Koppal

ಕೊಪ್ಪಳದ -ಬೇಟಗೇರಿ,ಅಳವಂಡಿ ಮಾರ್ಗ ಮದ್ಯೆ ವಿದುತ್ ವ್ಯತ್ಯ


ಕೊಪ್ಪಳ:ನಾಳೆ 8-12-2021 ರಂದು 110/11 ಕೆವಿ ಸ್ಟೇಷನ್ ಬೇಟಗೇರಿ,ಹಾಗೂ 33/11kv ಸ್ಟೇಷನ್ ಅಳವಂಡಿ ,ಗದಗ -ಮುಂಡರಗಿ 110 ಕೆ.ವಿ.ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಮುಂಜಾನೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಬೇಟಗೇರಿ ಮತ್ತು ಅಳವಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗುತ್ತದೆ. ಸದರಿ ಮೇಲಿನ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ ಕಾರ್ಯಗಳನ್ನು ಮಾಡಬಾರದೆಂದು, ಈ ಮೂಲಕ ಕೋರಲಾಗಿದೆ.ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ.ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ)
ಕಾ ಮತ್ತು ಪಾ ಉಪ-ವಿಭಾಗ ಜೆಸ್ಕಾಂ ,ಕೊಪ್ಪಳರವರು ಮಾದ್ಯಮದವರಿಗೆ ಮಾಹಿತಿನೀಡಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply