Belagavi

ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳಿಂದ ಸಂವಿಧಾನ ದಿನ ಆಚರಣೆ


ಬೆಳಗಾವಿ: ಡಾ. ಬಿ.ಆರ್.ಅಂಬೇಡ್ಕರ ಎಸ್.ಸಿ.ಎಸ್.ಟಿ. ಸಮಾಜ ಸೇವಾ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ ಮೂರ್ತಿಗೆ ಮಾಲಾರ್ಪಣೆ ಮಾಡು ಮೂಲಕ ಭಾರತ ಸಂವಿಧಾನ ದಿನ ಆಚರಣೆ ಆಚರಿಸಲಾಯಿತು.

ವಿವಿಧ ಸಂಘಟನೆಗಳಿಂದ ಶುಕ್ರವಾರ ಬೆಳಗಾವಿ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಗಾರ್ಡನ್ ನಲ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಭಾರತ ಸಂವಿಧಾನ ದಿನ ಆಚರಣೆ ಆಚರಿಸಲಾಯಿತು. ಬಳಿಕ ಪದಾಧಿಕಾರಿಗಳು ಘೋಷಣೆಯನ್ನು ಕೂಗಿದರು.

ಈ ವೇಳೆ ಡಾ. ಬಿ.ಆರ್.ಅಂಬೇಡ್ಕರ ಎಸ್.ಸಿ.ಎಸ್.ಟಿ. ಸಮಾಜ ಸೇವಾ ಸಂಘದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಪ್ರಕಾಶ ಹೊಸಮನಿ ಅವರು ಭಾರತ ಸಂವಿಧಾನದ ಆಚರಣೆ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಭಾರತ ವೈಭವ ಪತ್ರಿಕೆ ಹಾಗೂ ಮಾದ್ಯಮ ಪ್ರಧಾನ ಸಂಪಾದಕ ಎನ್. ಪ್ರಶಾಂತ್ ರಾವ್, ಬ್ಲಾಕ್ ಕಾಂಗ್ರೆಸ್ ಸಮಿತಿ ಹುಕ್ಕೇರಿ ತಾಲೂಕಾಧ್ಯಕ್ಷ ಅಶೋಕ ಅಂಕಲಿ, ಸಮಾಜ‌ ಸೇವಕ ಅಶೋಕ ಚೌಗಲಾ, ಎಸ್.ಟಿ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಡುಮ್ಮನಾಯಿಕ, ಮಹಾವೀರ ತೆಗಡಿ, ಪ್ರಕಾಶ ಮಾಂಗ, ಎಮ್.ಎಸ್.ನಾಯಿಕ, ಪರಶುರಾಮ ಮಾದರ, ಮಂಜುನಾಥ ಹರಿಜನ, ಪ್ರಕಾಶ ಕೆಳಗೇರಿ, ಮಲ್ಲೇಶ ಚೌಗಲೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

ನಂತರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಎಸ್.ಸಿ.ಎಸ್.ಟಿ. ಸಮಾಜ ಸೇವಾ ಸಂಘ(ನೋಂ); ರಾಜ್ಯ ಸಮಿತಿ-ಬೆಂಗಳೂರು ವತಿಯಿಂದ ಭಾರತ ಸಂವಿಧಾನ ದಿನಾಚರಣೆ ನಿಮಿತ್ಯ “ನಮ್ಮ ನಡೆ-ಸಂವಿಧಾನ ಕಡೆ” ಎಂಬ ವಾಕ್ಯದೊಂದಿಗೆ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.


Leave a Reply