯಾಗಿ ಶಾಸಕ ಅನಿಲ ಬೆನಕೆ, ಬಿಜೆಪಿ ಯುವ ಮೊರ್ಚಾ ಜಿಲ್ಲಾ ಕಾರ್ಯದರ್ಶಿ ದಿಗ್ವಿಜಯ ಸಿದ್ನಾಳ, ಆರ್ ಪಿ ಐ ಜಾಫರ್ ಶೆಖ್ ಸೇರಿದಂತೆ ಮತ್ತಿತರರು ಉಪಸ್ಥಿತರಿರವರು.


Leave a Reply