Belagavi

ರಮೇಶ್ ಪರ ಬಾಲಚಂದ್ರ ಜಾರಕಿಹೊಳಿ ಭರ್ಜರಿ ಬ್ಯಾಟಿಂಗ್


ಬೆಳಗಾವಿ: ರಮೇಶ ಜಾರಕಿಹೊಳಿ ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ನೀಡಿ ಸ್ವಂತ ಸಹೋದರನ್ನನ್ನೇ ಸೋಲಿಸಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಗೆಲುವಿಗೆ ಕಾರಣರಾಗಿದ್ದಾರೆ. ಹಾಗಾಗಿ ಇಲ್ಲಿರುವ ಯಾರೂ ರಮೇಶ್ ಜಾರಕಿಹೋಳಿ ಬಗ್ಗೆ ಯಾರೂ ಅನುಮಾನಪಡುವ ಅಗತ್ಯವಿಲ್ಲ ಎನ್ನುವ ಮೂಲಕ ರಮೇಶ ಪರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬ್ಯಾಟಿಂಗ್ ಬೀಸಿದ್ದಾರೆ.

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬೆಳಗಾವಿ ಹೊರ ವಲಯದ ಖಾಸಗಿ ಹೊಟೆಲ್ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಚುನಾವಣೆಗೆ ಎರಡು ದಿನ ಮಾತ್ರ ಬಾಕಿ ಉಳಿದಿದೆ. ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಮಾಧ್ಯಮಗಳಲ್ಲಿ ರಮೇಶ್ ಜಾರಕಿಹೊಳಿ ಬಗ್ಗೆ ವಿವಿಧ ರೀತಿ ಸುದ್ಧಿಗಳು ಬರುತ್ತಿವೆ. ರಮೇಶ್ ಜಾರಕಿಹೋಳಿ ಬಗ್ಗೆ ಇಲ್ಲಿರುವವರಿಗೆ ಯಾವುದೇ ಅನುಮಾನ ಬೇಡ. ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ನೀಡಿ ಸ್ವಂತ ಸಹೋದರನ್ನನ್ನೇ ಸೋಲಿಸಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಗೆಲುವಿಗೆ ಕಾರಣರಾಗಿದ್ದಾರೆ. ಹಾಗಾಗಿ ಇಲ್ಲಿರುವ ಯಾರೂ ರಮೇಶ್ ಜಾರಕಿಹೋಳಿ ಬಗ್ಗೆ ಯಾರೂ ಅನುಮಾನಪಡುವ ಅಗತ್ಯವಿಲ್ಲ. ನಾವೆಲ್ಲಾ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ಪ್ರಚಾರ ಮಾಡುತ್ತಿದ್ದೇವೆ ಬಿಜೆಪಿ ಗೆಲ್ಲಿಸಿ, ಕಾಂಗ್ರೆಸ್ ಸೋಲಿಸಿ ಎನ್ನುವುದು ನಮ್ಮ ಬಯಕೆಯಾಗಿದೆ ಮಹಾಂತೇಶ ಕವಟಗಿಮಠ ಚುನಾವಣೆಯಲ್ಲಿ ಗೆಲುವು ಸಾಧಿಸಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Leave a Reply