Belagavi

ನಮ್ಮಲ್ಲಿ ಮೋಸಗಾರರಿಲ್ಲ ಅದಕ್ಕೆ ನಾವು ಸೋಲುವ ಮಾತೇ ಇಲ್ಲ: ಡಿಕೆಶಿ


ಬೆಳಗಾವಿ: ರಾಜ್ಯದಲ್ಲಿ ಇಡೀ ಪಕ್ಷ ಒಮ್ಮತದಿಂದ ಕೆಲಸ ಮಾಡುತ್ತಿದ್ದಾರೆ, ಅಭ್ಯರ್ಥಿ ಆಯ್ಕೆಯಲ್ಲಿ ಒಂದು ಕಡೆ ಮಾತ್ರ ಭಿನ್ನಮತ ಇತ್ತು, ಈ ಚುನಾವಣೆ ಆದ ಬಳಿಕ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಾರೆ ಇದೇ ನಮ್ಮ ಪಕ್ಷದ ಮೊದಲ ಗೆಲವು ಆದರೆ ಬಿಜೆಪಿಯಲ್ಲಿ ಹಾಗಿಲ್ಲ ಒಂದೇ ವೇದಿಕೆ, ಒಂದೇ ಜನ ಎರಡು ಬಾಷಣ ಮಾಡ್ತಿದಾರೆ ಬಿಜೆಪಿ ಇಷ್ಟೊಂದು ವೀಕ್ ಆಗಿದೆ ಅಂತಾ ನಮಗೆ ಗೊತ್ತಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ಕಾಲೆಳೆದಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾದ್ಯಗಳೊಂದಿಗೆ ಮಾತನಾಡಿದ ಅವರು  ಬೆಳಗಾವಿಯಲ್ಲಿ ನಮಗೆ ಯಾರು ಎದುರಾಳಿ ಇಲ್ಲ ನಮ್ಮಲ್ಲಿ ಯಾರು ರೆಬಲ್ ಇಲ್ಲ, ಪಕ್ಷಕ್ಕೆ ಮೋಸ ಮಾಡಿದವರು ಯಾರು ಇಲ್ಲಆದ್ದರಿಂದ ನಾವು ಬಹುಮತದಿಂದ ಗೆಲ್ತಿವಿ ಅಂದಿದ್ದಾರೆ.  ರಾಜ್ಯದಲ್ಲಿ ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪಾಪ ಯಡಿಯೂರಪ್ಪ ಅವರಿಗೆ ಆದ ನೋವನ್ನ ಬಿಜೆಪಿ ಅವರ ಮೇಲೆ ಹೇಳಲು ಆಗಲ್ಲ‌‌ ಅವರ ದುಃಖ, ದುಮ್ಮಾನ, ರೇಡ್ ಮಾನಸಿಕ ಹಿಂಸೆ ರಾಜೀನಾಮೆ ಹೊರ ಹಾಕಬೇಕು, ನಾವು ಫ್ರೀಯಾಗಿದೀವಿ ನಮ್ಮ ಮೇಲೆ ಹಾಕ್ತಿದ್ದಾರೆ ಹಾಕಲಿ ನಮ್ಮನ್ನ ಪರ್ಮನೆಂಟ್ ಆಗಿ ವಿರೋಧ ಪಕ್ಷದಲ್ಲಿ ಕುಡಿಸಲಿ ಎಂದು ಪ್ರತಿಕ್ರಯಿಸಿದರು.

ಸರ್ಕಾರದ ಸ್ಥಿರತೆಯನ್ನ ನಾವು ಹಾಳು ಮಾಡ್ತಿಲ್ಲ ಅವರ ಪಕ್ಷದವರೇ ಹಾಳು ಮಾಡುತ್ತಿದ್ದಾರೆ ರಾಷ್ಟ್ರೀಯ ಪಕ್ಷದವರಿಗೆ ಈ ರಾಜ್ಯವನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳಲು ಆಗುತ್ತಿಲ್ಲ ಲಂಚ ಕೊಡ್ತಿರುವ ಗುತ್ತಿಗೆದಾರರೇ ನಲವತ್ತು ಪರ್ಷಂಟ್ ಅಂತಾ ಹೇಳಿದ್ದಾರೆ ನಮಗೆ ಹತ್ತು ಪರ್ಷಂಟ್ ಅಂತಾ ಹೇಳಿದ್ದರು  ಯಾವುದಾದರೂ ನಮ್ಮ ಮೇಲೆ ಕೇಸ್ ಇತ್ತಾ? ಎಂದು ಪ್ರಶ್ನಿಸಿದರು.

ಶಿವಕುಮಾರ್ ಎಷ್ಟು, ಸಿದ್ದರಾಮಯ್ಯ ಎಷ್ಟು ಇಸ್ಕೊಂಡಿದ್ದಾರೆ ಅಂತಾ ಪ್ರಧಾನಿ ತನಿಖೆ ಮಾಡಿಸಬೇಕಿತ್ತು. ಈಗ ಶಾಸಕರಿಗಿಷ್ಟು, ಮಂತ್ರಿಗಳಿಗೆ ಇಷ್ಟು ಅಂತಾ ದೊಡ್ಡ ಲಿಸ್ಟ್ ಕೊಟ್ಟಿದ್ದಾರೆ ತನಿಖೆ ಮಾಡಿಸಲಿ. ಬೇರೆ ಯಾರು ಕೊಟ್ಟಿಲ್ಲ ಒಂದು ಲಕ್ಷ ಗುತ್ತಿಗೆದಾರರಿರುವ ಸಂಘಟನೆ ಅವರು ನೀಡಿದ್ದಾರೆ. ಇಡಿ ದೇಶದಲ್ಲೇ ಅತ್ಯಂತ ಭ್ರಷ್ಟಾಚಾರ ಸರ್ಕಾರ ಈ ರಾಜ್ಯದಲ್ಲಿದೆ ಎಂದು ಸರಕಾರದ ವಿರುದ್ಧ ಹರಿಹಾಯ್ದರು.

ಡಿ. 13ರಂದು ಬೆಳಗಾವಿಯಲ್ಲಿ ಅಧಿವೇಶನಕ್ಕೆ ಕೆಲವರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಅಧಿವೇಶನ ಬೆಳಗಾವಿಯಲ್ಲಿ ಮಾಡುವಂತೆ ನಾನೇ ಒತ್ತಡ ಹಾಕಿದ್ದೆ ಈಗ ಒತ್ತಡದಲ್ಲಿ ಅಧಿವೇಶನ ಮಾಡುತ್ತಿದ್ದಾರೆ ಅದನ್ನು ಎನಾದ್ರೂ ಮಾಡಿ ಮುಂದೆ ಹಾಕುವ ಪ್ರಯತ್ನ ಮಾಡ್ತಿದ್ದಾರೆ ಅಧಿವೇಶನ ಮುಂದುಡದಂತೆ ಸ್ಪೀಕರ್ ಅವರಿಗೆ ಹೇಳಿದೀನಿ ನಾವು ಸಾಮೂಹಿಕವಾಗಿ ದೊಡ್ಡ ಪ್ರತಿಭಟನೆ ಮಾಡುತ್ತೇವೆ ಎಂದರು.


Leave a Reply