Belagavi

ಮಹಾಂತೇಶ ಕವಟಗಿಮಠ ಪರವಾಗಿ ಡಾ.ಪ್ರಭಾಕರ ಕೋರೆ ಚಿಕ್ಕೋಡಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ಮಿಂಚಿನ ಪ್ರಚಾರ


ಬೆಳಗಾವಿ: ಮಹಾತ್ಮ ಗಾಂಧೀಜಿಯವರ ಕನಸಿನ ಭಾರತ ಗ್ರಾಮಗಳ ಅಭಿವೃದ್ಧಿಯಾಗಿತ್ತು. ಗ್ರಾಮಗಳು ಅಭಿವೃದ್ಧಿಹೊಂದಿದರೆ ಮಾತ್ರ ಭಾರತ ಪ್ರಕಾಶಿಸಲು ಸಾಧ್ಯವೆಂಬ ಮಾತಿನಂತೆ, ಇಂದು ಬಿಜೆಪಿ ಸರ್ಕಾರ ಗ್ರಾಮಗಳ ವಿಕಸನದೆಡೆಗೆ ದಿಟ್ಟ ಹೆಜ್ಜೆ ಇಟ್ಟಿದೆ. ನಮ್ಮ ಪಕ್ಷದ ನಿಷ್ಠಾವಂತ ಯುವ ಉತ್ಸಾಹಿ ಕಾರ್ಯಕರ್ತರಾಗಿರುವ ಮಹಾಂತೇಶ ಕವಟಗಿಮಠ ಅವರಿಗೆ ಮೊದಲ ಪ್ರಾಶಸ್ತö್ಯದ ಮತವನ್ನು ನೀಡಿ ಬಹುಮತದಿಂದ ಆಯ್ಕೆಮಾಡಬೇಕೆಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.
ಅವರು ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿಯಾಗಿರುವ ಮಹಾಂತೇಶ ಕವಟಗಿಮಠ ಅವರ ಪರವಾಗಿ ಚಿಕ್ಕೋಡಿ ತಾಲೂಕಿನ ಚಂದೂರ, ಮಾಂಜರಿ, ಇಂಗಳಿ, ಜುಗಳ ಮತ್ತು ಕಾಗವಾಡ ತಾಲೂಕಿನ ಶಿರಗುಪ್ಪಿ, ಉಗಾರ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ಮಹಾಂತೇಶ ಕವಟಗಿಮಠ ಈಗಾಗಲೇ ತಮ್ಮ ಅಧಿಕಾರವಧಿಯಲ್ಲಿ ರೈತರ ಜ್ವಲಂತ ಸಮಸ್ಯೆಗಳನ್ನು ಹತ್ತಿರದಿಂದ ಕಂಡು ಸ್ಪಂದಿಸಿದ್ದಾರೆ. ಬದ್ಧತೆ ಹಾಗೂ ಪ್ರಾಮಾಣಿಕವಾದ ಸೇವೆಯನ್ನು ನೀಡಿದ್ದಾರೆ. ರೈತರಿಗಾಗಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಮೂಲೋದ್ದೇಶವನ್ನು ಕಾರ್ಯರೂಪಕ್ಕೆ ತರುವ ಮೂಲಕ ಗ್ರಾಮಗಳನ್ನು ಪುನಶ್ಚೇತನಗೊಳಿಸಿದ್ದಾರೆ. ನಮ್ಮ ಭಾಗದ ಭರವಸೆಯ ರೈತ ನಾಯಕರಾಗಿರುವ ಕವಟಗಿಮಠ ಅವರಿಗೆ ನಿಮ್ಮ ಮೊದಲ ಪ್ರಾಶಸ್ತö್ಯದ ಮತವನ್ನು ನೀಡಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಿದಾನಂದ ಕೋರೆ ಸಕ್ಕರೆ ಕಾರಖಾನೆ ಚೇರಮನ್ ಭರತ ಬನವಣೆ, ತಾತ್ಯಾಸಾಬ ಕಾಟೆ, ಮಲ್ಲಪ್ಪಾ ಮಹಿಷಾಳೆ, ಅಜಿತ ದೇಸಾಯಿ, ಅಣ್ಣಾ ಯಾದವ, ಅಣ್ಣಾಸಾಹೇಬ ಪಾಟೀಲ, ಶೀತಲ ಪಾಟೀಲ, ಕುಸನಾಳ, ಉಗಾರ, ಜುಗಳ, ಇಂಗಳಿ, ಚಂದೂರ, ಶಿರಗುಪ್ಪಿ, ಮಾಂಜರಿ ಗ್ರಾಮಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


Leave a Reply