Belagavi

ಜಾರಕಿಹೊಳಿ ಸಹೋದರರು ಕುರುಬ ಸಮಾಜವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ: ಅರವಿಂದ ದಳವಾಯಿ


ಬೆಳಗಾವಿ: ಅರಬಾವಿಯಲ್ಲಿ ಕಾಂಗ್ರೆಸ್ ಬೆಳಯಬಾರದು ಎಂದು ಬಾಲಚಂದ್ರ ಜಾರಕಿಹೊಳಿ ಪ್ರಭಾವ ಬೆಳೆಸಿ ನಮ್ಮ ಸಮಾಜವನ್ನು ತುಳಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಗಂಭೀರವಾಗಿ ಆರೋಪಿಸಿದ್ದಾರೆ.

ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ನಾನು ಕುರುಬ ಸಮಾಜದಲ್ಲಿಯೇ ಹುಟ್ಟಿದವನು ಜಿಲ್ಲೆಯಲ್ಲಿ ಕುರುಬ ಸಮಾಜವನ್ನು ಸಂಪೂರ್ಣವಾಗಿ ತುಳಿಯುತ್ತಿರುವುದು ಜಾರಕಿಹೊಳಿ ಸಹೋದರರು ಎಂದು ಆರೋಪ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ವಿಪಕ್ಷ ನಾಯಕ ಸಿದ್ದರಾಮಯ್ಯರ ಬಗ್ಗೆ ಇತ್ತೀಚಿನ ದಿನಮಾನಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದಿರುವುದು ಖಂಡನೀಯ. ಜಾರಕಿಹೊಳಿ ಕುಟುಂಬಕ್ಕೆ ಸಿದ್ದರಾಮಯ್ಯನವರಿಂದ ಬಹಳಷ್ಟು ಉಪಯೋಗವಾಗಿದೆ. ಅವರಿಂದಲೇ ಬೆಳದಿರುವ ಅವರು ಸಿದ್ದರಾಮಯ್ಯನವರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದರು.


Leave a Reply