Koppal

ಭ್ರಷ್ಟ ಬಿಜೆಪಿ ಪಕ್ಷಕ್ಕೆ ಮತ ನೀಡಬೇಡಿ-ಮಾಜಿ ಸಚಿವ ಬಸವರಾಜ ರಾಯರಡ್ಡಿ


ಕುಷ್ಟಗಿ:28,ನವೆಂಬರ್:ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಮಾಜಿ ಸಚಿವರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಗ್ರಾಮಗಳನ್ನು ಅಭಿವೃದ್ಧಿ ಮಾಡುವದನ್ನು ಬಿಟ್ಟು,ಬರೀ ಭ್ರಷ್ಟಾಚಾರ ದಲ್ಲಿ ತುಂಬಿ ತೇಲಾಡುತ್ತಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಎಂದರು.

40% ಸರ್ಕಾರ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ ,ಅಂದರೆ ಎಷ್ಟರ ಮಟ್ಟಿಗೆ ವಸೂಲಿ ಗೆ ಇಳಿದಿರಬಹುದು ಮತದಾರರೇ ನೀವೇ ಆಲೋಚನೆ ಮಾಡಿ ,ಹಾಗಾಗಿ ಇಂತಹ ಪಕ್ಷಕ್ಕೆ ಮತ ನೀಡಬೇಡಿ,ಕಾಂಗ್ರೆಸ್ ಪಕ್ಷದ ಶರಣಗೌಡ ಬಯ್ಯಾಪೂರ ಅವರಿಗೆ ಮತ ನೀಡಿ ಜಿಲ್ಲೆ ಯ ಅಭಿವೃದ್ಧಿ ಕೈಜೋಡಿಸಿ ಎಂದರು.

ಪ್ರತಿನಿತ್ಯ ಸುಳ್ಳು ಹೇಳುವುದನ್ನೆ ರೂಢಿ ಮಾಡಿಕೊಂಡಿರುವ ಪಕ್ಷ ಅದು ಬಿಜೆಪಿ ಪಕ್ಷ ಹಾಗಾಗಿ ಆ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಡಿ ಎಂದರು.ಜೊತೆಗೆ ಕೊಪ್ಪಳ ಜಿಲ್ಲಾ ನೀರಾವರಿ ಯೋಜನೆಬಗ್ಗೆ ಸುಧೀರ್ಘವಾಗಿ ಮಾತನಾಡಿದರು.

ವಿಧಾನ ಪರಿಷತ್ ಅಭ್ಯರ್ಥಿ ಶರಣಗೌಡ ಬಯ್ಯಾಪೂರ ಮಾತನಾಡಿ ಕಾಂಗ್ರೇಸ್ ಪಕ್ಷದ ಚುನಾಯಿತ ಸದಸ್ಯರು , ನನಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ,ರಾಘವೇಂದ್ರ ಹಿಟ್ನಾಳ,ಬಸನಗೌಡ ತುರ್ವಿಹಾಳ ಮಾಜಿ ಸಂಸದ,ಬಿ.ವಿ.ನಾಯಕ,ಕಾಂಗ್ರೆಸ್ ಪಕ್ಷ ದ ಕೊಪ್ಪಳ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಹಸೇನಸಾಬ ದೋಟಿಹಾಳ, ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವಿಂದ್ರಪ್ಪ ಬಳೂಟಗಿ,ಮುಖಂಡರಾದ ಫಕೀರಪ್ಪ ಚಳಿಗೇರಿ,ಶೇಖರಗೌಡ ಮಾಲಿ ಪಾಟೀಲ್,ಮಾಲತಿ ನಾಯಕ,ಶಕುಂತಲಾ ಹಿರೇಮಠ,ಶಾರದಾ ಕಟ್ಟಿಮನಿ, ಮಹಾಂತೇಶ ಅಗಸಿಮುಂದಿನ,ಸುರೇಶ ಕುಂಟನಗೌಡ್ರು ಸೇರಿದಂತೆ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply