Belagavi

ರೈತರ ಸಂಕಷ್ಟಕ್ಕೆ ಸ್ಪಂದಿಸಲು ಜಿಲ್ಲಾಡಳಿತ ಪ್ರಯತ್ನ ಅತೀವೃಷ್ಟಿಯಿಂದ ಹಾನಿಗೀಡಾದ ಬೆಳೆಗಳ ಪರಿಶೀಲಿಸಿದ ಜಿಲ್ಲಾಧಿಕಾರಿ


ಬೈಲಹೊಂಗಲ ೩- ಅತೀವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಶುಕ್ರವಾರ ತಾಲೂಕಿನ ಬೈಲವಾಡ, ದೇವಲಾಪೂರ ಗ್ರಾಮದ ಹದ್ದಿಯಲ್ಲಿರುವ ಜಮೀನಿನಲ್ಲಿ ಬೆಳೆದ ಕಡಲೆ ಬೆಳೆಗಳು ಸೇರಿದಂತೆ ವಿವಿಧ ಬೆಳೆಗಳ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅಕಾಲಿಕ ಹಿಂಗಾರಿನ ಮಳೆಯಿಂದ ಈ ಭಾಗದಲ್ಲಿನ ರೈತರು ಸಾಕಷ್ಟು ತೊಂದರೆಗೀಡಾಗುತ್ತಿರುವದನ್ನು ಮನಗಂಡ ಜಿಲ್ಲಾಧಿಕಾರಿಗಳು ಖುದ್ದಾಗಿ ತಾಲೂಕಿನ ಬೈಲವಾಡ ಕ್ರಾಸ್ ಹತ್ತಿರದ ಜಮೀನುಗಳಿಗೆÀ ಬೇಟಿ ನೀಡಿ ಬೆಳೆದ ಹಾನಿಗೀಡಾದ ಕಡಲೆ ಬೆಳಗಳು ಸೇರಿದಂತೆ ವಿವಿಧ ಬೆಳೆಗಳ ಕುರಿತಾಗಿ ರೈತರ ಸಂಕಷ್ಟಗಳನ್ನು ಆಲಿಸಿ ಹಾನಿ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲು ಭರವಸೆ ನೀಡಿದರು. ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳು ನೇಮಿಸಿದ ಅಧಿಕಾರಿ ತಂಡ, ಸಿಬ್ಬಂದಿ ವರ್ಗ ಪಾರದರ್ಶಕವಾಗಿ ಸಮೀಕ್ಷೆ ನಡೆಸಿ ಹಾನಿಗೀಡಾದ ಅನ್ನದಾತ ರೈತರಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶಿವನಗೌಡಾ ಪಾಟೀಲ ಮಾತನಾಡಿ, ತಾಲೂಕಿನಾದ್ಯಂತ ಅಕಾಲಿಕ ಮಳೆಯಿಂದ ಸುಮಾರು ೫೦೦೦ ಸಾವಿರ ಹೆಕ್ಟೇರ ಬೆಳೆ ಹಾನಿಯಾಗಿವೆ. ಡಿ. ೧ ರಂದು ರಾತ್ರಿ ಸುರಿದ ಬಾರಿ ಮಳೆಗೆ ಮತ್ತಷ್ಟು ಬೆಳೆಗಳು ತೀವ್ರ ಹಾನಿಯಾಗಿದ್ದು ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು ಈ ಕುರಿತು ಅಂದಾಜು ವರದಿ ಮಾಡಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗುವದು ಎಂದರು.
ಸಮೀಕ್ಷೆ ನಡೆಸಿದ ಅಧಿಕಾರಿಗಳ ತಂಡದ ಜೊತೆ ಬೈಲವಾಡದ ರೈತ ಮಂಜುನಾಥ ಮೊರಬದ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈ ಭಾಗದ ರೈತರು ಪರಿಹಾರಕ್ಕಾಗಿ ಬೆಳೆ ವಿಮೆ ಪಾಲಿಸಿ ಮಾಡಿಸಿದ್ದು ಇಲ್ಲಿಯವರೆಗೂ ಕೂಡಾ ಯಾವದೇ ಪರಿಹಾರ ಹಣ ನಮಗೆ ದಕ್ಕಿಲ್ಲ, ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಬೇಕು. ತಕ್ಷಣ ವಿಮಾ ಕಂಪನಿಯವರು ಆಯಾ ಕ್ಷೇತ್ರಗಳಿಗೆ ಕೂಡಲೇ ಬೇಟಿ ನೀಡುವಂತಾಗಬೇಕು. ಬೆಳೆ ಹಾನಿ ಪರಿಹಾರ ಕಾಗದ ಪತ್ರಗಳನ್ನು ಆಯಾ ಗ್ರಾಮ ಲೆಕ್ಕಾಧಿಕಾರಿಗಳೇ ಸ್ವೀಕರಿಸುವಂತಾಗಬೇಕು ಎಂದು ಆಗ್ರಹಿಸಿ ತಮ್ಮ ಅಳಲನ್ನು ತೋಡಿಕೊಂಡಾಗ ಸ್ವತಹ: ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ವಿಮಾ ಕಂಪನಿಯವರ ಜೊತೆ ಖುದ್ದಾಗಿ ಮಾತನಾಡಿ ನೊಂದ ರೈತರಿಗೆ ತಕ್ಷಣ ಪರಿಹಾರ ಕಂಡುಕೊಳ್ಳುಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ಕೃಷಿ ಉಪ ನಿರ್ಧೇಶಕ ಎಚ್.ಡಿ.ಕೋಳೆಕರ, ಉಪವಿಭಾಗಾಧಿಕಾರಿ ಡಾ. ಶಶಿಧರ ಬಗಲಿ, ತಹಶೀಲ್ದಾರ ಬಸವರಾಜ ನಾಗರಾಳ, ಕಂದಾಯ ನೀರೀಕ್ಷಕ ಸುರೇಶ ಮಾಳಗಿ, ತಾಲೂಕಾ ಸಹಾಯಕ ಕೃಷಿ ನಿರ್ಧೇಶಕ ಬಸವರಾಜ ದಳವಾಯಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೀಪಕ ಕೌಜಲಗಿ, ಬೈಲವಾಡ ಗ್ರಾಮ ಲೆಕ್ಕಾಧಿಕಾರಿ ಸುಮಾ ಕೊಲಹಳ್ಳಿ, ಸಹಾಯಕ ಕೃಷಿ ಅಧಿಕಾರಿಗಳಾದ ಬಿ.ಕೆ.ಜಮಾದಾರ, ಚನ್ನಪ್ಪ ಬಂದಕ್ಕನವರ, ಶಂಕರ ಸಂಪಗಾವಿ, ಗ್ರಾ.ಪಂ.ಸದಸ್ಯ ಮಂಜುನಾಥ ಹುಚ್ಚನವರ, ಶಿವನಿಂಗಪ್ಪ ಹಿರೇಬಸಪ್ಪಗೌಡ್ರ, ಮಾಜಿ ಗ್ರಾ.ಪ.ಸದಸ್ಯ ವೀರನಗೌಡಾ ಗಿರೆಪ್ಪಗೌಡರ, ಶಂಕರ ಗಾಡದ, ಮಹಾಂತೇಶ ಪಾಟೀಲ ಸೇರಿದಂತೆ ಹಲವಾರು ರೈತರು ಇದ್ದರು.


Leave a Reply