Belagavi

ಪಾಂಗುಳ ಗಲ್ಲಿ ದೇವಸ್ಥಾನ ಲೂಟಿ ಹೊಡೆದ ಖದೀಮರು


ಬೆಳಗಾವಿ:   ನಗರದ ಪಾಂಗುಳ ಗಲ್ಲಿಯಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರಕ್ಕೆ ಖದೀಮರು ಕಣ್ಣಾ ಜಾಕಿದ್ದು ಮಂದಿರದ ಬಾಗಿಲು ಮುರಿದು ಬೆಳ್ಳಿ ಮುಕುಟ ಕದ್ದಿರುವ ಘಟನೆ ಸೋಮವಾರ ಮದ್ಯರಾತ್ರಿ ನಡೆದಿದೆ. ಅರ್ಚಕರು ಎಂದಿನಂತೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರದ ಬಾಗಿಲು ಮುರಿದು ಒಳ ನುಗ್ಗಿದ ಖದೀಮರು ದೇವರ ಬೆಳ್ಳಿ ಮುಕುಟ ಕದ್ದಿದ್ದಾರೆ. ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಮುಕುಟ ಇದಾಗಿದ್ದು. ಈ ವೇಳೆ ದೇವರ ಮೂರ್ತಿಯನ್ನು ಹೊತ್ತೊಯ್ದಿರುವ ಕಳ್ಳರು ಮೂರ್ತಿ ಮೇಲೆ ಹಾಕಿದ್ದ ಬಟ್ಟೆಯನ್ನು ಅಲ್ಲಿಯೇ ಬೀಸಾಕಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭಾರತದಲ್ಲಿ ಇಂತಹ ಎರಡೇ ಮಂದಿರಗಳಿವೆ. ಆ ಪೈಕಿ ಉತ್ತರ ಭಾರತದಲ್ಲಿ ಇರುವುದು ಇದೊಂದೇ. ರಂಗಪಂಚಮಿಯಲ್ಲಿ ಶಾಪ ವಿಮೋಚನೆಗಾಗಿ ಜನರು ಇಲ್ಲಿ ಉರುಳುಸೇವೆ ಮಾಡುತ್ತಾರೆ.

ಕಳವಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಈ ಸ್ಥಳಕ್ಕೆ ಧಾವಿಸಿದ್ದಾರೆ. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಭಕ್ತರು ಆಗ್ರಹಿಸಿದ್ದಾರೆ.


Leave a Reply