Belagavi


ಬೆಳಗಾವಿ: ಮಹಾಂತೇಶ್ ಕವಟಗಿಮಠರವರನ್ನು ಪ್ರಥಮ ಪ್ರಾಶಸ್ಥ್ಯದ ಮತವನ್ನು ಕೊಡಿಸಿ ಪರಿಷತ್ ಚುನಾವಣೆಯಲ್ಲಿ ಆಯ್ಕೆ ಮಾಡುವಂತೆ ಬೆಳಗಾವಿಯ ಶಾಸಕರು ಸಂಸದರು, ಸಚಿವರು ಹಾಗೂ ಮುಖಂಡರ ಸಭೆ ಮಾಡಲು ಬೆಳಗಾವಿಗೆ ಬಂದಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿನಾಂಕ 13ರಿಂದ ಬೆಳಗಾವಿಯಲ್ಲಿ ವಿಧಾನ ಸಭೆ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಸವರಾಜ್ ಹೊರಟ್ಟಿತವರು ಬೆಳಗಾವಿಗೆ ಬಂದು ಪೂರ್ಚಸಿದ್ಧತೆ ಕುರಿತಂತೆ ಜಿಲ್ಲಾಡಳಿತದೊಂದಿಗೆ ಚರ್ಚೆ ಮಾಡಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಧಿವೇಶನ ನಡೆಸಲು ಆಗಿರಲಿಲ್ಲ. ಕೋವಿಡ್ ನಿಯಮ ಪಾಲಿಸಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಎಂದರು.

ಇನ್ನು ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ಉಂಟಾದ ಹಾನಿಯ ಕುರಿತಂತೆ ಮಾತನಾಡಿದ ಅವರು, ಮಳೆಯಿಂದ ರೈತರ ಬೆಳೆ ಹಾಗೂ ಮನೆಗಳ ಹಾನಿಯಾಗಿದೆ. ಇದೂ ಸಹ ವಿಧಾನಸಭೆಯಲ್ಲಿ ಚರ್ಚೆ ಆಗಲಿ ಎನ್ನುವು ನಮ್ಮ ಆಶಯ. ನಿನ್ನೆ ವರೆಗೆ ರೈತರಿಗೆ 420 ಕೋಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ. ಪರ್ಯಾಯವಾಗಿ ಬೆಳೆ ಬೆಳೆಯುವ ಬಗ್ಗೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆ ನೀಡಲಾಗಿದೆ. ತೋಟಗಾರಿಕೆಯಾಗಿದೆ ಬೆಳೆ, ತರಕಾರಿ ಬೆಳೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಎಲ್ಲದಕ್ಕೂ ಪರಿಹಾರ ನೀಡುವ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದರು.

ಇನ್ನು ರಾಜ್ಯದ ಗ್ರಾಮ ಪಂಚಾಯತಿಗಳನ್ನು ಅಮೃತ ಯೋಜನೆಗೆ ಒಳಪಡಿಸುವ ಕುರಿತಂತೆ ಮಾತನಾಡಿದ ಅವರು, ಮುಂದಿನ ವರ್ಷ ಎಲ್ಲಾ ಪಂಚಾಯತಿಯನ್ನು ಅಮೃತ ಯೋಜನೆ ವ್ಯಾಪ್ತಿಗೆ ತರಲು ತೀರ್ಮಾನ ಮಾಡಿದ್ದೇವೆ. ವಸತಿ ರಹಿತರಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಗ್ರಾಪಂ ಪಂಚಾಯಿತಿಗೆ ಹೆಚ್ಚಿನ ಬಲ ನೀಡಲು ಪ್ರಯತ್ನ ಮಾಡುತ್ತೇವೆ. ಗ್ರಾಪಂಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲು ಸೂಚನೆ ನೀಡಲಾಗಿದೆ ಎಂದರು.

ಇನ್ನು ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವೇನು ಜೆಡಿಎಸ್ ಬೆಂಬಲ ಕೇಳಿಲ್ಲ. ಈ ಕುರಿತ ತೀರ್ಮಾನ ತೀರ್ಮಾನ ಜೆಡಿಎಸ್ ನಾಯಕರಿಗೆ ಬಿಟ್ಟಿದ್ದು. ಸ್ಪರ್ಧೆ ಮಾಡದಿರುವ ಕಡೆ ಬೆಂಬಲ ನೀಡುವಂತೆ ಯಡಿಯೂರಪ್ಪ ಮನವಿ ಮಾಡಿದ್ರು. ಜೆಡಿಎಸ್ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದರು.

ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ದುರ್ಬಲ ಮುಖ್ಯಮಂತ್ರಿ ಎಂಬ ಡಿಕೆಶಿವಕುಮಾರ್ ಹೇಳಿಕೆ ಉತ್ತರಿಸಿದ ಬೊಮ್ಮಾಯಿ ಡಿಕೆಶಿವಕುಮಾರ್ ನೀಡುವ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ ಎಂದ ಖಾರವಾಗಿ ಪ್ರತಿಕ್ರಿಯೆ ನೀಡಿದರು.


Leave a Reply