Belagavi

ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


ಬೆಳಗಾವಿ: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯವು ಶೈಕ್ಷಣಿಕ ಚಟುವಟಿಕೆಗಳ ಜೊತೆ-ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಗೈಯುತ್ತಾ ದಾಪುಗಾಲು ಹಾಕುತ್ತಿದೆ.
ಇತ್ತಿಚಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಿಯುಸಿ ವಿದ್ಯಾರ್ಥಿಗಳಿಗೆ ಸರಸ್ವತಿ ಪದವಿ ಪೂರ್ವ ಕಾಲೇಜು ಬೆಳಗಾವಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಚಿನ್ನದ ಪದಕಗಳನ್ನು ಪಡೆದು ರಾಜ್ಯ ಮಟ್ಟದ ಈಜು ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.
ಕುಮಾರ: ಸಮರ್ಥ ಮೋರೆ, ಪಿಯುಸಿ ಪ್ರಥಮ ವರ್ಷ, ಈತನು ೨೦೦ ಮೀಟರ್ ಬ್ಯಾಕ್ ಸ್ಟೊçಕ್, ೨೦೦ ಮೀಟರ್ ಇಂಡ್ವಿಜಿಯಲ್ ಮಿಡಿಲಿನ್, ೧೫೦೦ ಮೀಟರ್ ಫ್ರಿ ಸ್ಟೆöÊಲ್, ೪?೧೦೦ ರಿಲೆ, ೪?೧೦೦ ಇಂಡ್ವಿಜಿಯಲ್ ಮಿಡಿಲಿನ್ ರಿಲೆ ಈಜು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ೦೫ ಚಿನ್ನದ ಪದಕಗಳನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಕುಮಾರ: ಹರ್ಷ ಬಸರಿಕಟ್ಟಿ, ಪಿಯುಸಿ ದ್ವಿತೀಯ ವರ್ಷ, ಈತನು ೫೦ ಮೀಟರ್ ಬ್ಯಾಕ್ ಸ್ಟೊçÃಕ್, ೧೦೦ ಮೀಟರ್ ಬ್ಯಾಕ್ ಸ್ಟೊçÃಕ್, ೫೦ ಮೀಟರ್ ಬ್ರಸ್ಟ ಸ್ಟೊçÃಕ್, ೪?೧೦೦ ಫ್ರೀಸ್ಟೆöÊಲ್ ರಿಲೆ, ೪?೧೦೦ ಇಂಡ್ವಿಜಿಯಲ್ ಮಿಡಿಲಿನ್ ರಿಲೆ, ಈಜು ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಪಡೆದು ೦೫ ಚಿನ್ನದ ಪದಕಗಳನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಕುಮಾರಿ: ಕ್ರಿಜಾನಾ ಇರಾಣಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯು, ೧೦೦ ಮೀಟರ್ ಬ್ಯಾಕ್ ಸ್ಟೊçÃಕ್, ೨೦೦ ಮೀಟರ್ ಬ್ಯಾಕ್‌ಸ್ಟೊçÃಕ್ ೨೦೦ ಮೀಟರ್ ಬಟರಪ್ಲಾಯ, ೪?೧೦೦ ಫ್ರೀ ಸ್ಟೆçöÊಲ್ ರಿಲೆ, ೪?೧೦೦ ಇಂಡ್ವಿಜಿಯಲ್ ಮಿಡಲಿನ್ ರಿಲೆ ಈಜು ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಗಳಿಸಿ ೦೫ ಚಿನ್ನದ ಪದಕಗಳನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕುಮಾರ: ನೀರಜ ನಾಯಕ್, ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಯು ಯೋಗಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು, ಕುಮಾರಿ: ರಸಿಕಾ ಜಕ್ಕಣ, ಪಿಯುಸಿ ಪ್ರಥಮರ್ಷದ ವಿದ್ಯಾರ್ಥಿನಿಯು ಫೈಟ್ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿಪದಕವನ್ನು, ಗಳಿಸಿ ಪ್ರಥಮಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ. ವ್ಹಿ.ಸಿ. ಕಾಮಗೋಳ, ಕೆ.ಎಲ್.ಇ. ಸಂಸ್ಥೆಯ ಆಜೀವಸದಸ್ಯರಾದ ಪ್ರೊ. ಎಸ್.ಜಿ. ನಂಜಪ್ಪನವರ ಅವರು, ಉಪ ಪ್ರಾಚಾರ್ಯರಾದ ಡಾ. ಸಂದೀಪ ಜವಳಿ ಅವರು, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.


Leave a Reply