Belagavi

ನ್ಯಾಯವಾದಿಗಳ ದಿನಾಚರಣೆ ಕಾರ್ಯಕ್ರಮ


ಸವದತ್ತಿ: ತಾಲೂಕಾ ಕಾನೂನು ಸೇವಾ ಸಮಿತಿ ಸವದತ್ತಿ, ಹಾಗೂ ವಕೀಲರ ಸಂಘ ಸವದತ್ತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕಃ 03-12-2021 ರಂದು ಮುಂಜಾನೆ 10-00 ಗಂಟೆಗೆ ನ್ಯಾಯವಾದಿಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯವಾದಿಗಳ ಹೊಸ ಸಬಾಭವನ ಸವದತ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಶ್ರೀ. ಬಿ.ಎಮ್.ಯಲಿಗಾರ ರವರು ನ್ಯಾಯವಾದಿಗಳ ದಿನಾಚರಣೆ ಅಂಗವಾಗಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಉದ್ಫಾಟನೆಯನ್ನು ನೇರವೇರಿಸಿ ಮಾತನಾಡಿದ ಸವದತ್ತಿಯ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಶ್ರೀ. ಶಶಿಧರ ಎಮ್. ಗೌಡ, ರವರು ಹಿರಿಯ ನ್ಯಾಯವಾದಿಗಳು ಕೊಟ್ಟಂತಹ ಮಾರ್ಗದರ್ಶನವನ್ನು ಹಾಗೂ ಕಾನೂನು ತಿಳುವಳಿಕೆಯನ್ನು ಮತ್ತು ಅವರ ಅಪಾರವಾದ ಜ್ಞಾನವನ್ನು ಮುಂದಿನ ಪಿಳಿಗೆಗೆ ತಿಳಿಸುವುದು ಹಾಗೂ ಪಾಲಿಸುವುದು ಮತ್ತು ಅಳವಡಿಸಿಕೊಳ್ಳುವುದು ಎಲ್ಲ ಕಿರಿಯ ನ್ಯಾಯವಾದಿಗಳ ಆಧ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಶ್ರೀ ಎಚ್. ಎನ್. ಕಿತ್ತೂರ, ಶ್ರೀ ಎಮ್. ಬಿ. ಏಣಗಿ, ಶ್ರೀ ಬಿ. ವಿ. ಮಲಗೌಡರ, ಶ್ರೀ ಎಸ್. ಟಿ. ತೊರಗಲ್ಲಮಠ ಹಾಗೂ ಶ್ರೀ ಆರ್.ಬಿ.ಶಂಕರಗೌಡರ ನ್ಯಾಯವಾದಿಗಳಿಗೆ ಗೌರವಪೂರ್ವಕ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ 2ನೇ ಹೆಚ್ಚುವರಿ ದಿವಾಣಿ ಹಾಗೂ ಜೆ. ಎಂ. ಎಫ್. ಸಿ ನ್ಯಾಯಾಧೀರಾದ ಶ್ರೀ ಹರೀಶ ಜಿ, ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಎಸ್. ಎಮ್. ನದಾಫ, ಶ್ರೀ ಎಸ್. ಎಮ್. ಜಂಬೂನವರ ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶ್ರೀ ಸಿ. ವಿ. ಸಾಂಭಯ್ಯನಮಠ, ಪದಾಧಿಕಾರಿಗಳಾದ ಶ್ರೀ ಪಿ. ಎನ್. ಡೊಳ್ಳಿನ, ಶ್ರೀ ಎಸ್. ಎಸ್. ಮಾನೆ, ಶ್ರೀ ಎಸ್. ಎಸ್. ಗಿರಿಜನ್ನವರ, ಮಹಿಳಾ ಪ್ರತಿನಿಧಿ ಶ್ರೀಮತಿ ಜಯಶ್ರೀ ಪೂಜೇರ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಶ್ರೀ ಎಮ್. ಎಮ್. ಮಡಿವಾಳರ ಸ್ವಾಗತಿಸಿದರು, ಶ್ರೀ ಎಸ್. ಎಸ್. ಮಾನೆ, ನಿರೂಪಿಸಿದರು, ಶ್ರೀ ಸಿ. ವಿ. ಸಾಂಭಯ್ಯನಮಠ, ವಂದಿಸಿದರು.


Leave a Reply