Belagavi

ಅಕ್ರಮ ಮದ್ಯಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಡಳಿತಕ್ಕೆ ಮನವಿ


ಬೆಳಗಾವಿ: ಹಳೆ ಬೆಳಗಾವಿ ನಾಕಾ ಮತ್ತು ಬಿ. ಎಸ್.  ಯಡಿಯೂರಪ್ಪ ಮಾರ್ಗದ ಮದ್ಯದಂಗಡಿಗಳನ್ನು ಮುಚ್ಚಬೇಕು ಮತ್ತು ಅಕ್ರಮ ಮಾದಕ ದ್ರವ್ಯ  ಮಾರಾಟವನ್ನು ನಿಲ್ಲಿಸಬೇಕು ಎಂದು ಹಳೆ ಬೆಳಗಾವಿ ನಾಕಾ ಮತ್ತು ಬಿ.  ಎಸ್.  ಯಡಿಯೂರಪ್ಪ ಮಾರ್ಗದ ಜನತೆ ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿದರು.

ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅವರು ಜುನೆ ಬೆಳಗಾಂವ ನಾಕಾದಲ್ಲಿ ಹಲವು ವರ್ಷಗಳಿಂದ ಮದ್ಯದಂಗಡಿಗಳು ನಡೆಯುತ್ತಿವೆ., ಶ್ರೀ ಗಣಪತಿ ಮತ್ತು ಶ್ರೀ ಮಾರುತಿ ದೇವಸ್ಥಾನಗಳು ಇರುವುದಲ್ಲದೆ ಸಮೀಪದಲ್ಲಿಯೇ ಬಸ್ ನಿಲ್ದಾನವಿದೆ  ಆದ್ದರಿಂದ ಈ ಪ್ರದೇಶವು ಯಾವಾಗಲೂ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಂದ ಕೂಡಿರುತ್ತದೆ. ಹಳೇ ಬೆಳಗಾವಿ, ಹೊಸೂರು, ಖಾಸಬಾಗದ ನಾಗರಿಕರು ಸಹ ಹೆಚ್ಚಿನ ಸಂಖ್ಯೆಯ ತೋಟಗಳನ್ನು ಆಸುಪಾಸು ಹೊಂದಿದ್ದಾರೆ.  ಯಾಕೆಂದರೆ ಈ ಮದ್ಯದಂಗಡಿ ಮುಂದೆ ಕೆಲವರು ಮದ್ಯ ಸೇವಿಸಿ, ಅಶ್ಲೀಲ ಸನ್ನೆ ಮಾಡಿ, ಮಹಿಳೆಯರನ್ನು ಚುಡಾಯಿಸುತ್ತಾ, ಕೈ ಕುಲುಕುತ್ತಾ, ರಸ್ತೆಯಲ್ಲಿ ನಿಂತು ಸಣ್ಣ ಪುಟ್ಟ ಅನುಮಾನಗಳನ್ನು ಮೂಡಿಸುತ್ತಿದ್ದಾರೆ.

ಕೆಲವರು ಸಮೀಪದ ಜಮೀನಿನಲ್ಲಿ ಗಾಂಜಾ, ಮದ್ಯ ಸೇವನೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಮದ್ಯದ ಚೀಲ, ಬಾಟಲಿಗಳನ್ನು ಒಡೆದು ಹಾಕುವುದರಿಂದ ರೈತರು ಪರದಾಡುವಂತಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಹಾಗೂ ಹೆಚ್ಚಿನ ಅನಾಹುತ ಸಂಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆ ಕ್ರಮಕೈಗೊಳ್ಳಬೇಕಾಗಿದೆ.

ಬಿ. ಎಸ್.  ಯಡಿಯೂರಪ್ಪ ಮಾರ್ಗ ಹಳೇ ಬೆಳಗಾವಿ ನಾಕಾದಲ್ಲಿರುವ ಮದ್ಯದಂಗಡಿಗಳನ್ನು ಬಂದ್ ಮಾಡಿ, ಗಾಂಜಾ ನಿಷೇಧಿಸುವ ಮೂಲಕ ಇಲ್ಲಿನ ಜನರ ಬೇಡಿಕೆ ಈಡೇರಿಸುವಂತೆ ಕೋರಿ ಮಾದವಪೂರ ಹಾಗೂ ಜುನೆ ಬೆಳಗಾವಿಯ ಗ್ರಾಮಸ್ಥರು ಆಗ್ರಹಿಸಿ ಜಿಲ್ಲಾಡಲಿತಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮರಗಾಯಿ ಮಹಿಳಾ ಮಂಡಲ, ಕಲ್ಮೇಶ್ವರ ಮಹಿಳಾ ಮಂಡಲ, ರಾಮಲಿಂಗೇಶ್ವರ ಮಹಿಳಾ ಮಂಡಲ, ಕಲ್ಮೇಶ್ವರ ಜೀರ್ಣೋದ್ದಾರ ಟ್ರಸ್ಟ್ ಕಮಿಟಿ, ಧರ್ಮವೀರ ಸಾಂಬಾಜಿ ಯುವಕ ಮಂಡಲ, ಮಹಾವೀರ ಯುವಕ ಮಂಡಲ, ರಾಮಲಿಂಗ ಯುವಕ ಮಂಡಲ, ಗಣೇಶ ಯುವಕ ಮಂಡಲ, ಸಿದ್ಧಕಲಾ ಮಹಿಳಾ ಮಂಡಲ, ಗಣೇಶ ಮಹಿಳಾ ಮಂಡಲ, ಗಣೇಶ ಮಂದಿರ ಟ್ರಸ್ಟ್ ಕಮಿಟಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಮಂಡಲ, ಕ್ರಾಂತಿವೀರ ಯುವಕ ಮಂಡಲ ಹಾಗೂ ಮಹದೇವ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Leave a Reply