Koppal

ಕಾರ್ತಿಕ ಮಾಸದ ನಿಮಿತ್ಯ ಶ್ರೀ ಮಾರುತೇಶ್ವರನ ಕೃಪೆಗೆ ಪಾತ್ರರಾದ ಕೊರಡಕೇರಾ ಗ್ರಾಮಸ್ಥರು


ಕುಷ್ಟಗಿ: ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಅತ್ಯಂತ ಸಡಗರ ಸಂಭ್ರಮದಿಂದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅತ್ಯಂತ ಅದ್ಧೂರಿಯಿಂದ ಜಾತ್ರಾ ಕಾರ್ಯಕ್ರಮಗಳು ನೆಡೆದವು.

೧೫ ದಿಗಳ ಕಾಲ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಶ್ರೀ ಸಜ್ಜಲಗುಡ್ಡದ ಶರಣಮ್ಮನವರ ಪುರಾಣ ಪ್ರವಚನವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ೧೦೮ ಷ.ಬ್ರ. ಕರಿಬಸವೇಶ್ವರ ಮದ್ದಾನಿ ಹಿರೇಮಠ ಮಾಹಾ ಸ್ವಾಮಿಗಳು, ಶ್ರೀ ೧೦೮. ಷ.ಬ್ರ. ಶ್ರೀ ಚನ್ನಬಸವೇಶ್ವರ ಮಾಹಾ ಸ್ವಾಮಿಗಳು ನಿಡಶೇಸಿ,ವ. ಗೆಜ್ಜೆಬಾವಿ ಇವರು ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಊರಿನ ಭಕ್ತರಿಗೆ ಆಶೀರ್ವಚನೆ ನೀಡಿದರು. ತದನಂತರ ಗ್ರಾಮಸ್ಥರು ಶ್ರೀ ಮಾರುತಿ ದೇವರಿಗೆ ದೀರ್ಘ ಧಂಡ ನಮಸ್ಕಾರವನ್ನು ಹಾಕಿ ನೈವೇಧ್ಯವನ್ನು ಅರ್ಪಿಸಿ ಕಾಯಿ ಕರ್ಪೂರದಿಂದ ಪೂಜಿಸಿ ಶ್ರೀ ಮಾರುತೇಶ್ವರನ ಕೃಪೆಗೆ ಪಾತ್ರರಾದರು.
ಸಂಜೆ ೫.೩೦ ಗಂಟೆಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ರಾಜಕೀಯ ಗಣ್ಯವ್ಯಕ್ತಿಗಳು ಸೇರಿ ಉತ್ಸವ ಮೂರ್ತಿಗೆ ಚಾಲನೆ ನೀಡಲಾಯಿತು. ಊರಿನ ಗ್ರಾಮಸ್ಥರು ಸೇರಿ ಶ್ರೀ ಮಾರುತಿ ದೇವರ ಉತ್ಸವ ಮೂರ್ತಿಗೆ ಉತ್ತತ್ತಿ, ಬಾಳೆ ಹಣ್ಣು, ಮಂಡಾಳು, ಅರ್ಪಿಸಿದರು. ಈ ಸಂದರ್ಭದಲ್ಲಿ ಊರಿನ ಗುರು ಹಿರಿಯರು ಉಪಸ್ಥಿತರಿದ್ದರು.

ಶೇಖರ ಎಸ್ ಗೊರೇಬಾಳ
ಕುಷ್ಟಗಿ


Leave a Reply