Koppal

ಪೊಲೀಸರ ಬಲೆಗೆ ಬಿದ್ದ ಟ್ರಾಕ್ಟರ್ ಟ್ರಾಲಿ ಕಳ್ಳರ ಗುಂಪು


ಕುಷ್ಟಗಿ:ಬಿಡುವಿನ ಸಂದರ್ಭದಲ್ಲಿ ನಿಲ್ಲಿಸಿದ್ದ ರೈತರ ಟ್ರ್ಯಾಕ್ಟರ್ ಟ್ರಾಲಿ ಗಳನ್ನು ಕದ್ದು, ಮಾರಾಟ ಮಾಡುತ್ತಿದ್ದ ಟ್ರಾಕ್ಟರ್ ಟ್ರಾಲಿ ಸ್ಪೆಷಲಿಸ್ಟ್ ಕಳ್ಳರ ಗುಂಪ್ಪೊಂದನ್ನು ಕುಷ್ಟಗಿ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ,ಈ ಕಾರ್ಯಾಚರಣೆಯಲ್ಲಿ ಬಂಧಿತರಿಂದ ಮೂರು ಟ್ರ್ಯಾಕ್ಟರ್ ಟ್ರಾಲಿ ವಶಪಡಿಸಿಕೊಂಡಿದ್ದಾರೆ.

ಕಳೆದ ನ.26ರಂದು ಸಂಗನಾಳ ಗ್ರಾಮದ ಮುದಕನಗೌಡ ಭರಮಗೌಡ ಗೌಡ್ರು ಅವರು, ಗ್ರಾಮದ ನಿರುಪಾದೇಶ್ವರ ಮಠದ ಜಾಗದಲ್ಲಿ ನಿಲ್ಲಿಸಿದ್ದ ಟ್ರಾಲಿ ಕಳ್ಳತನವಾಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಾವರಗೇರಾ ಪಿಎಸೈ ವೈಶಾಲಿ ಝಳಕಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನ.28ರಂದು ನಾಲ್ವರು ಸ್ಪೆಷಲಿಸ್ಟ್ ಕಳ್ಳರು ಟ್ರಾಕ್ಟರ್ ಟ್ರಾಲಿ ತೆಗೆದುಕೊಂಡು ಹೋಗುವಾಗ ಪೊಲೀಸರು ತಡೆದು ವಿಚಾರಣೆಗೆ ಒಳಪಡಿಸಿದಾಗ ಕಲಮಂಗಿ, ನವಲಿ ಗ್ರಾಮದಲ್ಲಿ ಟ್ರಾಕ್ಟರ್ ಟ್ರಾಲಿ ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಎರಡು ಟ್ರಾಕ್ಟರ್ ಟ್ರಾಲಿಗಳನ್ನು ಕನ್ನಾಳದಲ್ಲಿ ಮರೆಮಾಚಿಸಿದ್ದರು. ಟ್ರಾಕ್ಟರ್ ಟ್ರಾಲಿ ಸ್ಪೆಷಲಿಸ್ಟ್ ಕಳ್ಳರನ್ನು ಸಿಂಧನೂರು ತಾಲೂಕಿನ ಕಲಮಂಗಿಯ ವಿರುಪಣ್ಣ ಬಸನಗೌಡ ಹೇರೂರು, ಕಾರಟಗಿ ತಾಲೂಕಿನ ಮೈಲಾಪೂರ ಗ್ರಾಮದ ಮಹಿಬೂಬು ಹಸನಸಾಬ್, ಇದೇ ಗ್ರಾಮದ ಸಿದ್ದಲಿಂಗ ನಾಗಪ್ಪ ಆಕಳಕುಂಪಿ, ಸಂಗನಾಳ ಗ್ರಾಮದ ಯಮನೂರ ರಾಮಣ್ಣ ಕೊಳಬಾಳ ಎನ್ನುವವರನ್ನು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ನಾಲ್ಕು ವಶಪಡಿಸಿಕೊಳ್ಳಲಾದ ಟ್ರಾಕ್ಟರ್ ಟ್ರಾಲಿಗಳನ್ನು ಅಂದಾಜು ಮೌಲ್ಯ 4.20 ಲಕ್ಷ ರೂ ಗಳದೆಂದು ಮೌಲ್ಯದೆಂದು ಪ್ರಥಮ ವರ್ತಮಾನ ವರದಿಯಲ್ಲಿ ಹೇಳಲಾಗಿದೆ. ಪ್ರಕರಣ ದಾಖಲಿಸಿ ಎರಡು ದಿನಗಳಲ್ಲಿ ಡಿಎಸ್ಪಿ ರುದ್ರೇಶ.ಉಜ್ಜೆನಕೊಪ್ಪ ರವರ ನೇತೃತ್ವದಲ್ಲಿ ಸಿಪಿಐ ನಿಂಗಪ್ಪ ಎನ್.ಆರ್ ನೇತೃತ್ವದ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ತಾವರಗೇರಾ ಪಿಎಸೈ ವೈಶಾಲಿ ಝಳಕಿ ,ರವರ ನಾಯಕತ್ವದಲ್ಲಿ ಮಲ್ಲಪ್ಪ ಎ.ಎಸ್.ಐ , ಹಾಗೂ ಸಿಬ್ಬಂದಿಯವರಾದ ಮಹಾಂತೇಶ ಸಿ.ಹೆಚ್.ಸಿ .56 , ಗುಂಡಪ್ಪ ಸಿಪಿಸಿ -126 , ಬಸವರಾಜ ಸಿಪಿಸಿ -72 , ಆನಂದ ಸಿಪಿಸಿ -429 , ಹನಮಗೌಡ ಸಿಪಿಸಿ -455 , ಹಾಗೂ ಜೀಪ ಚಾಲಕರಾದ ಮಂಜುನಾಥ ಎಪಿಸಿ -179 , ಹಾಗೂ ಕರಿಯಪ್ಪ ಎಪಿಸಿ -237 ರವರನ್ನೊಳಗೊಂಡ ಪೊಲೀಸರ ತಂಡವು
ಕಳ್ಳರನ್ನು ಪತ್ತೆಮಾಡಿದ ಕಾರ್ಯಕ್ಕೆ ತಂಡಕ್ಕೆ ಎಸ್ಪಿ ಟಿ.ಶ್ರೀಧರ, ಡಿ.ವೈ.ಎಸ್ಪಿ ರುದ್ರೇಶ ಉಜ್ಜನಕೊಪ್ಪ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply