Belagavi

ಭೀಕರ ಅಪಘಾತದಲ್ಲಿ ಬೆಳಗಾವಿಯ ಬಾಡಿ ಬಿಲ್ಡರ್ ಸಾವು


ಬೆಳಗಾವಿ : ಚೋರ್ಲಾ ಘಾಟ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೆಳಗಾವಿಯ ಬಾಡಿಬಿಲ್ಡರ್ ಮುರಳಿ ಅಶೋಕ್ ಭಿಲಾರೆ(27) ಸ್ಥಳದಲ್ಲಿಯೇ ಮೃತರಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಡಗಾವಿಯ ವಝೆಗಲ್ಲಿಯ ಖ್ಯಾತ ಬಾಡಿಬಿಲ್ಡರ್ ಮುರಳಿ ಅಶೋಕ್ ಭಿಲಾರೆ ಮೃತಪಟ್ಟಿದ್ದಾರೆ. ಜಾಂಬೋಟಿ ರಸ್ತೆ ಮಾರ್ಗವಾಗಿ ಸಂಚರಿಸುವ ವೇಳೆ ಬೈಕ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿತ್ತು. ಈ ವೇಳೆ ಮುರುಳಿ ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದ.

ಮುರುಳಿ ಬಾಡಿಬಿಲ್ಡರ್ ಸ್ಪರ್ಧೆಯಲ್ಲಿ ಅಪಾರ ಕೀರ್ತಿ ಗಳಿಸಿದ್ದರು. ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಇನ್ನು ಹೆಚ್ಚಿನ ಸಾಧನೆ ಮಾಡಬೇಕಿದ್ದ ಯುವಕ ಈ ರೀತಿ ದುರ್ಮರಣಕ್ಕೆ ತುತ್ತಾಗಿರುವುದು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ


Leave a Reply