Belagavi

ದೇವಸ್ಥಾನಗಳು ಧಾರ್ಮಿಕ, ಸಾಂಸ್ಕೃತಿಕ ಶೃದ್ಧಾ ಕೇಂದ್ರಗಳು ಸಾರಾಪುರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ರಮೇಶ ಕತ್ತಿ ಅಭಿಮತ


ಹುಕ್ಕೇರಿ : ದೇವಸ್ಥಾನಗಳು ಭಾರತ ದೇಶದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಶೃದ್ಧಾ ಕೇಂದ್ರಗಳು ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಸಾರಾಪುರ ಗ್ರಾಮದಲ್ಲಿ ಬುಧವಾರ ಮಹಾಕಾಳಿ ದೇವಿಯ ನೂತನ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಆಧ್ಯಾತ್ಮಿಕ ತಳಹದಿಯಿಂದಲೇ ಭಾರತ ಸದೃಢ, ಸಶಕ್ತ ರಾಷ್ಟçವಾಗಿ ಹೊರಹೊಮ್ಮಿದೆ ಎಂದರು.
ಮಾನವನ ಜೀವನದಲ್ಲಿ ಕಲೆ, ಸಾಹಿತ್ಯ, ಸಂಸ್ಕಾರ, ಸಂಸ್ಕೃತಿಗಳನ್ನು ರೂಢಿಸಿಕೊಂಡಾಗ ನಮ್ಮ ಬದುಕಿನ ಸಾರ್ಥಕತೆಗೆ ಭದ್ರವಾದ ಬುನಾದಿ ಆಗುತ್ತದೆ. ಪ್ರಸ್ತುತ ವಾತಾವರಣದಲ್ಲಿ ಮಾನವೀಯ ಮೌಲ್ಯಗಳನ್ನು ಅಳಡಿಸಿಕೊಳ್ಳುವ ಅಗತ್ಯವಿದೆ. ಮಾನವನ ಬದುಕು ಕೇವಲ ಹೊಟ್ಟೆಪಾಡಿಗಾಗಿ ಸೀಮಿತವಾಗದೇ ಸಾಮಾಜಿಕ ಕಳಕಳಿಯ ಸೇವಾ ಮನೋಭಾವದ ಸಾಂಸ್ಕೃತಿಕ ಚಟುವಟಿಕೆಗಳಿಂದ ಜೀವನಕ್ಕೆ ಪರಿಪೂರ್ಣತೆ ಬರುತ್ತದೆ ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿದ್ದ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕತೆಗೆ ವಿಶೇಷ ಸ್ಥಾನವಿದೆ. ಮನುಷ್ಯನ ಮನಸ್ಸು ಚಂಚಲ ಸ್ವಭಾವದಾಗಿದ್ದು ಪ್ರತಿಯೊಬ್ಬರು ಸದ್ಬಾವನಾ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡರೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಆಧ್ಯಾತ್ಮಿಕತೆಯಲ್ಲಿ ಅಡಗಿದೆ ಎಂದರು.
ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೋಡಿ ಚರಂತಿಮಠದ ಸಂಪಾದನಾ ಸ್ವಾಮೀಜಿ, ಹತ್ತರಗಿ ಕಾರಿಮಠದ ಗುರುಸಿದ್ಧ ಸ್ವಾಮೀಜಿ, ಉಳ್ಳಾಗಡ್ಡಿ ಖಾನಾಪುರ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಬ್ಬೂರ ಗೌರಿಶಂಕರ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಬೆಳವಿ-ಸಾರಾಪುರ ಸಿದ್ಧರೂಢ ಮಠದ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖಂಡರಾದ ಕೆ.ಜಿ.ಪಾಟೀಲ, ಸಿದ್ಧಪ್ಪ ಮದಕರಿ, ಎಸ್.ಕೆ.ಕಾಮಗೌಡ, ನಿಂಗಪ್ಪಾ ಪೂಜೇರಿ, ಎಸ್.ಎಂ.ಪಾಟೀಲ, ಪಾರೇಶ ಬೆಳವಿ, ಗುರುಪಾದಪ್ಪಾ ಸಾರಾಪುರೆ, ಶಂಕರ ಬಡಗಾಂವಿ, ಚಿದಾನಂದ ಕಾಮಗೌಡ, ಸತ್ಯಪ್ಪಾ ಹಾಲಟ್ಟಿ, ಯಲಪ್ಪಾ ಡಪ್ಪರಿ, ಪುಟ್ಟು ಚೌಗಲಾ, ಸುರೇಶ ಹೆಬ್ಬಾಳ, ರವಿ ಕಾಂಬಳೆ, ದೇವಪ್ಪಾ ಕಾಮಗೌಡ, ಸಂತೋಷ ಹಟ್ಟಿ, ಅಪ್ಪಾಸಾಹೇಬ ಕಾಂಬಳೆ, ಬಸವರಾಜ ಹಾಲಟ್ಟಿ, ಮಲ್ಲಪ್ಪಾ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.
ಶಂಕರ ಕಾಮಗೌಡ ನಿರೂಪಿಸಿದರು. ಈಶ್ವರ ಕಮ್ಮಾರ ಸ್ವಾಗತಿಸಿದರು. ಹುಬ್ಬಳ್ಳಿ ಮುಕುಂದಾಚಾರ್ಯ ಗುರುಗಳು, ಮೈಸೂರು ದಯಾನಂದ ಶರ್ಮಾ ಹಾಗೂ ಪುರೋಹಿತರ ನೇತೃತ್ವದಲ್ಲಿ ಹೋಮ-ಹವನ ನಡೆಯಿತು. ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


Leave a Reply