Koppal

ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಆಶೀರ್ವದಿಸಿ- ಶಿವನಗೌಡ ನಾಯಕ ಮತಯಾಚನೆ


ಕುಷ್ಟಗಿ:ಡಿಸೆಂಬರ್,3. ರಾಯಚೂರು- ಕೊಪ್ಪಳ, ಕ್ಷೇತ್ರ ಮತದಾರರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಆಶೀರ್ವಾದ ಮಾಡುತ್ತಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಸಚಿವ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಪಟ್ಟಣದ ಪಿಸಿಎಚ್ ಕಲ್ಯಾಣ ಮಂಟಪದಲ್ಲಿ ಕುಷ್ಟಗಿ ಬಿಜೆಪಿ ಮಂಡಲದ ವತಿಯಿಂದ ಆಯೋಜಿಸಿದ್ದ ರಾಯಚೂರು-ಕೊಪ್ಪಳ ಜಿಲ್ಲೆಯ ಸ್ಥಳಿಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆ ಪ್ರಚಾರ ಸಮಯದಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ಎನ್ನುವುದು ಬುಧ್ಧಿಜೀವಿಗಳ ಹಾಗೂ ಸುಸಂಕೃತ ವ್ಯಕ್ತಿಗಳ ಸದನ ಆ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷವು ಬಹುಭಾಷಾ ಪರಿಣಿತ, ವಿಧ್ಯಾವಂತ, ಸಾಮಾಜಿಕ ಸೇವಕರಾದ ವಿಶ್ವನಾಥ ಬನಹಟ್ಟಿಯವರನ್ನು ಆಯ್ಕೆ ಮಾಡಿದ್ದು ಪುರ ಸಭೆ/ಗ್ರಾ.ಪಂ.ಸ್ಥಳಿಯ ಚುನಾಯಿತ ಪ್ರತಿನಿಧಿಗಳಾದ ತಾವುಗಳು ಪ್ರಬುದ್ದರಿದ್ದು, ಓರ್ವ ರೈತ ಒಂದು ಎತ್ತನ್ನು ಖರೀದಿ ಮಾಡಬೇಕಾದರೆ ಅದರ ಸುಳಿ ಅದರ ಹಾಗೂ ಹೋಗುಗಳನ್ನು ನೋಡಿ ಖರೀದಿಸುತ್ತಾನೋ ಹಾಗೆ ನಮ್ಮ ವಿರುದ್ಧ ಸ್ಪರ್ಧೆ ಮಾಡಿರುವ ಎತ್ತಿನ ಸುಳಿ ತುಂಬಾ ಸುಮಾರಾಗಿದ್ದು ವಿಶ್ವ ಮೆಚ್ಚಿದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ವಿರುದ್ಧ ಹೇಗೆ ನಾಲಿಗೆ ಹರಿಬಿಟ್ಟಿದ್ದಾನೆ. ಎನ್ನುವದನ್ನು ತಾವು ಗಮನಿಸಿದ್ದೀರಿ ಹಾಗಾಗಿ ೨೦೨೩ರ ವಿಧಾನ ಸಭೆ ಚುನಾವಣಾ ಧಿಕ್ಸೂಚಿಯಾದ ಈ ಚುನಾವಣೆಯಲ್ಲಿ ವಿಶ್ವನಾಥರನ್ನು ಗೆಲ್ಲಿಸಿ ದೊಡ್ಡನಗೌಡರ ಕೈ ಬಲಪಡಿಸಿ ಎಂದರು.

ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿ ಮಾತನಾಡಿದ ಮಾಜಿ ಕೆಡಿಪಿ ಸದಸ್ಯ ಕಂದಕೂರಪ್ಪ ವಾಲ್ಮೀಕಿ ಮಾತನಾಡಿ ದೊಡ್ಡನಗೌಡ ನನ್ನ ಸಂಬಂಧ ಸಹೋದರತ್ವ ಸಂಬಂಧ ನಾನು ಪಕ್ಷ ತ್ಯಜಿಸಿದ್ದರೂ ನಮ್ಮ ಸಂಬಂದ ಕ್ಕೆ,ಯಾವುದೇ ಧಕ್ಕೆ ಆಗಿರಲಿಲ್ಲ ತಾಲೂಕ ಪಂಚಾಯತ ಟಿಕೇಟ್ ನೀಡುವ ವಿಚಾರದಲ್ಲಿ ನಾನು ಮತ್ತು ನನ್ನ ಶ್ರೀಮತಿ ಪಕ್ಷ ತೊರೆದಿದ್ದೆವು ಆದರೆ ಶಾಸಕ ಅಮರೇಗೌಡ ಬಯ್ಯಾಪುರವರ ಸ್ವಭಾವ ಕಾರ್ಯಕರ್ತರನ್ನು ತಮ್ಮ ಚುನಾವಣೆಗೆ ಬಳಸಿಕೊಂಡು ನಂತರ ಬೀಸಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ ಹಾಗಾಗಿಯೇ ನಾನು ನಿಮ್ಮನ್ನು ಶಾಸಕರನ್ನು ಮಾಡುವಲ್ಲಿ ಪ್ರಯತ್ನಿಸಿದ್ದೆ ತಾವು ನನ್ನನ್ನು ಕೆಡಿಪಿ ಸದಸ್ಯ ಮಾಡಿದ್ರಿ ಅಲ್ಲಿಗೆ ಸರಿಯಾಯಿತು ಎಂದು ನಾನು ನನ್ನ ಮಾತೃ ಪಕ್ಷಕ್ಕೆ ಬಂದಿದ್ದೇನೆ ಎಂದರು.ಇದೇ ಸಂದರ್ಭದಲ್ಲಿ ಇನ್ನೂ ಹಲವರು ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.

ರಾಜ್ಯ ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಮಾತನಾಡಿ ವಿಧಾನಪರಿಷತ್ ಚುನಾವಣೆಯನ್ನು ಕೌರವ ಪಾಂಡವರ ಕುರುಕ್ಷೇತ್ರಕ್ಕೆ ಹೋಲಿಸಿ ಮಾತನಾಡಿದರು.

ಪಕ್ಷ ದ ಅಭ್ಯರ್ಥಿ ವಿಶ್ವನಾಥ ಬನಟ್ಟಿ ಯವರು ರಾಯಚೂರು ಮತ್ತು ಕೊಪ್ಪಳ ಜಿಲ್ಲೆ ಯ ಮತದಾರು ನನಗೆ ಆಶೀರ್ವಾದ ಮಾಡಬೇಕೆಂದು ಕೈಮುಗಿದು ಮನವಿ ಮಾಡಿ ಕೊಂಡರು.

ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಮಾತನಾಡಿ ಹಣ ಮಧ ಅಧಿಕಾರ ಮಧ ಯಾರ ತಲೆಗೆ ಏರಿದಿಯೋ ಅದನ್ನು ಇಳಿಸುವ ಕೆಲಸ ಮಾಡುವುದು ಕುಷ್ಟಗಿ ಕ್ಷೇತ್ರದ ಜನತೆಗೆ ಚೆನ್ನಾಗಿ ಗೊತ್ತು ಎಂದರು.

ಕಾರ್ಯಕ್ರಮ ಉದ್ದೇಶಿಸಿ ಹಾಲಪ್ಪ ಆಚಾರ, ವಿಧಾನ ಪರಿಷತ್ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ, ಮಾಜಿ ಶಾಸಕ ಹಿರಿಯ ಮುಖಂಡ ಶರಣಪ್ಪ ವಕೀಲರು ಮತ ಯಾಚನೆ ಮಾಡಿದರು.

ಪ್ರಾಸ್ಥಾವಿಕವಾಗಿ ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು ಮಾತನಾಡಿದರು.
ಸಂತಾಪ ಸೂಚನೆ: ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ವಿಭಾಗದ ಸಂಚಾಲಕ ರಾಘವೇಂದ್ರ ಎಂಬ ಯುವಕ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಕೆ.ಹಿರೆಮಠ, ಮಲ್ಲಣ್ಣ ಪಲ್ಲೇದ, ಚಂದ್ರಶೇಖರ ಹಲಗೇರಿ, ನವೀನ್ ಗುಳಗಣ್ಣವರ, ಅಮರೆಗೌಡ ಜಾಲಿಹಾಳ, ವಿಠ್ಠಪ್ಪ ಶ್ರೇಷ್ಠಿ ನಾಗೂರು, ನಾಗರಾಜ ಮೇಲಿನಮನಿ, ಮುತ್ತು ರಾಥೋಡ, ವಿಜಯ ನಾಯಕ,ರಮೇಶ ನಾಡಿಗೇರ, ಅನ್ನಪೂರ್ಣಮ್ಮ ಕಂದಕೂರಪ್ಪ, ಪ್ರಕಾಶ್ ರಾಥೋಡ, ಶಶಿಧರ ಕವಲಿ, ಕೆ.ಮಹೇಶ, ಸಂಗನಗೌಡ ಜೈನರ, ಚಂದ್ರಶೇಖರ ವಡ್ಡಿಗೇರಿ, ಮಂಜುನಾಥ ಜೂಲಕುಂಟಿ ಸೇರಿದಂತೆ ಗ್ರಾ.ಪಂ.ಸದಸ್ಯರು ಹಾಗೂ ಜನಪ್ರತಿನಿಧಿಗಳು ಇದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply