Belagavi

ಬೆಳಗಾವಿಯಲ್ಲಿ ಸಂಚಾರಿ ಪೋಲಿಸ್ ಮತ್ತು ಬಸ್ ಸಂಚಾಲಕನ ನಡುವೆ ಹೊಡೆದಾಟ


ಬೆಳಗಾವಿ: ಸಂಚಾರಿ ಪೊಲೀಸ್ ಪೇದೆ ಹಾಗೂ ಕೆಎಸ್.ಆರ್.ಟಿಸಿ ಬಸ್ ನಿರ್ವಾಹಕ ಪರಸ್ಪರ ಹೊಡೆದಾಡಿದ ಘಟನೆ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಬುದುವಾರ ಬೆಳಗಿನ ಜಾವ ನಡೆದಿದೆ

ಯಳ್ಳೂರಿನಿಂದ ಕಾಲೇಜು ರಸ್ತೆಯ ಮಾರ್ಗವಾಗಿ ಬರುತ್ತಿದ್ದ ಬಸ್ ಚನ್ನಮ್ಮ ವೃತ್ತದಲ್ಲಿ ಬಸ್ ನಿಲ್ಲಿಸಿದ್ದ ಈ ಸಂದರ್ಭದಲ್ಲಿ ಹಿಂದುಗಡೆಯಿಂದ ಬರುತ್ತಿದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಸಂಚಾರ ಪೊಲೀಸ್ ಬಸ್ ತೆರವುಗೊಳಿಸುವಂತೆ ಸೂಚನೆ ನೀಡಿದರೂ ಬಸ್ ಚಾಲಕ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸ್ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಕಂಡಕ್ಟರ್ ಬಸ್ ನಿಂದ ಕೆಳಗೆ ಇಳಿದು ಸಾರ್ವಜನಿಕರ ಎದುರೇ ಸಂಚಾರ ಪೊಲೀಸನ ಕೆನ್ನೆಗೆ ಹೊಡೆದ ಪರಿಣಾಮ ಮುಜುಗರ ತಪ್ಪಿಸಿಕೊಳ್ಳಲು ಸಂಚಾರ ಪೊಲೀಸ ಸಹ ಸ್ಥಳದಲ್ಲೇ ನಿರ್ವಾಹಕನಿಗೆ ತಕ್ಕ ಪ್ರತ್ಯುತ್ತರ ನೀಡಿದ. ಇದರಿಂದ ಕೆಲ ಕಾಲ ಚನ್ನಮ್ಮ ವೃತ್ತದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪರಸ್ಪರರ ನಡುವೆ ವಾಗ್ವಾದ ಮುಂದುವರೆದಾಗ ಸ್ಥಳೀಯರು ಆಗಮಿಸಿ ಇಬ್ಬರಿಗೂ ಬುದ್ಧಿವಾದ ಹೇಳಿದ ನಂತರ ಪೊಲೀಸ್ ಪೇದೆ ಮತ್ತು ಬಸ್ ಚಾಲಕ ಅಲ್ಲಿಂದ ಮುಂದೆ ಸಾಗಿದ್ದಾರೆ.


Leave a Reply