Koppal

ಶ್ರೀಮತಿ ಖಾಜಾಬೀ ಮುಲ್ಲಾರ್,ಗುರುಮಾತೆ ಸೇವಾ ನಿವೃತ್ತಿ-ಆತ್ಮೀಯವಾಗಿ ಬೀಳ್ಕೊಟ್ಟ ಶಾಲಾ ಆಡಳಿತ ಮಂಡಳಿ ಹಾಗೂ ವಿಧ್ಯಾರ್ಥಿಗಳು


ಕುಷ್ಟಗಿ:ಶ್ರೀಮತಿ ಖಾಜಾಬಿ ಮುರ್ತುಜಾಸಾಬ ಮುಲ್ಲಾರ್ – ಗುರುಮಾತೆಯಾಗಿ ಸ.ಮಾ.ಹಿ.ಪ್ರಾ.ಶಾಲೆ ಹಿರೇಮನ್ನಾಪೂರ ಶಾಲೆಯಲ್ಲಿ ಸುದೀರ್ಘ 36 ವರ್ಷಗಳ ಸೇವೆಯಿಂದ ದಿ.30-11-2021 ರಂದು ವಯೋನಿವೃತ್ತಿ ಹೊಂದಿದರು. ನಿಮಿತ್ತ ಶಾಲೆಯ ಸಮಸ್ತ ಶಿಕ್ಷಕ ವೃಂದ, ಶಿಕ್ಷಕೇತರ ಆಯಾ ಹಾಗೂ ಅಡುಗೆ ಸಿಬ್ಬಂದಿಯವರು ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ಶಾಲಾವರಣದ ಅಂಗನವಾಡಿ ಕಾರ್ಯಕರ್ತರು ಮತ್ತು ಸಿಬ್ಬಂದಿ ಸಹ ಪಾಲ್ಗೊಂಡಿದ್ದರು.
ಸಮಸ್ತ ಸಹೃದಯಗಳು ಗುರುಮಾತೆಯರ ಜೊತೆಗಿನ ಒಡನಾಟದ ಸಂತೋಷದ ಕ್ಷಣಗಳನ್ನು ಸ್ಮರಿಸಿ, ಅವರ ಅನುಭವದ ಅನುಭಾವವನ್ನು ನುಡಿ ನಮನಗಳ ಮೂಲಕ ಹಂಚಿಕೊಂಡು ವೇದಿಕೆಯನ್ನು ಭಾವನೆಗಳ ಸಮ್ಮಿಳಿತಗೊಳಿಸಿದರು.
ಗುರುಮಾತೆಯರ ವಿಶ್ರಾಂತ ಸಮಯಗಳು ಆರೋಗ್ಯವಾಗಿ ಸಂತಸದಾಯಕವಾಗಿರಲಿ ಎಂದು ಶುಭ ಹಾರೈಸಿದರು.
ಶ್ರೀಮತಿ ವಿಜಯಲಕ್ಷ್ಮಿ ಮೇಡಂ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಮುಖ್ಯ ಗುರುಗಳಾದ ಶ್ರೀಮತಿ ಶಹನಾಜ್ ಬೇಗಂ ಮೇಡಂ ಅವರು ಮತ್ತು ಉಳಿದ ಶಿಕ್ಷಕ ಶಿಕ್ಷಕಿಯರು ನುಡಿ ನಮನಗಳ ಮೂಲಕ ಶುಭ ಹಾರೈಸಿದರು.

ಶ್ರೀಮತಿ ಖಾಜಾಬಿ ಮೇಡಂ ಅವರು ತಮ್ಮ ಸುದೀರ್ಘ ಸೇವೆಯ ನೆನಪಿಗಾಗಿ ಶಾಲೆಗೆ ಗಾದ್ರೇಜ್ ಒಂದನ್ನು ಕೊಡುಗೆ ನೀಡಿದರು.
ಹಿರೇಮನ್ನಾಪೂರ ಗ್ರಾಮದ ಸಹಸ್ರಾರು ಶಿಷ್ಯ ವೃಂದವು ಸಹ ಗುರುಮಾತೆಯರ ಸೇವೆಯನ್ನು ಸ್ಮರಿಸಿ ಶುಭ ಹಾರೈಕೆಗಳ ಸಂದೇಶಗಳ ಸಾರವನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲಾಯಿತು.
ಹಾಗೂ ಇಲಾಖೆಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಶುಭ ಸಂದೇಶಗಳನ್ನು ಹಾಜರಿದ್ದ ಸಿ.ಆರ್.ಪಿ. ಶ್ರೀ ಅಮರೇಗೌಡ ಅವರು ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಗುರುಮಾತೆಯರ ಕುಟುಂಬದವರು ಹಾಜರಿದ್ದರು ಮತ್ತು ಪುತ್ರರಾದ ಶ್ರೀ ರಾಜಮಹಮ್ಮದ ಮುಲ್ಲಾರ್ ಅವರು ಅಭಿನಂದನ ನುಡಿಗಳನ್ನಾಡಿದರು.
ನಂತರ ಶಾಲೆಯ ಸಮಸ್ತ ಸಿಬ್ಬಂದಿಯು ಗುರುಮಾತೆಯವರನ್ನು ಅವರ ಮನೆಯವರೆಗೂ ಜೊತೆಯಾಗಿ ನಡೆದು ಬೀಳ್ಕೊಡುಗೆ ನೀಡಿದರು.

ಸುದೀರ್ಘ 36 ವರ್ಷಗಳ ಸೇವೆ ಮುಗಿಸಿ ನಿವೃತ್ತಿ ಹೊಂದಿ ಮನಗೆ ಆಗಮಿಸಿದ ತಾಯಿಯವರನ್ನು ಪುತ್ರ ಮತ್ತು ಸೊಸೆ ಹಾಗೂ ಮೊಮ್ಮಕ್ಕಳು ಹೂ ಹಾಸಿಗೆ ಮತ್ತು ಹೂ ಮಳೆ ಮೂಲಕ ಮನೆಗೆ ಸ್ವಾಗತಿಸಿಕೊಂಡ ಕ್ಷಣಗಳು ಮನ ಸಂತಸಗೊಳಿಸಿದವು.

ಮುಖ್ಯ ಗುರುಗಳು & ಸಮಸ್ತ ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

(ನಾನು ಈ ಗುರುಮಾತೆಯವರ ಶಿಷ್ಯನಾಗಿ ಕಲಿತಿದ್ದಕ್ಕೆ ನನಗೂ ಹೆಮ್ಮೆ ಇದೆ.)

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply