Belagavi

ಸತತ ೪ನೇ ದಿನ ಖಾನಾಪೂರ ತಾಲೂಕಿನಲ್ಲಿ ಅಬ್ಬರದ ಪ್ರಚಾರ ನಡೆಸಿದ ಶಾಸಕ ಅನಿಲ ಬೆನಕೆ


ಬೆಳಗಾವಿ, : ದಿ ೦೭ ರಂದು ಖಾನಾಪೂರ ತಾಲೂಕಿನ ಶೀಂದೋಳಿ, ಮಾಡಿಗುಂಜಿ, ಲೋಂಡಾ/ಮೋಹಿಶೆಟ, ನಾಗರಗಾಳಿ, ಗೋಧೋಳಿ ಘಾಟಗಾಳಿ, ಕಾಪೋಲಿ ಹಾಗೂ ಸುತ್ತಮುತ್ತಲಿನ ಗ್ರಾಮಪಂಚಾಯತ ಸದಸ್ಯರು ಪಟ್ಟನಪಂಚಾಯತ ಸದಸ್ಯರೊಂದಿಗೆ ಶಾಸಕ ಅನಿಲ ಬೆನಕೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳ ತಾಲೂಕು ಪಂಚಾಯತಿ ಸದಸ್ಯರ ಜೊತೆ ಸಭೆ ನಡೆಸಿದ ಶಾಸಕ ಅನಿಲ ಬೆನಕೆ ಅವರು ಮಾತನಾಡುತ್ತಾ ಕೇಂದ್ರದಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಅವರ ಸತತ ಪ್ರಯತ್ನದಿಂದ ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ, ಕಿಸಾನ ಸನ್ಮಾನ ನಿಧಿಯಿಂದ ೧೦ ಕೋಟಿ ರೈತರಿಗೆ ಅವರ ಬ್ಯಾಂಕ ಖಾತೆಯಲ್ಲಿ ಹಣ ಜಮೆಯಗುತ್ತಿದ್ದು, ಮುಂಚೆ ಭಾರತದ ಕೃಷಿ ಬಜೆಟ ೨೦ ಸಾವಿರ ಕೋಟಿ ಇತ್ತು ಆದರೆ ನಮ್ಮ ಬಿಜೆಪಿ ಸರ್ಕಾರ ಬಂದ ನಂತರ ಈಗಿನ ಕೃಷಿ ಬಜೆಟ. ೧.೨೩ ಲಕ್ಷ ಕೋಟಿ ರೂಪಾಯಿ ಆಗಿದ್ದು ರೈತರ ಆರ್ಥಿಕ ಉನ್ನತಿಗೆ ಬಿಜೆಪಿ ಸರ್ಕಾರ ಸದಾಸಿದ್ದ ಹಾಗೂ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿತದೃಷ್ಟಿಯಿಂದ ನಿಮ್ಮ ಒಂದು ಕರೆಗೆ ಉಪಸ್ಥಿತನಿರುವ ಮಹಾಂತೇಶ ಕವಟಗಿಮಠ ಅವರಿಗೆ ಮತ ನೀಡಿ ಆಶೀರ್ವಧಿಸಬೇಕು ಎಂದು ಕೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಬಿಜೆಪಿ ಪದಾಧಿಕಾರಿಗಳು ಶೀಂದೋಳಿ, ಮಾಡಿಗುಂಜಿ, ಲೋಂಡಾ/ಮೋಹಿಶೆಟ, ನಾಗರಗಾಳಿ, ಗೋಧೋಳಿ ಘಾಟಗಾಳಿ, ಕಾಪೋಲಿ ಹಾಗೂ ಸುತ್ತಮುತ್ತಲಿನ ಗ್ರಾಮಪಂಚಾಯತ ಸದಸ್ಯರು ಸೇರಿದಂತೆ ಖಾನಾಪೂರ ತಾಲೂಕಿನ ಪಟ್ಟಣಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.


Leave a Reply