Koppal

ಹೈದ್ರಾಬಾದ್ -ಕರ್ನಾಟಕ ಯುವಶಕ್ತಿ ಸಂಘಟನೆಯ ವತಿಯಿಂದ , ಹುತಾತ್ಮ ವೀರಯೋಧ ಸಂದೀಪ್ ಉನ್ನಿಕೃಷ್ಣನ್ ನಗರದ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಮೇಣದಬತ್ತಿ ಬೆಳಗಿಸಲಾಯಿತು


 

ಕುಷ್ಟಗಿ:  ಹೈದರಾಬಾದ್-ಕರ್ನಾಟಕ ಯುವಶಕ್ತಿ ಸಂಘಟನೆಯ ನೇತೃತ್ವದಲ್ಲಿ,ನಗರದ ಗಜೇಂದ್ರಗಡ ರಸ್ತೆಗೆ ಹೊಂದಿಕೊಂಡಿರುವ ಹುತಾತ್ಮ ವೀರಯೋಧನ ಸಂದೀಪ್ ಉನ್ನಿಕೃಷ್ಣನ್ ನಗರದ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಮೇಣದಬತ್ತಿ ಬೆಳಗಿಸಲಾಯಿತು.

26/11-2008 ರಲ್ಲಿ ಮುಂಬೈನ ತಾಜ್ ಹೋಟೆಲ್ ಸೇರಿದಂತೆ ವಿವಿಧ ಜನನೀಬಿಡ ಸ್ಥಳಗಳಲ್ಲಿ ನಡೆದ, ಲಷ್ಕರ್-ಇ-ತೋಯ್ಬಾ ಉಗ್ರರ ದಾಳಿಯನ್ನು ನಿಯಂತ್ರಿಸಿ ಹಿಮ್ಮೆಟ್ಟಿಸಲು, ಎನ್ಎಸ್ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ ಪಾತ್ರ ಪ್ರಮುಖ ಮತ್ತು ಸ್ಮರಣೀಯ. ನವಂಬರ್ 28 ಧೈರ್ಯ- ಸಾಹಸ, ತ್ಯಾಗದ ಬಲಿದಾನದ ಪ್ರತೀಕವಾಗಿ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು, ಕುಷ್ಟಗಿಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಗರದ ನಾಮಫಲಕ ಸ್ಥಳದಲ್ಲಿ ಮೇಣದಬತ್ತಿ ಬೆಳಗಿಸುವ ಮೂಲಕ ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ, ತಾಲೂಕು ಮಾಜಿ ಸೈನಿಕರ ಸಂಘ ಅಧ್ಯಕ್ಷ ಹಂಪನಗೌಡ ಬಳೂಟಗಿ, ಸದಸ್ಯರಾದ ಭೀಮನಗೌಡ ಜಾಲಿಹಾಳ,ಶರಣಯ್ಯ ಹಿರೇಮಠ, ಕ.ರಾ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರ ನಜೀರಸಾಬ್ ಮೂಲಿಮನಿ,ಹೈ-ಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ,ಮಂಜುನಾಥ ತಳುವಗೇರಾ,ರಾಘವೇಂದ್ರ ಕುಲಕರ್ಣಿ,ತಾಲೂಕಾಧ್ಯಕ್ಷ ಅಕ್ಬರ್ ನದಾಫ್,ಕುಷ್ಟಗಿ ನಗರ ಘಟಕದ ಅಧ್ಯಕ್ಷ ಬಸವರಾಜ ತಿಮ್ಮಾಪೂರ,ಹೋಬಳಿ ಘಟಕದ ಅಧ್ಯಕ್ಷ ಪರಶುರಾಮ ಈಳಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply