Belagavi

ದಾಂಡೇಲಿ ಮತ್ತು ಬೆಳಗಾವಿ ತಹಸಿಲ್ದಾರರ ವಿರುದ್ಧ ಕ್ರಮ ಕೈಗಿಳ್ಳುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹ


ಬೆಳಗಾವಿ: ಬೆಳಗಾವಿಯ ಲೋಕಸಭೆ ಉಪಚುನಾವಣೆಗೆ ವೆಚ್ಚ ಮಾಡಿ ಬಾಕಿ ಉಳಿದ ಸರಕಾರದ ಹಣವನ್ನು ಮತ್ತು ದಾಖಲೆಗಳನ್ನು ತೆಗೆದುಕೊಂಡು ಹೋಗಿರುವ ಈ ಹಿಂದಿನ ಬೆಳಗಾವಿ ತಹಶಿಲ್ದಾರರು ಹಾಲಿ ದಾಂಡೇಲಿ ತಹಶೀಲ್ದಾರರ ಮೇಲೆ ಹಾಗೂ ಈ ವಿಷಯ ಗೊತ್ತಿದ್ದರು ಸರಕಾರಕ್ಕೆ ವರದಿ ನೀಡದ ಬೆಳಗಾವಿ ಹಾಲಿ ತಹಶೀಲ್ದಾರರ ಮೇಲೆ ಕ್ರಮ ಕೈಗೊಳ್ಳುವಂತ ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಈ ಕುರಿತು ತನಿಖೆ ನಡೆಸದಿದ್ದರೆ ಕಾನೂನು ಹೋರಾಟ ಮಾಡುವದಾಗಿ ಗಡಾದ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಗಡಾದ ಅವರು, ಕೇಂದ್ರ ಸಚಿವ ಸುರೇಶ ಅಂಗಡಿ ಅವರ ನಿಧನದ ಹಿನ್ನಲೆಯಲ್ಲಿ ತರವಾಗಿ ಬೆಳಗಾವಿ ಲೋಕಸಭಯಉಪಚುನಾವಣೆಯ ಸಮಯದಲ್ಲಿ ಚುನಾವಣೆಯ ವಚ್ಚಕ್ಕಾಗಿ ಬೆಳಗಾವಿ ತಹಶೀಲ್ದಾರರಿಗೆ ಪ್ರತಿ ಮತಗಟ್ಟೆಗೆ 30 ಸಾವಿರ ರೂಗಳಂತೆ 353 ಮತಗಟ್ಟೆಗಳಿಗೆ ಒಟ್ಟು 1,05,90,000 ರೂಗಳನ್ನು ದಿ: 12-04-2021ರಂದು ಜಿಲ್ಲಾಡಳಿತದಿಂದ ಬಿಡಗಡ ಮಾಡಲಾಗಿತ್ತು.

ಈ ಚುನಾವಣೆಯ ವೆಚ್ಚಕ್ಕಾಗಿ ಜಿಲ್ಲಾಡಳಿತದಿಂದ ಬಿಡುಗಡೆ ಮಾಡಿದ ಹಣವನ್ನು ಚುನಾವಣೆಯಸಮಯದಲ್ಲಿ ಬಳಕೆ ಮಾಡಲಾದ ಉದ್ದೇಶದ ವಿವರ ಹಾಗೂ ವಚ್ಚವಾದ ಒಟ್ಟು ಹಣದ ಮಾಹಿತಿ ನೀಡುವಂತ ದಿ. 05-072021ರಂದು ತಹಶೀಲ್ಯಾರರು ಬೆಳಗಾವಿ ಇವರಿಗೆ ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಮಾಹಿತಿಗೆ ಸಂಬಂಧಿಸಿದಂತೆ ದಿ. 26-07-2021ರಂದು ಲಿಖಿತ ಮಾಹಿತಿ ನೀಡಿರುವ ಬೆಳಗಾವಿ ತಹಶೀಲ್ದಾರರು “ಉಪಚುನಾವಣೆಯ ವೆಚ್ಚದ ದಾಖಲೆಗಳನ್ನು ಮತ್ತು ಉಳಿದಿದ್ದನಗದು ಮೊತ್ತವನ್ನು ಚುನಾವಣೆಯ ಸಮಯದಲ್ಲಿ ಕಾರ್ಯನಿರ್ವಹಿಸಿದ ದಾಂಡೇಲಿಯ ತಹಶೀಲ್ಯಾರರು ತೆಗೆದುಕೊಂಡು ಹೋಗಿರುವರು ಎಂದು ಲಿಖಿತ ರೂಪದಲ್ಲಿ ತಿಳಿಸಿದ್ದಲ್ಲದ ಈ ಕುರಿತು ಅವರಿಗೆ ಪತ್ರವನ್ನು ಸಹ ಬರದಿದ್ಯಾರ.

ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಬೆಳಗಾವಿ ಲೋಕಸಭೆಯ ಉಪಚುನಾವಣೆಗೆ ವೆಚ್ಚದ ಸಲುವಾಗಿ ಸರಕಾರ ನೀಡಿರುವ ಹಣದ ಲೆಕ್ಕ ಪತ್ರದ ವಿವರ ನೀಡದೇ ವಚ್ಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮತ್ತು ಬಾಕಿ ಉಳಿದ ಸರಕಾರದ ಹಣವನ್ನು ತೆಗೆದುಕೊಂಡು ಹೋಗಿರುವುದು ದಾಂಡೇಲಿ ತಹಶೀಲ್ದಾರರ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ. ಮತ್ತು 26-07-2021 ರಂದು ಇವರಿಗೆ ಪತ್ರ ಬರದಿದ್ದರೂ ಕೂಡಾ ಇದೂವರೆಗೂಅವರಿಂದ ಯಾವುದೇ ಪ್ರಕ್ರಿಯೆ ಬಾರದೇ ಇರುವದನ್ನು ನೋಡಿದರೆ ಇವರು ಸರಕಾರದ ಹಣವನ್ನು ತಿಂದು ಹಾಕಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಅದರಂತೆ ಚುನಾವಣೆಯ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರರು ವಚ್ಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮತ್ತು ಬಾಕಿ ಉಳಿದ ಸರಕಾರದ ಹಣವನ್ನು ತೆಗೆದುಕೊಂಡು ಹೋಗಿರುವುದು ಸದ್ಯ ಬೆಳಗಾವಿ ತಹಶೀಲ್ದಾರರಿಗೆ ಗೊತ್ತಿದ್ದರು ಕೂಡಾ ಈ ಬಗ್ಗೆ ಮೇಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ವರದಿ ನೀಡದೇ ಇರುವುದ ಕೂಡಾ ಬೆಳಗಾವಿಯ ತಹಶೀಲ್ಯಾರರ ಕರ್ತವ್ಯ ಲೋಪವೆಂದರೆ ತಪ್ಪಾಗಲಾರದು ಎಂದು ಭೀಮಪ್ಪ ಗಡಾದ ಅವರು ಹೇಳಿದ್ದಾರೆ.

ದಾಂಡೇಲಿ ತಹಶೀಲ್ಕಾರ ಇವರು ನಿಜವಾಗಿಯೂ ಕರ್ತವ್ಯಲೋಪ ಎಸಗಿದ್ದಲ್ಲಿ ಹಾಗೂ ವಿಷಯ ಗೊತ್ತಿದ್ದರು ಕೂಡಾ ಬೆಳಗಾವಿ ತಹಶೀಲ್ಯಾರರು ಸರಕಾರಕ್ಕೆ ವರದಿ ನೀಡದೇ ಭ್ರಷ್ಟಾಚಾರಕ್ಕೆ ಸಹಕರಿಸಿರುವುದರಿಂದ ಇವರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯವಿರುವುದು.ಕಾರಣ ದಾಖಲೆಗಳನ್ನು ಪರಿಶೀಲಿಸಿ ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭೀಮಪ್ಪ ಗಡಾದ ಸರಕಾರವನ್ನು ಒತ್ತಾಯಿಸಿದ್ಯಾರ.

 


Leave a Reply