Belagavi

ಶಾಖಾ ಮೂರುಸಾವಿರಮಠದಲ್ಲಿ ಹನುಮ ಮಾಲಾಧಾರಣೆ ‘ಹನುಮನ ಶಕ್ತಿ ಅಘಾದವಾದದ್ದು’ ಪ್ರಭು£Ãಲಕಂಠ ಶ್ರೀ


ಬೈಲಹೊಂಗಲ ೮: ‘ ಅಯೋಧ್ಯಾ ಪ್ರಭು ಶ್ರೀರಾಮನ ಪರಮ ಭಕ್ತ, ಶಿಷ್ಯ, ಆರಾಧಕ ಶ್ರೀಹನುಮನ ಶಕ್ತಿ ಅಘಾದವಾಗಿದೆ. ಶ್ರೀಹನುಮನ ಜಪ, ತಪ, ಪೂಜೆಯಿಂದ ಪುಣ್ಯ ಪ್ರಾಪ್ತಿಯಾಗಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ’ ಎಂದು ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭು£Ãಲಕಂಠ ಸ್ವಾಮೀಜಿ ಹೇಳಿದರು.
ಪಟ್ಟಣದ ಶಾಖಾ ಮೂರುಸಾವಿರಮಠದ ಸಭಾ ಭವನದಲ್ಲಿ ವಿಶ್ವಹಿಂದೂ ಪರಿಷದ್, ಭಜರಂಗದಳ ತಾಲ್ಲೂಕು ಘಟಕದಿಂದ ಸೋಮವಾರ ನಡೆದ ಹನುಮ ಮಾಲಾ ಧಾರಣೆ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿದರು.
‘ಪ್ರಥಮ ಭಾರಿಗೆ ಶ್ರೀಮಠದಲ್ಲಿ ಹನುಮನ ಮಾಲಾಧಾರಿಗಳು ಸ£್ನಧಿ ಮಾಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಮಾಲಾಧಾರಿಗಳು ಶಿಸ್ತು, ಸಮಯ ಪ್ರಜ್ಙೆ ಬೆಳೆಸಿಕೊಂಡು ಶಾಸ್ರೊ÷್ತÃಸ್ತರವಾಗಿ ಪೂಜೆಯಲ್ಲಿ ತೊಡಗಿಸಿಕೊಳ್ಳಬೇಕು. ಹಿಂದೂ ಸನಾತನ ಧರ್ಮದ ಆಚಾರ, ವಿಚಾರ, ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಧರ್ಮ ಸ್ಥಾಪನೆ ಕಾರ್ಯ £ರಂತರವಾಗಿ ಮುನ್ನಡೆಸಿಕೊಂಡು ಹೋಗಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಯೂರುವಂತೆ ಮಾಡಬೇಕು’ ಎಂದರು.
ವಿಶ್ವಹಿAದೂ ಪರಿಷದ್ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಮಾತನಾಡಿ, ‘ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಬೆಳೆಸುವುದೇ ಸಂಘಟನೆ ಮುಖ್ಯ ಉದ್ದೇಶವಾಗಿದೆ. ಹನುಮನ ಮಾಲೆ ಧರಿಸಿದ ಭಜರಂಗಿಗಳು ಈ £ಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಶ್ರೀರಾಮ, ಹನುಮನ ಸೇವೆಯನ್ನು £ಸ್ವಾರ್ಥ ಮನೋಭಾವದಿಂದ ಮಾಡಿ ಧರ್ಮದ ಕಾರ್ಯಕ್ಕೆ ಕೊಡುಗೆ £Ãಡಬೇಕು’ ಎಂದರು. ತಾಲ್ಲೂಕು ಕಾರ್ಯದರ್ಶಿ ಅಶೋಕ ಸವದತ್ತಿ, ಮಲ್ಲಿಕಾರ್ಜುನ ಏಣಗಿಮಠ, ಗೋರಕ್ಷಾ ಪ್ರಮುಖ ಕುಮಾರ ಹೂಗಾರ,ಭಜರಂಗದಳ ನಗರ ಸಂಯೋಜಕ ರವಿ ಹುಲಕುಂದ, ಬಸವರಾಜ ಅಂಗಡಿ, ವಿಜಯಕುಮಾರ ಯಮ್ಮಿ, ಗಂಗಾಧರ ದೊಡಗೌಡರ, ಚೇತನ ನೇಸರಗಿ, ಮಂಜುನಾಥ ತಲ್ಲೂರ, ಕಿರಣ್ ಹಂಜಿ, ಮಹೇಶ ಹೋಲಿ, ವಿಠ್ಠಲ ಬೆನಚಮರಡಿ,ಶಿವು ತೊಲಗಿ, ಗೌಡಪ್ಪಾ ಹೊಸಮ£, ಸುರೇಶ ಮಸಗುಂಪಿ, ಯಲ್ಲಪ್ಪಾ ಕಿತ್ತೂರ, ಭೀಮಶಿ ಸುಂಬಲಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply